ETV Bharat / business

ನನ್ನ 6,200 ಕೋಟಿ ರೂ.ಸಾಲಕ್ಕೆ 14,000 ಕೋಟಿ ರೂ.ಮೌಲ್ಯದ ಆಸ್ತಿ ವಶ: ವಿಜಯ್ ಮಲ್ಯ ಅಸಮಾಧಾನ - ಜಾರಿ ನಿರ್ದೇಶನಾಲಯ

ನಾನು ಮಾಡಿರುವ 6,200 ಕೋಟಿ ರೂ ಸಾಲಕ್ಕಾಗಿ ಸರ್ಕಾರದ ಬ್ಯಾಂಕುಗಳ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ನನ್ನ 14,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ದಿವಾಳಿಯೆಂದು ಘೋಷಿಸಿಲ್ಪಟ್ಟಿರುವ ಉದ್ಯಮಿ ವಿಜಯ್‌ ಮಲ್ಯ ಆರೋಪಿಸಿದ್ದಾರೆ.

Attaching 140 billion assets over 62 billion debt incredible: Mallya on being declared bankrupt
6,200 ಕೋಟಿ ರೂ.ಸಾಲಕ್ಕಾಗಿ 14,000 ಕೋಟಿ ರೂ.ಮೌಲ್ಯದ ಆಸ್ತಿ ವಶ - ವಿಜಯ್ ಮಲ್ಯ ಆರೋಪ
author img

By

Published : Jul 27, 2021, 5:10 PM IST

ನವದೆಹಲಿ: ಭಾರತೀಯ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮ ವಿಜಯ್‌ ಮಲ್ಯ ಅವರನ್ನು ಬ್ರಿಟನ್‌ ನ್ಯಾಯಾಲಯ 'ದಿವಾಳಿ'ಯೆಂದು ಘೋಷಿಸಿದ ಬೆನ್ನಲ್ಲೇ, ಸಾಲಗಾರರು ನನ್ನನ್ನು ದಿವಾಳಿಯಾಗಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ್ದು, 6,200 ಕೋಟಿ ರೂ ಸಾಲಕ್ಕಾಗಿ ಸರ್ಕಾರದ ಬ್ಯಾಂಕುಗಳ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ನನ್ನ 14,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ED attach my assets worth 14K crores at behest of Govt Banks against debt of 6.2K crores.They restore assets to Banks who recover 9K crores in cash and retain security over 5K crores more.Banks ask Court to make me Bankrupt as they may have to return money to the ED. Incredible.

    — Vijay Mallya (@TheVijayMallya) July 26, 2021 " class="align-text-top noRightClick twitterSection" data=" ">

ಜಾರಿ ನಿರ್ದೇಶನಾಲಯ(ಇಡಿ)ಗೆ 9 ಸಾವಿರ ಕೋಟಿ ರೂ ಸಾಲದ ಹಣವನ್ನು ಮರುಪಡೆಯುವ ಹಾಗೂ 5 ಸಾವಿರ ಕೋಟಿಗೂ ಅಧಿಕ ಭದ್ರತೆಯನ್ನು ಉಳಿಸಿಕೊಳ್ಳುತ್ತವೆ. ಬ್ಯಾಂಕುಗಳು ನನ್ನನ್ನು ದಿವಾಳಿಯಾಗುವಂತೆ ನ್ಯಾಯಾಲಯವನ್ನು ಕೇಳುತ್ತವೆ. ಏಕೆಂದರೆ ಅವರು ಹಣವನ್ನು ಇಡಿಗೆ ಹಿಂದಿರುಗಿಸಬೇಕಾಗಬಹುದು ಎಂದು ಮಲ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಲ್ಯ ವಿರುದ್ಧ ದಿವಾಳಿತನದ ಆದೇಶಕ್ಕೆ ಒತ್ತಾಯ: ಲಂಡನ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ಬ್ಯಾಂಕ್​ ಒಕ್ಕೂಟ

ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಿಸುವ ತೀರ್ಪನ್ನು ಯುಕೆ ಹೈಕೋರ್ಟ್‌ ಅಂಗೀಕರಿಸಿದೆ ಎಂದು ಯುಕೆ ಹೈಕೋರ್ಟ್‌ನ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿತ್ತು. ಇದು ಭಾರತೀಯ ಬ್ಯಾಂಕುಗಳ ಒಕ್ಕೂಟಕ್ಕ ಸಿಕ್ಕ ಒಂದು ದೊಡ್ಡ ವಿಜಯವೆಂದು ಪರಿಗಣಿಸಲಾಗುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ 13 ಬ್ಯಾಂಕುಗಳ ಒಕ್ಕೂಟ, ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ನಿಂದ ಬರಬೇಕಾದ ಸಾಲವನ್ನು ಮರುಪಾವತಿ ಮಾಡುವ ಉದ್ದೇಶದಿಂದ ವಿಶ್ಯಾದ್ಯಂತ ಇರುವ ಮಲ್ಯ ಅವರ ಆಸ್ತಿಗಳನ್ನು ಹಾರಾಜು ಮೂಲಕ ನಗದೀಕರಿಸಿಕೊಳ್ಳುವ ಆದೇಶವನ್ನು ಅನುಸರಿಸಬಹುದು. ನ್ಯಾಯಾಲಯ ನೀಡಿರುವ ದಿವಾಳಿತನದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಯಾವುದೇ ಹಕ್ಕನ್ನು ಮಲ್ಯ ಅವರಿಗೆ ನಿರಾಕರಿಸಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.