ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನ ಎಸ್ಐಟಿ ಚುರುಕುಗೊಳಿಸಿದೆ.
ಎಡಿಜಿಪಿ ಡಾ. ಸಲೀಂ, ಡಿಐಜಿ ರವಿಕಾಂತೇಗೌಡ, ಡಿಸಿಪಿ ಗಿರೀಶ್, ಎಸಿಪಿ ಬಾಲರಾಜ್ ಸೇರಿದಂತೆ ಅಶೋಕ ನಗರದ ಕೆಎಸ್ಆರ್ಪಿ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳ ಮಹತ್ವ ಸಭೆ ನಡೆಸಲಾಗುತ್ತಿದೆ.
ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿಯ ಆಧಾರದ ಚರ್ಚೆ ನಡೆಸಿ ಯಾವ ತಂಡ ಏನು ಮಾಡಬೇಕು ಎಂಬ ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.
ಈಗಾಗೇ ಕಮರ್ಷಿಯಲ್ ಪೊಲೀಸರ ಒಂದು ತಂಡ ಆರೋಪಿ ಮನ್ಸೂರ್ ಬಗ್ಗೆ ಮಾಹಿತಿ ಕಲೆ ಹಾಕಲಿದ್ದು, ಮತ್ತೊಂದು ತಂಡ ಆರೋಪಿಯ ಪ್ರಾಪರ್ಟಿ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.
27ಸಾವಿರ ದೂರು ದಾಖಲು:
ಮತ್ತೊಂದೆಡೆ ಕಳೆದ ಐದು ದಿನಗಳಿಂದ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಕೂಡ ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ 27 ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲಾಗಿದ್ದು, ಬರೊಬ್ಬರಿ ಎರಡು ಮೂರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ಶಂಕೆ ಬೆಳಕಿಗೆ ಬಂದಿದೆ.