ETV Bharat / briefs

ಬೆಂಗಳೂರಿಂದ ಹುಟ್ಟೂರಿಗೆ ಬರುವಾಗ ಬಸ್​​ನಲ್ಲೇ ಕೊನೆಯುಸಿರೆಳೆದ ಸಾಫ್ಟ್​​​ವೇರ್​ ಉದ್ಯೋಗಿ!

ಬೆಂಗಳೂರಿನಿಂದ ಹುಟ್ಟೂರಿಗೆ ಕುಟುಂಬಸ್ಥರನ್ನು ಕಾಣಲು ಹೊರಟಿದ್ದ ಸಾಫ್ಟ್​​ವೇರ್ ಉದ್ಯೋಗಿಯೊಬ್ಬರು ಹೃದಯಾಘಾತದಿಂದ ಬಸ್​​ನಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

Software employe died in bus
Software employe died in bus
author img

By

Published : Jun 16, 2020, 6:27 PM IST

ಉಡುಪಿ: ಹುಟ್ಟೂರಿಗೆ ಮರಳುವಾಗ ಹ್ರದಯಾಘಾತದಿಂದ ಬಸ್​​​ನಲ್ಲೇ ಸಾಫ್ಟ್​​​ವೇರ್ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೋಟೇಶ್ವರ ಕುಂಬ್ರಿ ನಿವಾಸಿ ಚೈತನ್ಯ (25) ಮೃತ ದುರ್ದೈವಿ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದ ಯುವಕ, ಎರಡು ವರ್ಷಗಳಿಂದ ಮಾರತಹಳ್ಳಿಯಲ್ಲಿ ಸಾಫ್ಟ್​ವೇರ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಕೆಲಸ‌ ಕಡಿಮೆ ಇರುವ‌ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ, ಸೋಮವಾರ ರಾತ್ರಿ ಖಾಸಗಿ ಬಸ್​​ನಲ್ಲಿ ಊರಿಗೆ ತೆರಳಿದ್ದ. ಬೆಳಿಗ್ಗೆ 6.30ರ ಸುಮಾರಿಗೆ ಕರೆ ‌ಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದ.

ಕೋಟೇಶ್ವರ ಬಂದರೂ ಚೈತನ್ಯ ಇಳಿಯದ ಹಿನ್ನೆಲೆ ನಿರ್ವಾಹಕನಿಗೆ ಅನುಮಾನ ಬಂದಿತ್ತು. ಹತ್ತಿರ ಬಂದಾಗ ಚೈತನ್ಯ ಅಸ್ವಸ್ಥಗೊಂಡು ಮಲಗಿದ್ದರು. ಮನೆಯವರ ಕರೆ ಸ್ವೀಕರಿಸಿ ವಿಷಯ ಮುಟ್ಟಿಸಿದ ನಿರ್ವಾಹಕ, ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಅಷ್ಟರಲ್ಲಾಗಲೇ ಚೈತನ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.