ETV Bharat / briefs

ಕೊನೆಯ ಓವರ್​ನಲ್ಲಿ ನಾಲ್ಕು ಬೌಂಡರಿ ಸಿಡಿಸಿ ಧೋನಿ ಆಟ ನೆನೆಪಿಸಿದ ಕೌರ್..

author img

By

Published : May 7, 2019, 8:27 AM IST

ಕೊನೆಯ ಓವರ್​ನಲ್ಲಿ 4 ಬೌಂಡರಿ ಸಿಡಿಸಿದ ಕೌರ್​ ಗೆಲುವಿಗೆ ಬೇಕಿದ್ದ 19 ರನ್​ಗಳನ್ನು ತಲುಪಲು ವಿಫಲರಾದರೂ ಏಕಾಂಗಿಯಾಗಿ ತಾಳ್ಮೆಯಿಂದ ಬ್ಯಾಟಿಂಗ್​ ನಡೆಸಿದ ಹರ್ಮನ್​ ಪ್ರೀತ್​ ಕೌರ್​ ಮಹಿಳಾ ಕ್ರಿಕೆಟ್​ನ ಧೋನಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು.

ss

ಜೈಪುರ: ಭಾರತ ತಂಡದ ನಾಯಕಿ ಹರ್ಮನ್​ ಪ್ರೀತ್​ಕೌರ್​ ಕೊನೆಯ ಓವರ್​ನಲ್ಲಿ ಗೆಲುವಿಗೆ ಬೇಕಿದ್ದ 19 ರನ್​ಗಳಲ್ಲಿ 4 ಬೌಂಡರಿ ಸಿಡಿಸಿ ವಿಶ್ವಶ್ರೇಷ್ಠ ಫಿನಿಷರ್​ ಧೋನಿ ಆಟವನ್ನು ನೆನಪಿಸಿದರು. ಆದರೆ, ಕೌರ್​ ಕೊನೆಯ ಎಸೆತದಲ್ಲಿ 3 ರನ್​ಗಳಿಸಲು ವಿಫಲರಾದ ಹಿನ್ನೆಲೆ ಅವರ ತಂಡ 2 ರನ್​ಗಳ ರೋಚಕ ಸೋಲು ಕಂಡಿತು.

ಕ್ರಿಕೆಟ್​ ಜಗತ್ತಿನ ಶ್ರೀಮಂತ ಹಾಗೂ ಜನಪ್ರಿಯ ಟಿ-20 ಲೀಗ್​ ಆದ ಐಪಿಎಲ್ ಲೀಗ್​ನಲ್ಲಿ ಮಹಿಳಾ ಕ್ರಿಕೆಟ್​ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ 3 ತಂಡಗಳ ಮಿನಿ ಟಿ-20 ಚಾಲೆಂಜ್​ನ ಬಿಸಿಸಿಐ ಆಯೋಜಿಸಿದೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ​ಭಾರತ ಟಿ-20 ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್ ನೇತೃತ್ವದ ಸೂಪರ್​ ನೋವಾಸ್​​ ತಂಡ ಸ್ಮೃತಿ ಮಂಧಾನರ ನೇತೃತ್ವದ ಟ್ರೈಲ್​ಬ್ಲೇಜರ್​ ತಂಡದ ವಿರುದ್ಧ 2 ರನ್​ಗಳ ರೋಚಕ ಸೋಲು ಕಂಡಿತು. ಕೊನೆಯ ಓವರ್​ನಲ್ಲಿ ಕೌರ್​ ಕೆಚ್ಚೆದೆಯ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಮೊದಲು ಬ್ಯಾಟಿಂಗ್​ ನಡೆಸಿದ್ದ ಟ್ರೈಲ್​ಬ್ಲೇಜರ್​ ಮಂಧಾನರ 90 ರನ್​ಗಳ ನೆರವಿನಿಂದ 140ರನ್​ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಕೌರ್​ ಬಳಗಕ್ಕೆ ಸಾಮರಿ ಅಟಪಟ್ಟು 26, ರೋಡ್ರಿಗಸ್​ 24, ಕೌರ್​ 46 ಹಾಗೂ ಡಿವೀನ್​ 32 ರನ್​ಗಳಿಸಿ ಗೆಲುವಿಗೆ ಪ್ರಯತ್ನಿಸಿದರಾದರೂ 20 ಓವರ್​ಗಳಲ್ಲಿ 138 ರನ್​ಳಿಸಿ 2 ರನ್​ಗಳ ಸೋಲನುಭವಿಸಿದರು.

