ಆಗ್ರಾ: ಆಗ್ರಾದ ಪಾದರಕ್ಷೆ ಉದ್ಯಮವು ಗರಿಷ್ಠ ಮುಖಬೆಲೆಯ ನೋಟುರದ್ದತಿ ಹಾಗೂ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯ ಪರಿಣಾಮದಿಂದ ಚೇತರಿಸಿಕೊಳ್ಳುವ ಮೊದಲೇ ಪ್ರವಾಹಕ್ಕೆ ತತ್ತರಿಸಿದೆ.
ಜಿಎಸ್ಟಿ, ನೋಟ್ಬ್ಯಾನ್ ಬಳಿಕ ಪ್ರವಾಹ ನಮಗೆ ಮತ್ತೊಂದು ರೀತಿಯ ಸಂಕಷ್ಟ ತಂದಿದೆ. ಈ ಎಲ್ಲ ಪರಿಣಾಮಗಳಿಂದ ಶೇ 60 ಪ್ರತಿಶತದಷ್ಟು ವ್ಯವಹಾರಕ್ಕೆ ಹಿನ್ನಡೆಯಾಗಿದೆ. ಕೇವಲ 40 ಪ್ರತಿಶತದಷ್ಟು ವ್ಯವಹಾರಗಳು ಮಾತ್ರವೇ ಸರಿಯಾಗಿ ನಡೆಯುತ್ತಿವೆ ”ಎಂದು ಆಗ್ರಾ ಶೂ ಫ್ಯಾಕ್ಟರ್ಸ್ ಫೆಡರೇಷನ್ ಅಧ್ಯಕ್ಷ ಗಗನ್ ದಾಸ್ ರಮಣಿ 'ಇಟಿವಿ ಭಾರತ್'ಗೆ ತಿಳಿಸಿದರು.
ಕಳೆದ 20 ವರ್ಷಗಳಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ವಹಿವಾಟು ಚೆನ್ನಾಗಿ ನಡೆಯುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಮಾರಾಟ ಇಳಿಮುಖವಾಗಿದೆ. ಯಾವುದೇ ಕೆಲಸವಿಲ್ಲದೆ ಏನ್ನೂ ಆದಾಯವಿಲ್ಲದೆ ದಿನ ದೂಡುತ್ತಿದ್ದೇವೆ ಎಂದು ಅಲವತ್ತುಕೊಂಡರು.
ಶೂ ಉದ್ಯಮದ ಮಂದಗತಿಯ ಕಾರಣಗಳನ್ನು ಹಂಚಿಕೊಂಡ ಶೂ ತಯಾರಕ ಪ್ರದೀಪ್ ಕುಮಾರ್, "ದೇಶದ ನಾನಾ ಪ್ರದೇಶಗಳಲ್ಲಿ ತಲೆದೂರಿರುವ ಪ್ರವಾಹವೇ ಪ್ರಸ್ತುತ ಉದ್ಯಮ ಬೆಳವಣಿಗೆಯ ಕುಂಠಿತಕ್ಕೆ ಮುಖ್ಯ ಕಾರಣ. ನಿಧಾನಗತಿಯ ಮಾರಾಟದಿಂದಾಗಿ ನಮಗೆ ಹಣದ ಕೊರತೆ ಎದುರಾಗುತ್ತಿದೆ ಎಂದು ಖೇದ ವ್ಯಕ್ತ ಪಡಿಸಿದರು.
ಒಟ್ಟು ಉತ್ಪನ್ನಗಳ ಮಾರಾಟದ ಬೆಂಬಲವಾಗಿ ಶೇ 25ರಷ್ಟು ಉತ್ಪನ್ನ ಕಾರ್ಯಗಳು ನಡೆಯುತ್ತಿವೆ. ಶೇ 70 ಪ್ರತಿಶತದಷ್ಟು ಕಾರ್ಮಿಕರು ಯಾವುದೇ ಕೆಲಸವಿಲ್ಲದ ಸುಮ್ಮನೆ ಕಾಲ ಕಳೆಯುತ್ತಿದ್ದಾರೆ ಎಂದು ಶೂ ತಯಾರಕ ಶಾರಿಕ್ ಅನೀಶ್ ಹೇಳಿದರು.