ಮುಂಬೈ: ಭಾರತ ತಂಡ ಒಟ್ಟು11 ವಿಶ್ವಕಪ್ನಲ್ಲಿ ಭಾಗವಹಿಸಿದ್ದು, ಅದರಲ್ಲಿ 2 ಬಾರಿ ಚಾಂಪಿಯನ್ , ಒಮ್ಮೆ ರನ್ನರ್ ಆಪ್ ಆಗಿದೆ. ಇಷ್ಟು ಆವೃತ್ತಿಗಳಲ್ಲಿ ಭಾರತೀಯ ಬೌಲರ್ಗಳು 5 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದು, ಅದರಲ್ಲಿ ಯುವರಾಜ್ ಸಿಂಗ್ ಏಕೈಕ ಸ್ಪಿನ್ನರ್ ಎಂದರೆ ನೀವೆಲ್ಲ ನಂಬಲೇಬೇಕು.
ಹೌದು 11 ಆವೃತ್ತಿಯ ವಿಶ್ವಕಪ್ನಲ್ಲಿ ಭಾರತ ಅನಿಲ್ ಕುಂಬ್ಳೆ, ಎರಪ್ಪಳ್ಳಿ ಪ್ರಸನ್ನ, ಭಿಷನ್ ಸಿಂಗ್ ಬೇಡಿ, ಹರಭಜನ್ ಸಿಂಗ್, ಅಶ್ವಿನ್ರಂತಹ ಸ್ಪಿನ್ ದಿಗ್ಗಜರ ಕೈಯಿಂದ ಆಗದ ದಾಖಲೆಯನ್ನು ಭಾರತದ ಅರೆಕಾಲಿಕ ಸ್ಪಿನ್ನರ್ ಯುವರಾಜ್ ಸಿಂಗ್ ಧೋನಿ ನಾಯಕತ್ವದಲ್ಲಿ 2011ರ ವಿಶ್ವಕಪ್ನಲ್ಲಿ ಸಾಧಿಸಿದ್ದಾರೆ.
2011ರ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕ ವಿಲಿಯಮ್ ಫೋರ್ಟ್ಫೀಲ್ಡ್, ಆ್ಯಂಡ್ರ್ಯೂ ವೈಟ್, ಕೆವಿನ್ ಓ ಬ್ರಿಯಾನ್, ಜೆಎಫ್ ಮೂನಿ, ಎಆರ್ ಕುಸಾಕ್ ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಜಯ ಸಾಧಿಸಿತ್ತು. ಯುವರಾಜ್ 5 ವಿಕೆಟ್ ಜೊತೆಗೆ 50 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ಭಾರತದ ಪರ 5 ವಿಕೆಟ್ ಪಡೆದವರಲ್ಲಿ ಯುವಿ 5ನೇ ಬೌಲರ್. ಕಪಿಲ್ದೇವ್ 1983 ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ರಾಬಿನ್ ಸಿಂಗ್ 1999ರಲ್ಲಿ ಶ್ರೀಲಂಕಾ ವಿರುದ್ಧ, ಕನ್ನಡಿಗ ವೆಂಕಟೇಶ್ ಪ್ರಸಾದ್ 2003ರಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದ್ದರು.