ETV Bharat / business

ಆ್ಯಪಲ್ ಪೂರೈಕೆ ಸರಪಳಿಯಿಂದ ಭಾರತದಲ್ಲಿ 20,000 ಉದ್ಯೋಗ ಸೃಷ್ಟಿ: ವರದಿ - ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ

ಆ್ಯಪಲ್ ಫೋನ್​ಗಳ ತಯಾರಕರು ತಮ್ಮ ಪಿಎಲ್ಐ ಅರ್ಜಿಯಲ್ಲಿ ವಾಗ್ದಾನ ಮಾಡಿದ ತಮ್ಮ ನೇಮಕಾತಿ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದರೆ. ಪ್ರತಿಯೊಬ್ಬರೂ 2022ರ ಮಾರ್ಚ್ ಅಂತ್ಯದ ವೇಳೆಗೆ ತಮ್ಮ ಭಾರತೀಯ ಕಾರ್ಯಾಚರಣೆಗೆ 23,000 ಜನರನ್ನು ನೇಮಿಸಿಕೊಳ್ಳಲಿದ್ದಾರೆ ಎಂದು ಡಿಜಿಟೈಮ್ಸ್ ಏಷ್ಯಾ ವರದಿ ಹೇಳಿದೆ.

Apple
Apple
author img

By

Published : Jun 11, 2021, 7:08 PM IST

ನವದೆಹಲಿ: ಆ್ಯಪಲ್ ಪೂರೈಕೆ ಸರಪಳಿಯ ಕಾರ್ಯಾಚರಣೆಯು ಭಾರತಕ್ಕೆ ವರ್ಗಾವಣೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ ಸುಮಾರು 20,000 ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ. ಡಿಜಿಟೈಮ್ಸ್ ಏಷ್ಯಾದ ವರದಿಯ ಪ್ರಕಾರ, ಆ್ಯಪಲ್​ನ ಪೂರೈಕೆದಾರರಾದ ಫಾಕ್ಸ್​ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಭಾರತದ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಅಡಿ ಸಬ್ಸಿಡಿ ಕಾರ್ಯಕ್ರಮಕ್ಕೆ ಪ್ರವೇಶಿಸಲು ಅರ್ಜಿ ಸಲ್ಲಿಸಿದಾಗ ನಿರ್ದಿಷ್ಟ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬದ್ಧರಾಗಿವೆ ಎಂದು ವಾಗ್ದಾನ ಮಾಡಿದ್ದವು.

ಈ ತಯಾರಕರು ತಮ್ಮ ಪಿಎಲ್ಐ ಅರ್ಜಿಯಲ್ಲಿ ವಾಗ್ದಾನ ಮಾಡಿದ ತಮ್ಮ ನೇಮಕಾತಿ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದರೆ. ಪ್ರತಿಯೊಬ್ಬರೂ 2022ರ ಮಾರ್ಚ್ ಅಂತ್ಯದ ವೇಳೆಗೆ ತಮ್ಮ ಭಾರತೀಯ ಕಾರ್ಯಾಚರಣೆಗೆ 23,000 ಜನರನ್ನು ನೇಮಿಸಿಕೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.

ಓದಿ: ನಾಳೆ GST ಮಂಡಳಿ ಸಭೆ: ಕೋವಿಡ್​ ಸಂಬಂಧಿತ ಔಷಧಿಗಳ ಮೇಲಿನ ತೆರಿಗೆ ಕಡಿತ ಸಾಧ್ಯತೆ

2020ರ ಡಿಸೆಂಬರ್​ನಲ್ಲಿ ತನ್ನ ಪ್ಲಾಂಟ್​​ನಲ್ಲಿ ಕಾರ್ಮಿಕರ ಗಲಭೆ ನಡೆದಾಗ ಭಾರತದಲ್ಲಿ ವಿಸ್ಟ್ರಾನ್ ಕಾರ್ಯಾಚರಣೆಯ ನೌಕರರು ಈಗಾಗಲೇ 10,000ಕ್ಕೆ ತಲುಪಿದ್ದವು, ಕಂಪನಿಯು ತನ್ನ ವ್ಯವಸ್ಥೆ ಮತ್ತು ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಪುನಾ ರಚಿಸಲು ಒತ್ತಾಯಿಸಿತು ಎಂದಿದೆ.

ಪೆಗಾಟ್ರಾನ್ 2022ರ ಮಾರ್ಚ್ ವೇಳೆಗೆ ಭಾರತದಲ್ಲಿ 6,000 - 7,000 ಕಾರ್ಮಿಕರನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ವರದಿ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ತನ್ನ ಉತ್ಪಾದನಾ ಪ್ರದೇಶವನ್ನು ಮಾತ್ರ ನಿರ್ಧರಿಸಿದ್ದು, ಪೆಗಾಟ್ರಾನ್ ಇಂಡಿಯಾ ಇನ್ನೂ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ"

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಆ್ಯಪಲ್ ಪೂರೈಕೆದಾರರ ಸಂಖ್ಯೆ 2020ರಲ್ಲಿ ಒಂಬತ್ತಕ್ಕೆ ಏರಿತ್ತು. ಅದು 2018ರಲ್ಲಿ ಕೇವಲ ಆರು ಪೂರೈಕೆದಾರರು ಮಾತ್ರ ಇದ್ದರು. ಆ್ಯಪಲ್ ಸರಬರಾಜುದಾರರು ನೇಮಕ ಮಾಡುವ ನೌಕರರ ಬೆಳವಣಿಗೆಯು ವೇಗ ಹೆಚ್ಚಾಗಿದ್ದು, ಸರಬರಾಜುದಾರರು ತಮ್ಮ ಪೂರೈಕೆ ಸರಪಳಿಗಳನ್ನು ಭಾರತಕ್ಕೆ ವರ್ಗಾಯಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.