ETV Bharat / business

ತೆರಿಗೆದಾರರ ವಿವಾದಗಳನ್ನು ವಿಶ್ವಾಸದಿಂದ ಗೆದ್ದು 97,000 ಕೋಟಿ ರೂ. ಜೇಬಿಗಿಳಿಸಿಕೊಂಡ ಕೇಂದ್ರ! - ವಿವಾದ್​ ಸೆ ವಿಶ್ವಾಸ್ ಸ್ಕೀಮ್ 2020 ಪಿಡಿಎಫ್ ಡೌನ್‌ಲೋಡ್

ವಿವಾದ್​ ಸೆ ವಿಶ್ವಸ್ (ವಿಎಸ್​ವಿ) ಯೋಜನೆಗೆ ಇದುವರೆಗೆ 1,25,144 ಪ್ರಕರಣಗಳು ಆಯ್ದುಕೊಳ್ಳಲಾಗಿದೆ. ವಿವಿಧ ಕಾನೂನು ವೇದಿಕೆಗಳಲ್ಲಿ ಬಾಕಿ ಇರುವ 5,10,491 ಪ್ರಕರಣಗಳಲ್ಲಿ ಇದು ಶೇ 24.5ರಷ್ಟಿವೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

Vivad Se Vishwas
Vivad Se Vishwas
author img

By

Published : Feb 6, 2021, 7:38 PM IST

ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ತೆರಿಗೆ ವಿವಾದ ಇತ್ಯರ್ಥ ಯೋಜನೆ ವಿವಾದ್​ ಸೇ ವಿಶ್ವಾಸ್ ಅಡಿ 5.10 ಲಕ್ಷಕ್ಕೂ ಹೆಚ್ಚು ತೆರಿಗೆ ವಿವಾದಗಳಲ್ಲಿ ಕಾಲು ಭಾಗವನ್ನು ಇತ್ಯರ್ಥಪಡಿಸಲಾಗಿದ್ದು, ಸುಮಾರು ₹ 97,000 ಕೋಟಿ ಮೌಲ್ಯದ ವಿವಾದಿತ ತೆರಿಗೆಗೆ ತಿಲಾಂಜಲಿ ಹಾಡಲಾಗಿದೆ.

ವಿವಾದ್​ ಸೆ ವಿಶ್ವಸ್ (ವಿಎಸ್​ವಿ) ಯೋಜನೆಗೆ ಇದುವರೆಗೆ 1,25,144 ಪ್ರಕರಣಗಳು ಆಯ್ದುಕೊಳ್ಳಲಾಗಿದೆ. ವಿವಿಧ ಕಾನೂನು ವೇದಿಕೆಗಳಲ್ಲಿ ಬಾಕಿ ಇರುವ 5,10,491 ಪ್ರಕರಣಗಳಲ್ಲಿ ಇದು ಶೇ 24.5ರಷ್ಟಿವೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 37,439 ಗ್ರಾಮಗಳಲ್ಲಿ 'ಹೈಸ್ಪೀಡ್​ ಇಂಟರ್​ನೆಟ್​ ನಾಟ್‌ ರೀಚೆಬಲ್: ಇದ್ರಲ್ಲಿ ಕರ್ನಾಟಕದ್ದವೂ ಇವೆ!

ವಿಎಸ್​ವಿ​ ಯೋಜನೆಗೆ ಪ್ರತಿಕ್ರಿಯೆ ಬಹಳ ಉತ್ತೇಜನಕಾರಿಯಾಗಿದೆ. ಇಲ್ಲಿಯವರೆಗೆ ತೆರಿಗೆ ವಿವಾದ ಇತ್ಯರ್ಥದ ಮೊತ್ತವು 97,000 ಕೋಟಿ ರೂ.ಗಳಿಗಿಂತ ಹೆಚ್ಚಿನದಾಗಿದೆ ಎಂದಿದೆ.

ವಿವಾದ್​ ಸೆ ವಿಶ್ವಾಸ್ ಯೋಜನೆಯು ನೇರ ತೆರಿಗೆ ವಿವಾದ ಪರಿಹಾರ ಯೋಜನೆ 2016ರಕ್ಕೆ (ಡಿಟಿಡಿಆರ್​​ಎಸ್) ಹೋಲಿಸಿದರೆ 15 ಪಟ್ಟು ಉತ್ತಮ ಪ್ರತಿಕ್ರಿಯೆ ಬಂದಿದೆ. ಇತ್ಯರ್ಥಪಡಿಸಿದ ವಿವಾದಿತ ಮೊತ್ತಕ್ಕೆ ಸಂಬಂಧ ಇದು ಡಿಟಿಡಿಆರ್​​ಎಸ್​ನ 153 ಪಟ್ಟು ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.