ಹೈದರಾಬಾದ್: ರಿಲಯನ್ಸ್ ಜಿಯೋ ಈಗ JioHotstar ಗೆ ಪೂರಕ ಚಂದಾದಾರಿಕೆಯನ್ನು ಸೇರಿಸಲು 949ರೂ.ನ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ನವೀಕರಿಸಿದೆ. ಕಳೆದ ವಾರ JioCinema ಮತ್ತು Disney+ Hotstar ವಿಲೀನದೊಂದಿಗೆ ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ರಚನೆ ಮಾಡಲಾಗಿದೆ. ಜಿಯೋ ಮತ್ತು ಹಾಟ್ ಸ್ಟಾರ್ ಎರಡೂ OTTಗಳು ಒಂದರಲ್ಲೇ ಲಭ್ಯವಾಗಲಿವೆ.
ಹೊಸ ಸೇವೆಯ ಚಂದಾದಾರಿಕೆ ಪ್ಲಾನ್ ಗಳು ಜಾಹೀರಾತು-ಬೆಂಬಲಿತ ಮತ್ತು ಪ್ರೀಮಿಯಂ ಕೊಡುಗೆಗಳನ್ನು ಒಳಗೊಂಡಿವೆ. ಮೊದಲಿನ ಯೋಜನೆ 90 ದಿನಗಳವರೆಗೆ ರೂ 149 ರಿಚಾರ್ಜ್ ಮಾಡಿದರೆ ಸಾಕು. ಇನ್ನು ಪ್ರೀಮಿಯಂ ಪ್ಯಾಕ್ ಒಂದು ತಿಂಗಳಿಗೆ 299 ರೂ.ಗಳಿಂದ ಪ್ರಾರಂಭವಾಗುತ್ತದೆ. ಬಳಕೆದಾರರು ತಮ್ಮಿಷ್ಟದ ಕಾರ್ಯಕ್ರಮ ವೀಕ್ಷಿಸಲು ಮಾಸಿಕ ಮತ್ತು ವಾರ್ಷಿಕ ಚಂದಾದಾರರಾಗಬಹುದಾದರೂ, ಜಿಯೋ ಚಂದಾದಾರರು ಈಗ 949 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಆರಿಸಿಕೊಳ್ಳುವ ಮೂಲಕ JioHotstar ನ ಜಾಹೀರಾತು-ಬೆಂಬಲಿತ ಮೂಲ ಯೋಜನೆಗೆ ಪೂರಕ ಪ್ರವೇಶ ಪಡೆದುಕೊಳ್ಳಬಹುದು.
JioCinema ಮತ್ತು Disney+ Hotstar ನ ಅಸ್ತಿತ್ವದಲ್ಲಿರುವ ಚಂದಾದಾರರು ಸ್ವಯಂಚಾಲಿತವಾಗಿ JioHotstar ಗೆ ಪರಿವರ್ತನೆಯಾಗುತ್ತಿದ್ದರೂ ಸಹ, ಪೂರಕ ಪ್ರವೇಶವು ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ಬಳಕೆದಾರರ ನೆಲೆಯನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಜಿಯೋದ 949ರೂ.ರೀಚಾರ್ಜ್ ಪ್ಲಾನ್ ಬೆನೆಫಿಟ್ ಗಳೇನು? : ರಿಲಯನ್ಸ್ ಜಿಯೋದ 949ರೂ. ರೀಚಾರ್ಜ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ 2GB ಹೈ-ಸ್ಪೀಡ್ 4G ಡೇಟಾ ಮತ್ತು ಅನಿಯಮಿತ 5G ಡೇಟಾ ಸೌಲಭವನ್ನು ನೀಡುತ್ತದೆ. ಈ ರೀಚಾರ್ಜ್ ಯೋಜನೆಯ ಮಾನ್ಯತೆಯು 84 ದಿನಗಳವರೆಗೆ ಇರುತ್ತದೆ. ನೀವು ಯಾವಾಗ ಈ ಪ್ಲಾನ್ ರಿಚಾರ್ಜ್ ಮಾಡುತ್ತಿರೋ ಆ ತಕ್ಷಣದಿಂದಲೇ ಶುರುವಾಗುತ್ತದೆ.
ಇತ್ತೀಚಿನ ಅಪ್‌ಡೇಟ್‌ನ ನಂತರ, ರೀಚಾರ್ಜ್ ಪ್ಲಾನ್ ಈಗ JioHotstar ನ ಮೂಲ ಜಾಹೀರಾತು - ಬೆಂಬಲಿತ 149 ರೂ ಮೌಲ್ಯದ ಪ್ಲಾನ್ ಅನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಬಳಕೆದಾರರಿಗೆ ಸ್ಪೋರ್ಟ್ಸ್ ಲೈವ್, ಡಿಸ್ನಿಯಲ್ಲಿರುವ ಇತರ ಕಾರ್ಯಕ್ರಮಗಳು, ಇತ್ತೀಚಿನ ಚಲನಚಿತ್ರಗಳನ್ನು ವೀಕ್ಷಣೆ ಮಾಡುವ ಅವಕಾಶ ಕಲ್ಪಿಸುತ್ತದೆ. ಆದಾಗ್ಯೂ, ಯೋಜನೆಯು ಮೊಬೈಲ್ ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ವಿಷಯವನ್ನು 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನಲ್ಲಿ ಮಾತ್ರ ಸ್ಟ್ರೀಮ್ ಮಾಡಬಹುದು.
