ಮುಂಬೈ: ವಿಶ್ವಕಪ್ ಪಂದ್ಯ ವೀಕ್ಷಿಸಲು 3ಡಿ ಗ್ಲಾಸ್ ಆರ್ಡರ್ ಮಾಡಿದ್ದೇನೆ ಎಂದು ವಿಜಯ್ ಶಂಕರ್ ಆಯ್ಕೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೆ ವಿಜಯ್ ಶಂಕರ್ ಪ್ರತಿಕ್ರಿಯಿದ್ದಾರೆ.
ಏಪ್ರಿಲ್ 15ರಂದು ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ವಿಶ್ವಕಪ್ ತಂಡಕ್ಕೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದರು. ಈ ತಂಡದಲ್ಲಿ ಅಂಬಾಟಿ ರಾಯುಡು ಬದಲಿಗೆ ನಾಲ್ಕನೇ ಕ್ರಮಾಂಕಕ್ಕೆ ತಮಿಳುನಾಡಿನ ವಿಜಯ್ ಶಂಕರ್ರನ್ನು ಆಯ್ಕೆ ಮಾಡಿದ್ದರು. ಜೊತೆಗೆ ಸುದ್ದಿಗೋಷ್ಟಿಯಲ್ಲಿ ವಿಜಯ್ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲಿ ಮಂಚೂಣಿಯಲ್ಲಿದ್ದಾರೆ ಎಂದು ಅವರನ್ನು 3ಡಿ ಮೌಲ್ಯಯುತ ಆಟಗಾರ ಎಂದು ವಿವರಣೆ ನೀಡಿದ್ದರು.
ವಿಜಯ್ ಶಂಕರ್ರ ನ್ನು ತ್ರೀಡಿ ಆಟಗಾರ ಎಂದು ಸಮರ್ಥಿಸಿಕೊಂಡ ಕೆಲವೇ ಗಂಟೆಗಳಲ್ಲಿ ರಾಯುಡು ತಮ್ಮ ಟ್ವಿಟರ್ನಲ್ಲಿ"ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು 3ಡಿ ಗ್ಲಾಸ್ ಆರ್ಡ್ ಮಾಡಿದ್ದೇನೆ"ಎಂದು ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದರು.
-
Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019 " class="align-text-top noRightClick twitterSection" data="
">Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019Just Ordered a new set of 3d glasses to watch the world cup 😉😋..
— Ambati Rayudu (@RayuduAmbati) April 16, 2019
ಈ ಟ್ವೀಟ್ಅನ್ನು ಬಿಸಿಸಿಐ ಸಹಾ ಸಾಮಾನ್ಯವಾಗಿ ತೆಗೆದುಕೊಂಡು ರಾಯುಡು ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಕೂಡ ಬಿಸಿಸಿಐ ರೀತಿಯಲ್ಲೇ ಅಲೋಚನೆ ಮಾಡಿದ್ದು" ರಾಯುಡು ಸ್ಥಿತಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಅರನ್ನು ಆಯ್ಕೆ ಮಾಡಲಿಲ್ಲ ಎಂಬ ನೋವನ್ನು ಟ್ವೀಟ್ ಮೂಲಕ ಹೊರ ಹಾಕಿದ್ದಾರೆ. ಯಾವುದೇ ಕ್ರಿಕೆಟರ್ಗೆ ಇಂತಹ ಅನುಭವ ಸಾಮಾನ್ಯ" ಎಂದಿದ್ದಾರೆ.
ಧೋನಿಯಿಂದ ಮಾರ್ಗದರ್ಶನ:
ತಮ್ಮ ತಂಡದ ಹಿರಿಯ ಹಾಗೂ ಅನುಭವಿಯಾದ ಧೋನಿ ತಮಗೆ ಒಳ್ಳೆಯ ಸಲಹೆಗಳನ್ನು ನೀಡುತ್ತಾರೆ. ತಮ್ಮ ಏಕದಿನ ಕ್ರಿಕೆಟ್ ಪದಾರ್ಪಣೆ ಸಂದರ್ಭದಲ್ಲಿ ಧೋನಿ ಜೊತೆ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಅವರಿಂದ ಕಠಿಣ ಪರಿಸಿಸ್ಥಿಯಲ್ಲಿ ಹೇಗೆ ಬ್ಯಾಟಿಂಗ್ ನಡೆಸಬೇಕು ಎಂಬುದನ್ನು ಕಲಿತಿದ್ದೇನೆ. ಇದು ವಿಶ್ವಕಪ್ನಲ್ಲಿ ನನಗೆ ಅನುಕೂಲಕರವಾಗಲಿದೆ ಎಂದಿದ್ದಾರೆ.