ETV Bharat / briefs

ಪ್ಲೇಯರ್​ ಚಾಂಪಿಯನ್​ಶಿಪ್​: ಬರೋಬ್ಬರಿ ₹16.6 ಕೋಟಿ ಗೆದ್ದ ಭಾರತದ ಗಾಲ್ಫರ್​ ಅನಿರ್ಬನ್​ ಲಾಹಿರಿ - Cameron Smith

ಭಾರತೀಯ ಕ್ರೀಡೆಯಲ್ಲಿ ಐಪಿಎಲ್​ನಲ್ಲಾಡುವ ಕ್ರಿಕೆಟ್‌ ಆಟಗಾರರೇ ಇದುವರೆಗೂ ಕೋಟಿಗಟ್ಟಲೆ ವೇತನ ಅಥವಾ ನಗದು ಬಹುಮಾನ ಪಡೆಯುತ್ತಿದ್ದರು. ಆದರೆ ಇತರೆ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ 16.6 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ಭಾರತ ಮೂಲದ ಕ್ರೀಡಾಳು ಅನಿರ್ಬನ್​ ಪಡೆದುಕೊಂಡಿದ್ದಾರೆ.

Record Rs 17 crore pay day for Anirban Lahiri
16.6 ಕೋಟಿ ಗೆದ್ದ ಭಾರತದ ಗಾಲ್ಫರ್​ ಅನಿರ್ಬನ್​ ಲಾಹಿರಿ
author img

By

Published : Mar 16, 2022, 10:32 PM IST

ನವದೆಹಲಿ: ಭಾರತದ ಗಾಲ್ಫರ್​ ಅನಿರ್ಬನ್ ಲಾಹಿರಿ ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಪ್ಲೇಯರ್ ಚಾಂಪಿಯನ್​ಶಿಪ್ ಗಾಲ್ಫ್‌​ನಲ್ಲಿ ರನ್ನರ್​ ಅಪ್​ ಆಗುವ ಮೂಲಕ 16.6 ಕೋಟಿ ರೂ. ಬಹುಮಾನ ಮೊತ್ತವನ್ನು ಜೇಬಿಗಿಳಿಸಿದ್ದಾರೆ.

ಭಾರತೀಯ ಕ್ರೀಡೆಯಲ್ಲಿ ಐಪಿಎಲ್​ನಲ್ಲಾಡುವ ಆಟಗಾರರೇ ಇದುವರೆಗೂ ಕೋಟಿಗಟ್ಟಲೆ ವೇತನ ಅಥವಾ ಬಹುಮಾನವನ್ನು ಪಡೆಯುತ್ತಿದ್ದರು. ಆದರೆ ಇತರೆ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡಮೊತ್ತವನ್ನು ಗಾಲ್ಫರ್​ ಅನಿರ್ಬನ್​ ಪಡೆದು ಕ್ರೀಡಾಲೋಕದ ಗಮನ ಸೆಳೆದಿದ್ದಾರೆ.

20 ಮಿಲಿಯನ್ ಯುಎಸ್​ಡಿ (152.3 ಕೋಟಿ ರೂ) ಮೊತ್ತದ ಟೂರ್ನಮೆಂಟ್​​ನಲ್ಲಿ ಅನಿರ್ಬನ್​ 2ನೇ ಸ್ಥಾನ ಪಡೆಯುವ ಮೂಲಕ 2.18 ಮಿಲಿಯನ್ ಯುಎಸ್​ಡಿ (26.7 ಕೋಟಿ ರೂ) ಪಡೆದುಕೊಂಡರು. ಇದೇ ವೇಳೆ, ಅವರು ಕೇವಲ ಒಂದೇ ಒಂದು ಸ್ಟ್ರೋಕ್​​ ಅಂತರದಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಅಪೂರ್ವ ಅವಕಾಶವನ್ನು ತಪ್ಪಿಸಿಕೊಂಡರು. ಆದರೂ ರನ್ನರ್ ಅಪ್ ಆಗುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿಯೇ ಒಂದು ವಾರದ ಟೂರ್ನಮೆಂಟ್​ನಲ್ಲಿ ಗೆದ್ದ ಅತ್ಯಂತ ದೊಡ್ಡ ಮೊತ್ತ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

34 ವರ್ಷದ ಗಾಲ್ಫರ್​ ತನ್ನ ವೃತ್ತಿ ಜೀವನದಲ್ಲಿ 2ನೇ ಬಾರಿಗೆ ಪ್ರತಿಷ್ಠಿತ ಟೂರ್ನಮೆಂಟ್​ನಲ್ಲಿ ರನ್ನರ್​ ಅಪ್​ ಆದರು. 322ನೇ ಶ್ರೇಯಾಂಕ ಹೊಂದಿರುವ ಲಾಹಿರಿ 2019ರಲ್ಲಿ 74ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಈ ಚಾಂಪಿಯನ್​ಶಿಪ್​ನಲ್ಲಿ ರನ್ನರ್​ ಅಪ್ ಆಗುವ ಮೂಲಕ ವಿಶ್ವ ಗಾಲ್ಫ್​ ಶ್ರೇಯಾಂಕದಲ್ಲಿ 89ನೇ ಸ್ಥಾನಕ್ಕೆ ಲಗ್ಗೆಯಿಟ್ಟರು.

ಇನ್ನು ಚಾಂಪಿಯನ್​ ಆದ ಆಸ್ಟ್ರೇಲಿಯಾದ ಕ್ಯಾಮರಾನ್ ಸ್ಮಿತ್‌ ಬಹುಮಾನ ಮೊತ್ತವಾಗಿ 27.4 ಕೋಟಿ ರೂ ಕೋಟಿ ಬಾಚಿಕೊಂಡರು.

ಇದನ್ನೂ ಓದಿ: ಐಪಿಎಲ್​ಗೆ ಹೊಸ ರೂಪದಲ್ಲಿ ರೀ ಎಂಟ್ರಿ ಕೊಡಲಿದ್ದಾರೆ ಸುರೇಶ್​ ರೈನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.