ಹೈದರಾಬಾದ್: ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಒಳರೋಗಿಗಳ ಸೇವಾ ಕ್ಷೇತ್ರದಲ್ಲಿ ಇದು ನಿರ್ಣಾಯಕ ಪಾತ್ರ ಹೊಂದಿದೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಹೇಳಿದರು.
ಹೈದರಾಬಾದ್ನಲ್ಲಿ ನಡೆದ ಬಯೋ ಏಷ್ಯಾ ಶೃಂಗಸಭೆಯಲ್ಲಿ ತೆಲಂಗಾಣ ಐಟಿ ಸಚಿವ ಕೆಟಿಆರ್ ಅವರ ಜತೆ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಒಳರೋಗಿಗಳ ವಲಯಕ್ಕೆ ಹೆಚ್ಚು ಉಪಯುಕ್ತವಾಗಲಿದೆ. ಕಡಿಮೆ ವೆಚ್ಚದ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗುರಿಯತ್ತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತೆಲಂಗಾಣ ಸರ್ಕಾರವನ್ನು ಶ್ಲಾಘಿಸಿದರು.
ಯಾವುದೇ ತಂತ್ರಜ್ಞಾನವನ್ನು ಸಮಾಜಕ್ಕೆ ವಿಶೇಷವಾಗಿ ಬಡವರಿಗೆ ಉಪಯುಕ್ತವಾಗಿಸುವುದು ಸಿಎಂ ಕೆಸಿಆರ್ ಅವರ ಆದ್ಯತೆಯಾಗಿದೆ. ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಉತ್ತಮ ಅವಕಾಶಗಳಿವೆ ಎಂದು ರಾಜ್ಯ ಐಟಿ ಸಚಿವ ಕೆ.ಟಿ.ಆರ್ ಹೇಳಿದರು.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸಿಹಿ ಸುದ್ದಿ : 3ನೇ ತ್ರೈಮಾಸಿಕ ಜಿಡಿಪಿ ಶೇ.1.3ರಷ್ಟು ವೃದ್ಧಿ - ಡಿಬಿಎಸ್ ಬ್ಯಾಂಕ್