ಲಂಡನ್: ಜಾಗತಿಕವಾಗಿ ಯಶಸ್ವಿ ಸ್ಟಾರ್ಟ್ಅಪ್ ನಿರ್ಮಿಸಲು ಬೆಂಗಳೂರು, ದೆಹಲಿ ಮತ್ತು ಮುಂಬೈ ಗುರುವಾರ ವಿಶ್ವದ ಅತ್ಯಂತ ಅನುಕೂಲಕರ ಪರಿಸರ ವ್ಯವಸ್ಥೆಗಳಲ್ಲಿ ಅಗ್ರ 40 ಒಳಗೆ ಸ್ಥಾನ ಪಡೆದಿವೆ.
ಸ್ಟಾರ್ಟ್ಅಪ್ ಜಿನೊಮ್ನ ಗ್ಲೋಬಲ್ ಸ್ಟಾರ್ಟ್ಅಪ್ ಇಕೋಸಿಸ್ಟಮ್ ರಿಪೋರ್ಟ್ 2020'ರಲ್ಲಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಿಂದ ಅಗ್ರ ಸ್ಥಾನ ಪಡೆದಿದೆ. ಈ ಶ್ರೇಯಾಂಕದಲ್ಲಿ ಬೆಂಗಳೂರು 26 ಮತ್ತು ದೆಹಲಿ 36ನೇ ಸ್ಥಾನದಲ್ಲಿದ್ದು, ಮುಂಬೈ ಸಮಾನಾಂತರ ಟಾಪ್ ಎಮರ್ಜಿಂಗ್ ಇಕೋಸಿಸ್ಟಮ್ಸ್ ಶ್ರೇಯಾಂಕದಲ್ಲಿದೆ.
ಸ್ಟಾರ್ಟ್ಅಪ್ ಜೀನೋಮ್ ವರದಿಯು ವಿಶ್ವದಾದ್ಯಂತದ ನಗರಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಿದೆ. ಆರಂಭಿಕ ಹಂತದ ಸ್ಟಾರ್ಟ್ಅಪ್ ಉದ್ಯಮಗಳು ಜಾಗತಿಕ ಯಶಸ್ಸನ್ನು ನಿರ್ಮಿಸುವಲ್ಲಿ ಉತ್ತಮ ವೇದಿಕೆ ಹೊಂದಿವೆ.
ಉನ್ನತ ಪರಿಸರ ವ್ಯವಸ್ಥೆಗಳ ಪಟ್ಟಿಯಲ್ಲಿ ದೆಹಲಿ, ಬೆಂಗಳೂರು ನಗರಗಳು ಭಾರತವನ್ನು ಪ್ರತಿನಿಧಿಸುತ್ತವೆ ಎಂದು ಕ್ಯಾಲಿಫೋರ್ನಿಯಾ ಪ್ರಧಾನ ಕಚೇರಿಯ ಸ್ಟಾರ್ಟ್ಅಪ್ ಜಿನೊಮ್ ತನ್ನ ವರದಿಯಲ್ಲಿ ತಿಳಿಸಿದೆ.
ಬೆಂಗಳೂರು ಧನಸಹಾಯಕ್ಕೆ ಹೆಚ್ಚಿನ ಪ್ರವೇಶಾತಿ ನೀಡಲು ನಿಂತಿದೆ. ವಿಶ್ಲೇಷಣೆಯಲ್ಲಿ ಪೇಟೆಂಟ್ ರಚನೆಯ ಪ್ರಮಾಣ ಮತ್ತು ಸಂಕೀರ್ಣತೆಗೆ ದೆಹಲಿ ಉತ್ತಮ ಸ್ಥಾನದಲ್ಲಿದೆ. ಇದರಲ್ಲಿ ಲಂಡನ್ ಮತ್ತು ನ್ಯೂಯಾರ್ಕ್ ಎರಡನೇ ಸ್ಥಾನದಲ್ಲಿದೆ ಎಂದಿದೆ.
ಬಂಡವಾಳ, ಹೂಡಿಕೆ ಮತ್ತು ಜಾಗತಿಕ ಪ್ರತಿಭೆಗಳಿಗೆ ಪ್ರವೇಶವು ಲಂಡನ್‌ನ ಆರನೇ ಸ್ಥಾನಕ್ಕೆ ಏರಿತು. 2012ರಲ್ಲಿ ಪ್ರಥಮ ಶ್ರೇಯಾಂಕ ವರದಿಯನ್ನು ಬಿಡುಗಡೆ ಮಾಡಿತ್ತು.