ETV Bharat / briefs

ನಮ್ಮನೆ ಹೆಣ್ಮಕ್ಕಳನ್ನು ಕ್ರಿಕೆಟ್​ ಆಡಲು ಬಿಡಲ್ಲ... ಅಫ್ರಿದಿ ಹೀಗೆ ಹೇಳಿದ್ದು ಏಕೆ? - ಆಲ್​ರೌಂಡರ್

ತಾವು ಸಾಮಾಜಿಕ ಹಾಗೂ ಧಾರ್ಮಿಕ ಕಾರಣಗಳಿಗೆ ಬದ್ದರಾಗಿರುವ ವ್ಯಕ್ತಿಯಾಗಿದ್ದು ತಮ್ಮ 4 ಹೆಣ್ಣು ಮಕ್ಕಳಾದ ಅನ್ಷಾ,ಅಜ್ವಾ,ಅಸ್ಮಾರಾ ಹಾಗೂ ಅಕ್ಸಾರನ್ನು ಹೊರಾಂಗಣ ಕ್ರೀಡೆಗಳಿಗೆ ನಾನು ಅನುಮತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ಆಫ್ರಿದಿ ಮತ್ತೊಂದು ವಿವಾದ ಸೃಷ್ಠಿಸಿದ್ದಾರೆ.

afridi
author img

By

Published : May 12, 2019, 2:26 PM IST

ಲಾಹೋರ್​: ವಿಶ್ವ ಕ್ರಿಕೆಟ್​ ಕಂಡ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರಾದ ಪಾಕಿಸ್ತಾನದ ಶಾಹೀದ್​ ಆಫ್ರಿದಿ ತಮ್ಮ 4 ಹೆಣ್ಣುಮಕ್ಕಳನ್ನು ಹೊರಾಂಗಣ ಆಟವಾಡಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಸ್ತ್ರೀವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾವೊಬ್ಬ ಸಾಮಾಜಿಕ ಹಾಗೂ ಧಾರ್ಮಿಕ ಕಾರಣಗಳಿಗೆ ಬದ್ದರಾಗಿರುವ ವ್ಯಕ್ತಿಯಾಗಿದ್ದು ತಮ್ಮ 4 ಹೆಣ್ಣು ಮಕ್ಕಳಾದ ಅನ್ಷಾ,ಅಜ್ವಾ,ಅಸ್ಮಾರಾ ಹಾಗೂ ಅಕ್ಸಾರನ್ನು ಹೊರಾಂಗಣ ಕ್ರೀಡೆಗಳಿಗೆ ನಾನು ಅನುಮತಿ ನೀಡುವುದಿಲ್ಲ ಎಂದಿರುವ ಅವರು ನನ್ನ ನಿರ್ಧಾರದ ಬಗ್ಗೆ ಸ್ತ್ರೀವಾದಿಗಳು ಏನಾದರೂ ಹೇಳಿಕೊಳ್ಳಲಿ ಎಂದು ತಮ್ಮ ಆತ್ಮಕಥೆ 'ಗೇಮ್​ ಚೇಂಜರ್​'ನಲ್ಲಿ ಬರೆದುಕೊಂಡಿದ್ದಾರೆ.

ನಾಲ್ವರು ಹೆಣ್ಣು ಮಕ್ಕಳಲ್ಲಿ ಅಜ್ವಾ ಹಾಗೂ ಅಸ್ಮಾರಾ ಇಬ್ಬರಿಗೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರಿಗೆ ಒಳಾಂಗಾಣದ ಕ್ರೀಡೆಗೆ ನನ್ನ ಅನುಮತಿ ಇದೆ, ಆದರೆ ಕ್ರಿಕೆಟ್​ನಂತಹ ಆಟಗಳಿಗೆ ಮಾತ್ರ ನನ್ನ ಅನುಮತಿಯಿಲ್ಲ. ಇದುವರೆಗೆ ಸಾರ್ವಜನಿಕವಾಗಿ ನಡೆದಿರುವ ಯಾವ ಕ್ರೀಡೆಗಳಿಗೂ ನನ್ನ ಮಕ್ಕಳು ಬಾಗವಹಿಸಿಲ್ಲ ಎಂದು ಸಹಾ ತಿಳಿಸಿದ್ದಾರೆ.

ಆಫ್ರಿದಿ ತಮ್ಮ ಆತ್ಮಚರಿತ್ರೆಯಲ್ಲಿ ಭಾರತದ ಗೌತಮ್​ ಗಂಭೀರ್​ ವಿರುದ್ಧ, ತಮ್ಮ ದೇಶದ ಕ್ರಿಕೆಟಿಗರಾದ ಜಾವೆದ್​ ಮಿಯಾಂದಾದ್, ವಕಾರ್ ಯುೂನಿಸ್ ವಿರುದ್ಧವೂ ಕೂಡ ಟೀಕಿಸಿ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದರು. ಇದೀಗ ಮಹಿಳಾ ವಿರೋಧಿ ಹೇಳಿಕೆ ನೀಡಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.