ಕೊಡಗು: ಜಿಲ್ಲೆಯಲ್ಲಿಂದು ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಕೂಲಿ ಕಾರ್ಮಿಕ ದಂಪತಿಗೆ ಸೋಂಕು ತಗಲಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿ ಬೆಟ್ಟದ ಟಾಟಾ ಕಾಫಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ 55 ವರ್ಷದ ಪುರುಷ ಹಾಗೂ 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಟಾಟಾ ಕಾಫಿ ತೋಟದ ಪ್ರದೇಶವನ್ನು ಸೀಲ್ ಡೌನ್ ಮಾಡಿದೆ. ಜಿಲ್ಲೆಯಲ್ಲಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿವೆ.
ವಾರದ ಸಂತೆ ರದ್ದು
ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ 2 ವಾರಗಳು ಮಡಿಕೇರಿಯ ಶುಕ್ರವಾರದ ಸಂತೆಯನ್ನು ಪೌರಾಯುಕ್ತ ಶ್ರೀನಿವಾಸ್ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂತೆಗೆ ಗ್ರಾಮೀಣ ಭಾಗದ ಜನರು ಸೇರುವುದರಿಂದ ಮಾರುಕಟ್ಟೆಯಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡಿದ್ದಾರೆ. ಜನದಟ್ಟಣೆ ಆಗದಂತೆ ಮುಂಜಾಗ್ರತಾ ಕ್ರಮಕ್ಕೆ ಸಂತೆ ರದ್ದುಪಡಿಸಲಾಗಿದೆ.
ಕೊಡಗು: ಕಾಫಿ ಸಂಸ್ಥೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಕೊರೊನಾ... ವಾರದ ಸಂತೆ ರದ್ದು - Corona virus updates
ವಿರಾಜಪೇಟೆ ತಾಲೂಕಿನ ಪಾಲಿ ಬೆಟ್ಟದ ಟಾಟಾ ಕಾಫಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.