ಬೆಂಗಳೂರು: ಇಂದು ಇಹಲೋಕ ತ್ಯಜಿಸಿರುವ ಗಿರೀಶ್ ಕಾರ್ನಾಡ್ರದ್ದು ಬಹುಮುಖ ವ್ಯಕ್ತಿತ್ವ. ಸಾಹಿತ್ಯ, ನಾಟಕ, ನಟನೆಯಲ್ಲಿ ಕಾರ್ನಾಡ್ ತಮ್ಮದೇ ಆದ ಹೆಜ್ಜೆ ಗುರುತುಗಳನ್ನ ಮೂಡಿಸಿದ್ದರು.
ಗಿರೀಶ್ ಕಾರ್ನಾಡ್ ಬಾಲ್ಯದ ಶಿಕ್ಷಣ ಉತ್ತರ ಕನ್ನಡದಲ್ಲಿ ಪೂರೈಸಿ ನಂತರದ ಧಾರವಾಡ ಬಾಸೆಲ್ ಮಿಶನ್ ಹೈಸ್ಕೂಲ್ನಲ್ಲಿ ಪದವಿ ಪಡೆಯುತ್ತಾರೆ. ಇದೇ ವೇಳೆ ಕಾರ್ನಾಡರಿಗೆ ವಿದೇಶಕ್ಕೆ ತೆರಳುವ ಆಸೆಯಾಗುತ್ತದೆ. ಇದಕ್ಕೆ ಕಾರ್ನಾಡ್ ಮಾಡಿದ ಪ್ಲಾನ್ ಹೀಗಿತ್ತು...
'ಕಾಡು' ನೆನಪಿಸಿದ ಬಹುರೂಪಿ ಸಂಸ್ಕಾರ ಕಾರ್ನಾಡ್‌ರದು.. ಅವರು 'ಒಂದಾನೊಂದು ಕಾಲದಲ್ಲಿ' ಹಯವದನ..
ವಿದೇಶಕ್ಕೆ ತೆರಳಿ ಅಲ್ಲಿ ಶಿಕ್ಷಣ ಪಡೆಯಬೇಕು ಎನ್ನುವ ಆಸೆ ಕಾರ್ನಾಡರಲ್ಲಿ ಚಿಗುರೊಡೆಯುತ್ತದೆ. ಆದರೆ, ತಮ್ಮ ತಂದೆ ಅಷ್ಟೊಂದು ಸ್ಥಿತಿವಂತರಲ್ಲ ಎನ್ನುವುದೂ ತಿಳಿದಿತ್ತು. ಆದರೆ, ಫಾರಿನ್ ಶಿಕ್ಷಣದ ಕನಸನ್ನು ನನಸು ಮಾಡಬೇಕು ಎನ್ನುವ ದೃಢ ನಿರ್ಧಾರಕ್ಕೆ ಕಾರ್ನಾಡರು ಬರುತ್ತಾರೆ. ಗಣಿತವನ್ನು ಅತಿಯಾಗಿ ದ್ವೇಷಿಸುತ್ತಿದ್ದ ಡಾ. ಗಿರೀಶ್ ಕಾರ್ನಾಡ್ರನ್ನು ವಿದೇಶಕ್ಕೆ ತೆರಳಲು ಸಹಾಯ ಮಾಡಿದ್ದ ಇದೇ ಗಣಿತ ವಿಷಯ. ಫಾರಿನ್ ಶಿಕ್ಷಣಕ್ಕೆ ತೆರಳಲು ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಬೇಕಿತ್ತು. ಹೀಗಾದರೆ ಸ್ಕಾಲರ್ಶಿಪ್ ಮೂಲಕ ವಿದೇಶಕ್ಕೆ ತೆರಳಬಹುದಿತ್ತು.
ಬಹುಮುಖ ಪ್ರತಿಭೆಯ ಕಾರ್ನಾಡ್‌ರ ಅಭಿನಯ ಶ್ಲಾಘಿಸಿದ ಪ್ರಧಾನಿ ಮೋದಿ.. ಟ್ವಿಟರ್‌ನಲ್ಲಿ ನಮೋ ಸಂತಾಪ!
ಕನ್ನಡ, ಇತಿಹಾಸ ಅಥವಾ ಇಂಗ್ಲೀಷ್ ವಿಷಯವನ್ನು ಆರಿಸಿಕೊಂಡರೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣವಾಗುವುದು ಕಷ್ಟಕರ ಎಂದು ತಿಳಿದಿದ್ದ ಗಿರೀಶ್ ಕಾರ್ನಾಡ್ ಗಣಿತವನ್ನು ಆಯ್ದುಕೊಂಡರು. ಗಣಿತ ಆರಿಸಿಕೊಂಡಿದ್ದ ಕಾರ್ನಾಡ್ ಯುನಿವರ್ಸಿಟಿಗೆ ಮೊದಲಿಗನಾದರು. ಆಸೆಯಂತೆ ಸ್ಕಾಲರ್ಶಿಪ್ ಮೂಲಕ ವಿದೇಶಕ್ಕೆ ಹಾರಿದರು. ನಂತರ ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್‌ಫರ್ಡ್ ಯೂನಿಯನ್ ಅಧ್ಯಕ್ಷ ಸ್ಥಾನ ವಹಿಸಿಕೊಂಡರು.