ಲಖನೌ: ಪೊಲೀಸರು ಎಂದಾಕ್ಷಣ ಸಾರ್ವಜನಿಕರಲ್ಲಿ ಮೂಡುವ ಅಭಿಪ್ರಾಯವೇ ವಿಚಿತ್ರವಾಗಿರುತ್ತದೆ. ಅವರು ಮಾಡುವ ಸಮಾಜಮುಖಿ ಕಾರ್ಯ ಕೆಲವೊಮ್ಮೆ ಎಲ್ಲರ ಗಮನಕ್ಕೆ ಬಾರದೇ ಹೋಗಬಹುದು. ಆದರೆ ಇದೀಗ ಉತ್ತರಪ್ರದೇಶದ ಪೊಲೀಸರು ಮಾಡಿರುವ ಕಾರ್ಯವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
-
#इटावा-PRV1617 आज 108 km से 112 की तरफ जा रही थी तभी एक बाइक सवार ने तेजी से क्रॉस किया जिसके पीछे बंधे बैग में आग लगी दिखाई दी जो तेजी से बढ़ रही थी,बिना कोई देर किए उस बाइक का 4 km पीछाकर रुकवा,बाइक सवार दंपत्ति को नीचे उतारकर आग बुझाया @Uppolice @UPGovt #SaveLife #HappyToServe pic.twitter.com/T2d6JiVGk7
— UP100 (@up100) April 14, 2019 " class="align-text-top noRightClick twitterSection" data="
">#इटावा-PRV1617 आज 108 km से 112 की तरफ जा रही थी तभी एक बाइक सवार ने तेजी से क्रॉस किया जिसके पीछे बंधे बैग में आग लगी दिखाई दी जो तेजी से बढ़ रही थी,बिना कोई देर किए उस बाइक का 4 km पीछाकर रुकवा,बाइक सवार दंपत्ति को नीचे उतारकर आग बुझाया @Uppolice @UPGovt #SaveLife #HappyToServe pic.twitter.com/T2d6JiVGk7
— UP100 (@up100) April 14, 2019#इटावा-PRV1617 आज 108 km से 112 की तरफ जा रही थी तभी एक बाइक सवार ने तेजी से क्रॉस किया जिसके पीछे बंधे बैग में आग लगी दिखाई दी जो तेजी से बढ़ रही थी,बिना कोई देर किए उस बाइक का 4 km पीछाकर रुकवा,बाइक सवार दंपत्ति को नीचे उतारकर आग बुझाया @Uppolice @UPGovt #SaveLife #HappyToServe pic.twitter.com/T2d6JiVGk7
— UP100 (@up100) April 14, 2019
ಉತ್ತರಪ್ರದೇಶದ ಇಟಾವಾದ ಹೈವೇಯಲ್ಲಿ ವ್ಯಕ್ತಿವೋರ್ವ ತನ್ನ ಹೆಂಡತಿ ಹಾಗೂ ಮಗುವನ್ನ ಬೈಕ್ ಮೇಲೆ ಕುಳಿರಿಸಿಕೊಂಡು ತೆರಳುತ್ತಿದ್ದ. ಈ ವೇಳೆ ಬೈಕ್ನ ಹಿಂಬಾಗದ ಟೈರ್ಗೆ ಬೆಂಕಿ ತಗುಲಿದೆ. ಆದರೆ ಇದನ್ನ ಅವರು ಗಮನಿಸದೇ ರಭಸವಾಗಿ ತೆರಳಿದ್ದಾರೆ. ಇದೇ ವೇಳೆ ಹೆದ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ನೋಡಿದ್ದಾರೆ. ತಕ್ಷಣ ಅವರನ್ನ ಬೆನ್ನತ್ತಿರುವ ಪೊಲೀಸರು ಸುಮಾರು 4 ಕಿ.ಮೀ ದೂರ ಬೆನ್ನಟ್ಟುಕೊಂಡು ಹೋಗಿ ಮಾಹಿತಿ ನೀಡಿದ್ದಾರೆ.
ತಕ್ಷಣ ಬೈಕ್ನಿಂದ ಕೆಳಗಿಳಿದ ಹೆಂಡತಿ, ಗಂಡ ಹಾಗೂ ಮಗು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ತದನಂತರ ಬೈಕ್ಗೆ ತಗುಲಿದ ಬೆಂಕಿ ನಂದಿಸಿದ್ದಾರೆ. ಇದೀಗ ಈ ಅಪರೂಪದ ವಿಡಿಯೋವನ್ನ ಪೊಲೀಸರು ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.