ನವದೆಹಲಿ: ಹಬ್ಬದ ಹಿನ್ನೆಲೆಯಲ್ಲಿ ಸದ್ಯ ಪ್ರಮುಖ ಆನ್ಲೈನ್ ಶಾಪಿಂಗ್ ತಾಣ ಅಮೇಜಾನ್ನಲ್ಲಿ ಭಾರಿ ದರ ಕಡಿತದ ಮಾರಾಟ ನಡೆಯುತ್ತಿದ್ದು, ಇದೇ ವೇಳೆ ಚೀನಾ ಮೂಲದ ಮೊಬೈಲ್ ಕಂಪನಿ ಒನ್ಪ್ಲಸ್ ಕೋಟಿ ಕೋಟಿ ಹಣ ಬಾಚಿಕೊಂಡಿದೆ.
ಅಮೇಜಾನ್ ಸಂಸ್ಥೆ ಭಾರತದಲ್ಲಿ 29ರಿಂದ ತನ್ನ 'ಗ್ರೇಟ್ ಇಂಡಿಯನ್ ಸೇಲ್' ಆರಂಭಿಸಿತ್ತು. ಇದಕ್ಕೂ ಎರಡು ದಿನ ಮುಂಚಿತವಾಗಿ ಒನ್ಪ್ಲಸ್ ಸಂಸ್ಥೆ ತನ್ನ ಬಹು ನಿರೀಕ್ಷಿತ ಒನ್ಪ್ಲಸ್ 7T(₹37,999 ಆರಂಭಿಕ ದರ) ಹಾಗೂ ಒನ್ಪ್ಲಸ್ ಟಿವಿ 55Q1(₹69,900) ಅನಾವರಣಗೊಳಿಸಿತ್ತು. ಇವೆರಡನ್ನೂ 'ಅಮೇಜಾನ್ ಗ್ರೇಟ್ ಇಂಡಿಯನ್' ಸೇಲ್ ಮೂಲಕ ಗ್ರಾಹಕರಿಗೆ ದೊರೆಯುವಂತೆ ಮಾಡಲಾಗಿತ್ತು.
'ಗ್ರೇಟ್ ಇಂಡಿಯನ್ ಸೇಲ್' ಮೂಲಕ ಕೇವಲ ಎರಡೇ ದಿನದಲ್ಲಿ ಒನ್ಪ್ಲಸ್ ಸಂಸ್ಥೆ ಬರೋಬ್ಬರಿ ₹500 ಕೋಟಿ ಗಳಿಕೆ ಮಾಡಿದೆ ಎಂದು ಸ್ವತಃ ಒನ್ಪ್ಲಸ್ ಇಂಡಿಯಾದ ಪ್ರಧಾನ ನಿರ್ದೇಶಕ ವಿಕಾಸ್ ಅಗರ್ವಾಲ್ ಹೇಳಿದ್ದಾರೆ. ಒನ್ಪ್ಲಸ್ ಸಂಸ್ಥೆ ಇದೇ ಮೊದಲ ಬಾರಿಗೆ ಟಿವಿ ಲೋಕಕ್ಕೂ ಕಾಲಿಟ್ಟಿದ್ದು ಭರ್ಜರಿ ಸ್ವಾಗತ ದೊರೆತಿದೆ. ಒನ್ಪ್ಲಸ್ 4K QLED ಡಿಸ್‌ಪ್ಲೇಯ ಎರಡು ಮಾದರಿಯ ಟಿವಿಯನ್ನು ಒನ್ಪ್ಲಸ್ ಈಗಾಗಲೇ ರಿಲೀಸ್ ಮಾಡಿದೆ. ಒನ್ಪ್ಲಸ್ 55Q1 ಬೆಲೆ ₹69,900 ಆಗಿದ್ದರೆ, ಒನ್ಪ್ಲಸ್ 55Q1 Pro ಬೆಲೆ ₹99,900 ನಿಗದಿಪಡಿಸಲಾಗಿದೆ.
-
Our Tuesday’s looking goooooooood 🥳
— OnePlus India (@OnePlus_IN) October 1, 2019 " class="align-text-top noRightClick twitterSection" data="
The love for OnePlus is no secret! We clocked INR 500 CR revenue in 2 days of the Amazon Great Indian Festival!
A big shoutout to the community for making this happen, yet again! pic.twitter.com/p1fwSg9bBi
">Our Tuesday’s looking goooooooood 🥳
— OnePlus India (@OnePlus_IN) October 1, 2019
The love for OnePlus is no secret! We clocked INR 500 CR revenue in 2 days of the Amazon Great Indian Festival!
A big shoutout to the community for making this happen, yet again! pic.twitter.com/p1fwSg9bBiOur Tuesday’s looking goooooooood 🥳
— OnePlus India (@OnePlus_IN) October 1, 2019
The love for OnePlus is no secret! We clocked INR 500 CR revenue in 2 days of the Amazon Great Indian Festival!
A big shoutout to the community for making this happen, yet again! pic.twitter.com/p1fwSg9bBi
ಒನ್ಪ್ಲಸ್ 7T ಮೊಬೈಲ್ ಸಹ ಸದ್ಯ ಲಭ್ಯವಿದ್ದು, ನೀಲಿ ಬಣ್ಣದ ಮೊಬೈಲ್ (8GB+128GB) ₹ 37,999, ನೀಲಿ ಬಣ್ಣದ (8GB+256GB) ₹ 39,999 ಹಾಗೂ ಬೆಳ್ಳಿ ಬಣ್ಣದ ಮೊಬೈಲ್ ಬೆಲೆ(8GB+128GB) ₹37,999 ನಿಗದಿಪಡಿಸಲಾಗಿದೆ.