ETV Bharat / briefs

ಸಿಲಿಕಾನ್​ ಸಿಟಿಯಲ್ಲಿ ಹರಿದ ನೆತ್ತರು, ರೌಡಿಗಳ ಕಾಳಗಕ್ಕೆ ಬಿತ್ತೊಂದು ಹೆಣ

ಯಾವಾಗಲೂ ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತಿದ್ದ ಎನ್ನಲಾದ ಒಂಡ್ರೆ, ನಿನ್ನೆ ಸ್ನೇಹಿತನೊಂದಿಗೆ ಹೊರಹೋಗಿದ್ದ. ಈ ವೇಳೆ ನಾಲ್ವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಆತನ ಮೇಲೆ ದಾಳಿ ನಡೆಸಿದೆ.

author img

By

Published : Jun 4, 2019, 6:15 PM IST

ಪ್ರಕಾಶ್ ಅಲಿಯಾಸ್ ಒಂಡ್ರೆ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ರೌಡಿಗಳ ನಡುವಿನ ದ್ವೇಷಕ್ಕೆ ಮತ್ತೆ ನೆತ್ತರು ಹರಿದಿದೆ. ತಡರಾತ್ರಿ ರೌಡಿಶೀಟರ್​ನನ್ನು ನಾಲ್ವರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ.

ರೌಡಿಶೀಟರ್​ ಪ್ರಕಾಶ್ ಅಲಿಯಾಸ್ ಒಂಡ್ರೆ (28) ಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈತ ನಗರದ ಹಲಸೂರು ಬಳಿಯ ಮರ್ಫಿಟೌನ್ ನಲ್ಲಿ ವಾಸವಾಗಿದ್ದ. ಈ ಹಿಂದೆ ಗೂಂಡಾ ಕಾಯ್ದೆ ಅಡಿಯಲ್ಲಿ ಪೊಲೀಸರ ಅತಿಥಿಯಾಗಿದ್ದ. 2013ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿ ಸೇರಿದ್ದ ಒಂಡ್ರೆ, ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿಶೀಟರ್ ಕೊಲೆ

ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತಿದ್ದ ಒಂಡ್ರೆ, ನಿನ್ನೆ ಸ್ನೇಹಿತನೊಂದಿಗೆ ಹೊರಹೋಗಿದ್ದನಂತೆ. ಈ ವೇಳೆ ನಾಲ್ವರು ದುಷ್ಕರ್ಮಿಗಳು ಆಟೋದಲ್ಲಿ ಒಂಡ್ರೆಯನ್ನು ಫಾಲೋ ಮಾಡಿದ್ದಾರೆ. ಕೊನೆಗೆ ಮದ್ರಾಸ್ ರಸ್ತೆಯ ತಾಮರೈ ಕಣನ್ ಸಿಗ್ನಲ್ ಬಳಿ ಅಡ್ಡಗಟ್ಟಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಒಂಡ್ರೆ ತಲೆ, ಎದೆ ಮತ್ತು ಕುತ್ತಿಗೆಯ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಳೆದ್ವೇಷ ಹಾಗೂ ಅಕ್ರಮ ಸಂಬಂಧ ಕೊಲೆಗೆ ಕಾರಣ ಎಂದು ಅನುಮಾನಿಸಲಾಗಿದೆ. ಮತ್ತೊಬ್ಬ ರೌಡಿಶೀಟರ್ ಲಾಲ್ ಅಂಡ್ ಗ್ಯಾಂಗ್ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಹಲಸೂರು ಖಾಕಿ ಪಡೆ ಬಲೆ ಬೀಸಿದ್ದಾರೆ.