ರೋಚಕ ಹಣಾಹಣಿಗೆ ಸಾಕ್ಷಿಯಾದ ಕೌರ್​-ಗೋಸ್ವಾಮಿ ಕಾಳಗ :

ಕೊನೆಯ ಓವರ್​ನಲ್ಲಿ 19 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಜೂಲಾನ ಗೋಸ್ವಾಮಿ ಎಸೆದ ಕೊನೆಯ ಓವರ್​ನಲ್ಲಿ ಮೊದಲ ಎರಡು ಎಸೆತಗಳನ್ನು ಕೌರ್​ ಬೌಂಡರಿಗಟ್ಟಿದರು. ನಂತರದ ಎಸೆತ ಡಾಟಾದರೆ, 4 ಮತ್ತು 5 ನೇ ಎಸೆತದಲ್ಲಿ ಕೌರ್​ ಮತ್ತೆರಡು ಬೌಂಡರಿ ಸಿಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 3 ರನ್​ಗಳ ಅವಶ್ಯಕತೆಯಿತ್ತು. ಆದರೆ, ಗೋಸ್ವಾಮಿ ಸ್ಲೋ ಬಾಲನ್ನು ಎದುರಿಸಲು ಕೌರ್​ ವಿಫಲರಾದರು. ಚೆಂಡು ನೇರವಾಗಿ ಕೀಪರ್​ ಸೇರಿ ರನ್​ಔಟ್​ ಆಯಿತು. ಆದರೂ ಗೋಸ್ವಾಮಿಯಂತಹ ವಿಶ್ವಶ್ರೇಷ್ಠ ವೇಗದ ಬೌಲರ್​ಗೆ ಕೊನೆಯ ಓವರ್​ನಲ್ಲಿ 4 ಬೌಂಡರಿ ಸಿಡಿಸಿ ಪಂದ್ಯವನ್ನು ಅಂತಿಮ ಬಾಲ್​ವರಗೆ ತೆಗೆದುಕೊಂಡು ಹೋದ ಕೌರ್​ ಆಟ ಭಾರತದ ಕೂಲ್​ ಕ್ಯಾಪ್ಟನ್​ ಧೋನಿಯನ್ನ ನೆನೆಪಿಸಿತು. ಧೋನಿ ಕೂಡ ಕೊನೆಯ ಓವರ್​ನಲ್ಲಿ ಇಂತಹ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿ ವಿಶ್ವ ಶ್ರೇಷ್ಠ ಫಿನಿಷರ್​ ಎಂಬ ಹೆಸರು ಪಡೆದಿದ್ದಾರೆ.

ಹರ್ಮನ್​ ಪ್ರೀತ್​ ಕೌರ್​ ಹಿಂದೊಮ್ಮೆ ದ.ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ತಂಡ 9 ವಿಕೆಟ್​ ಕಳೆದುಕೊಂಡಿದ್ದರೂ ಕೊನೆಯ ಓವರ್​​ನಲ್ಲಿ ಸಿಕ್ಸರ್​ ಸಿಡಿಸಿ ತಂಡಕ್ಕೆ 1 ವಿಕೆಟ್​ನಿಂದ ರೋಚಕ ಜಯ ತಂದುಕೊಟ್ಟಿದ್ದರು. ಅಂದೇ ಕೌರ್​ರನ್ನು ಮಹಿಳಾ ಕ್ರಿಕೆಟ್​ನ ಧೋನಿ ಎಂದು ಕ್ರಿಕೆಟ್​ ಪಂಡಿತರು ಕರೆದಿದ್ದರು. ನಿನ್ನೆ ಮತ್ತೊಮ್ಮೆ ಅದನ್ನು ಕೌರ್​ ಸಾಬೀತುಪಡಿಸಿದರು.

ಕೊನೆಯ ಓವರ್​ ವಿಡಿಯೋ ಹರ್ಮನ್​ ಪ್ರೀತ್​ ಕೌರ್​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.