ಉತ್ತಮ ಸ್ಟ್ರೀಮಿಂಗ್ ಗುಣಮಟ್ಟ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳಿಗಾಗಿ ಉನ್ನತ-ಶ್ರೇಣಿಯ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಲು ಬಳಕೆದಾರರು ತಮ್ಮ ಇಷ್ಟದ ಆಯ್ಕೆ ಮಾಡಬಹುದು. JioHotstar ಸಹ ಅಗ್ಗದ ಜಾಹೀರಾತು-ಬೆಂಬಲಿತ ಸೂಪರ್ ಪ್ಲಾನ್ ನೀಡುತ್ತಿದೆ. ಮೂರು ತಿಂಗಳಿಗೆ 299ರೂ. ಬೆಲೆಯ ಪ್ಲಾನ್, ಮೊಬೈಲ್ ಬಳಕೆದಾರರು, ಟ್ಯಾಬ್ಲೆಟ್/ಲ್ಯಾಪ್‌ಟಾಪ್/ಪಿಸಿ ಮತ್ತು ಸ್ಮಾರ್ಟ್ ಟಿವಿಯಲ್ಲಿ 1080 ಪಿಕ್ಸೆಲ್‌ಗಳಲ್ಲಿ ಏಕಕಾಲದಲ್ಲಿ ಎರಡು ಸಾಧನಗಳನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ.
ಸ್ಟ್ರೀಮಿಂಗ್ ಸೇವೆಯ ಪ್ರೀಮಿಯಂ ಜಾಹೀರಾತು-ಮುಕ್ತ ಯೋಜನೆಗಳು 299 ರೂ.ಗಳಿಂದ ಪ್ರಾರಂಭವಾಗುತ್ತವೆ. ಮೂಲ ಯೋಜನೆಯು ಮೊಬೈಲ್, PC/ಲ್ಯಾಪ್‌ಟಾಪ್ ಮತ್ತು ಟಿವಿಯಲ್ಲಿ ಬಳಕೆ ಮಾಡಬಹುದಾದ ಸೌಲಭ್ಯವನ್ನು ಒಳಗೊಂಡಿರುತ್ತದೆ. ಒಟ್ಟು 4 ಸಾಧನಗಳಲ್ಲಿ JioHotstar ಗೆ ಒಂದು ತಿಂಗಳು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಮೂರು ತಿಂಗಳಿಗೆ 499 ರೂ ಬೆಲೆಯ ಪ್ರೀಮಿಯಂ ಯೋಜನೆಯು 4K ರೆಸಲ್ಯೂಶನ್‌ವರೆಗೆ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ಅನುಭವವನ್ನು ನೀಡುತ್ತದೆ. ಈ ಎಲ್ಲಾ ಯೋಜನೆಗಳ ಪಟ್ಟಿ ಹೀಗಿದೆ:
ಪ್ಲಾನ್ ಹೆಸರು | ಪ್ಲಾನ್ ದರ (INR) | ಅವಧಿ | ಸಾಧನಗಳ ಬಳಕೆಗೆ ಇರುವ ಅವಕಾಶ |
---|---|---|---|
ಆ್ಯಡ್ ಬೆಂಬಲಿತ ಪ್ಲಾನ್ಸ್ | |||
ಮೊಬೈಲ್ | Rs 149 | 3 ತಿಂಗಳು | 1 device (ಒಂದು ಮೊಬೈಲ್ ಗೆ ಮಾತ್ರವೇ ಅವಕಾಶ) |
ಮೊಬೈಲ್ | Rs 499 | 1 ವರ್ಷ | 1 device (ಒಂದು ಮೊಬೈಲ್ ಗೆ ಮಾತ್ರವೇ ಅವಕಾಶ) |
ಸೂಪರ್ | Rs 299 | 3 ತಿಂಗಳು | 2 devices ( ಏಕಕಾಲಕ್ಕೆ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ , ಮತ್ತು ಟಿವಿಯಲ್ಲಿ ಬಳಕೆ ಮಾಡಬಹುದು) |
ಸೂಪರ್ | Rs 899 | 1 ವರ್ಷ | 2 devices (ಏಕಕಾಲಕ್ಕೆ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ , ಮತ್ತು ಟಿವಿಯಲ್ಲಿ ಬಳಕೆ ಮಾಡಬಹುದು) |
ಆ್ಯಡ್ ಫ್ರೀ ಪ್ಲಾನ್ಸ್ | |||
ಪ್ರೀಮಿಯಂ | Rs 299 | 1 ತಿಂಗಳೂ | 4 devices (ಏಕಕಾಲಕ್ಕೆ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ , ಮತ್ತು ಟಿವಿಯಲ್ಲಿ ಬಳಕೆ ಮಾಡಬಹುದು) |
ಪ್ರೀಮಿಯಂ | Rs 499 | 3 ತಿಂಗಳು | 4 devices (ಏಕಕಾಲಕ್ಕೆ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ , ಮತ್ತು ಟಿವಿಯಲ್ಲಿ ಬಳಕೆ ಮಾಡಬಹುದು) |
ಪ್ರೀಮಿಯಂ | Rs 1,499 | 1 ವರ್ಷ | 4 devices (ಏಕಕಾಲಕ್ಕೆ ಮೊಬೈಲ್, ಪಿಸಿ/ಲ್ಯಾಪ್‌ಟಾಪ್ , ಮತ್ತು ಟಿವಿಯಲ್ಲಿ ಬಳಕೆ ಮಾಡಬಹುದು) |
ಇದನ್ನು ಓದಿ: ಇಂದಿನಿಂದ ಚಾಂಪಿಯನ್ಸ್ ಟ್ರೋಫಿ ಪ್ರಾರಂಭ: ಪಂದ್ಯಗಳು ಉಚಿತವಾಗಿ ವೀಕ್ಷಿಸಬಹುದೆ?