ಜಲಗಾಂವ, (ಮಹಾರಾಷ್ಟ್ರ): ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಕಾರ್ಯಕರ್ತರ ಶೂ-ಚಪ್ಪಲಿಗಳನ್ನ ಕೈಯಲ್ಲಿ ಹಿಡ್ಕೊಂಡು ಬಡಿದಾಡಿಕೊಂಡಿರುವ ಘಟನೆ ಜಲಗಾಂವ್‌ನಲ್ಲಿ ನಡೆದಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪ್ರಭಾವಿ ಸಚಿವ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಕಾರ್ಯಕರ್ತರ ಜಂಟಿ ಪ್ರಚಾರ ಸಭೆ ನಡೆದಿತ್ತು. ಜಲಗಾಂವ್‌ನ ಬಿಜೆಪಿ ಮಾಜಿ ಶಾಸಕ ಬಿ.ಎಸ್ ಪಾಟೀಲ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಉದಯ್ ವಾಘ್ ಈ ಇಬ್ಬರೂ ನಾಯಕರ ಮಧ್ಯೆ ಮಾತಿನ ಕದನವೇರ್ಪಟ್ಟಿತ್ತು.
ಇದು ಉಭಯ ನಾಯಕರ ಬೆಂಬಲಿಗರನ್ನ ಕೆರಳಿಸಿತ್ತು. ಇದ್ದಕ್ಕಿದ್ದಂತೆಯೇ ಸ್ಟೇಜ್ ಮೇಲೆ ಹತ್ತಿದ ಉಭಯ ನಾಯಕರ ಬೆಂಬಲಿಗರು ಚಪ್ಪಲಿ, ಶೂಗಳನ್ನ ಕೈಯಲ್ಲಿ ಹಿಡಿದು ಹೊಡೆದಾಡಿಕೊಂಡರು. ಸ್ಜೇಜ್ ಮೇಲೆನಿಂದಲೇ ಕೆಳಗೆ ತಳ್ಳಿದರು. ಶಿವಸೇನೆ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನ ಕಿಕ್ ಮಾಡಿದ್ರೇ, ಬಿಜೆಪಿ ವರ್ಕರ್ಸ್ ಕೂಡ ಶಿವಸೇನೆ ಕಾರ್ಯಕರ್ತರನ್ನ ಒದೆಯುತ್ತಿದ್ದರು. ಇದೆಲ್ಲ ಫೈಟಿಂಗ್ ನಡೀತಿರುವಾಗ ಸ್ಜೇಜ್ ಮೇಲೆಯೇ ಸಚಿವ ಗಿರೀಶ್ ಮಹಾಜನ್ ಸಾಕ್ಷಿಯಾಗಿದ್ದರು.
ಸಚಿವರು ಉದ್ರಿಕ್ತ ಕಾರ್ಯಕರ್ತರನ್ನ ಸಮಾಧಾನಪಡಿಸೋದಕ್ಕೆ ಎಷ್ಟೇ ಸರ್ಕಸ್ ಮಾಡಿದ್ರೂ ಪರಿಸ್ಥಿತಿ ತಿಳಿಗೊಳ್ಳಲೇ ಇಲ್ಲ. ಇದೆಲ್ಲ ಆದ ಮೇಲೆ ಪೊಲೀಸರು ಉದ್ರಿಕ್ತ ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದರು.ಸ್ಟೇಜ್ ತಳ್ಳಾಟ-ನೂಕಾಟ, ಸಿಕ್ಕ ಸಿಕ್ಕವರನ್ನ ಕಿಕ್ ಮಾಡಿದ್ದು, ಕೈಯಲ್ಲಿರೋ ಶೂ ಮತ್ತು ಚಪ್ಪಲಿಗಳಿಂದ ಪರಸ್ಪರರು ಬಡಿದಾಡಿಕೊಂಡಿರೋ ದೃಶ್ಯವೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.