Intro:ರೌಡಿಶೀಟರ್ನನ್ನ ಕೊಚ್ಚಿ ಕೆಡವಿದ ದುಷ್ಕರ್ಮಿಗಳು.
ಹಳೇ ವೈಷಮ್ಯದ ಹಿನ್ನೆಲೆ ಕೊಲೆ ಶಂಕೆ

ಭವ್ಯ

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ನಿನ್ನೆ ರಾತ್ರಿ‌‌ ಕಾಶಿ ಪ್ರಕಾಶ್ ಅಲಿಯಾಸ್ ಒಂಡ್ರೆ ಯನ್ನ ದುಷ್ಕರ್ಮಿಗಳು ಕೊಚ್ವಿ ಕೊಲೆ ಮಾಡಿದ್ದಾರೆ. ಕೊಲೆಯಾದವನ ವಯಸ್ಸು ಇನ್ನು 28 ವರ್ಷ, ಬೆಂಗಳೂರಿನ ಹಲಸೂರು ಬಳಿ ಇರುವ ಮರ್ಫಿ ಟೌನ್ ನಲ್ಲಿ ವಾಸವಾಗಿದ್ದ .. ಈತನನ್ನ ನೆನ್ನೆ ರಾತ್ರಿ 4 ಜನ ದುಷ್ಕರ್ಮಿಗಳ ತಂಡ ಮನಬಂದಂತೆ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇನ್ನು ಕೊಲೆಯಾದ ರೌಡಿಶೀಟರ್ ಕಾಶಿ ಪ್ರಕಾಶ್ ಏನೂ ಕಡಿಮೆ ಇಲ್ಲಾ. ಈತನ ಸಾಧನೆ ಏನು ಅಂತ ನೋಡೋಕೆ ಹೋದ್ರೆ ಈತನೊಬ್ಬ ಖತರ್ನಾಕ್ ರೌಡಿಶೀಟರ್, ಜೊತೆಗೆ ಗೂಂಡಾ ಆ್ಯಕ್ಟ್ ನಲ್ಲಿ ಈ ಹಿಂದೆ ಪೊಲೀಸ್ರ ಅಥಿತಿಯಾಗಿದ್ದ. 2013 ರಲ್ಲಿ ಕೊಲೆ ಪ್ರಕರಣ ದಡಿ ಜೈಲಿನಲ್ಲಿ ಮುದ್ದೆ ಮುರಿದು ಬಂದಿದ್ದ. ಕಳೆದ ಕೆಲ ದಿನಗಳ ಹಿಂದಷ್ಟೇ ಕಾಶಿ ಜೈಲಿನಿಂದ ಬಿಡುಗಡೆಯಾಗಿದ್ದ, ಯಾವಾಗಲು ದುಷ್ಮನ್ಗಳ ಬಗ್ಗೆ ಎಚ್ಚರ ವಹಿಸುತಿದ್ದ ಆತ ಗೆಳೆಯನ ಜೊತೆ ಬೈಕ್ ನಲ್ಲಿ ನಿನ್ನೆ ರಾತ್ರಿ ಹೋಗೊದನ್ನ ಅಚಾನಕ್ ಆಗಿ ದುಷ್ಕರ್ಮಿಗಳು ನೋಡಿದ್ದಾರೆ.ನಂತರ ಆಟೋದಲ್ಲಿ ಫಾಲೋ ಮಾಡಿಕೊಂಡು ಬಂದ ನಾಲ್ಕು ಜನ ಆರೋಪಿಗಳು ಮದ್ರಾಸ್ ರಸ್ತೆಯ ತಾಮರೈ ಕಣನ್ ಸಿಗ್ನಲ್ ಬಳಿ ಅಡ್ಡಗಟ್ಟಿ ತಲೆ, ಎದೆ ಹಾಗೂ ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಹಳೆದ್ವೇಷದ ಹಿನ್ನಲೆ ಹಾಗೂ ಅಕ್ರಮ ಸಂಬಂಧಕ್ಕೆ ಮತ್ತೊಬ್ಬ ರೌಡಿಶೀಟರ್ ಲಾಲ್ ಅಂಡ್ ಗ್ಯಾಂಗ್ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಹಲಸೂರು ಖಾಕಿ ಪಡೆ ಬಲೆ ಬೀಸಿ ತನಿಖೆ ಮುಂದುವರೆಸಿದ್ದಾರೆ.

ಬೈಟ್ : ಸೀಮಂತ್ ಕುಮಾರ್ ಸಿಂಗ್ : ಹೆಚ್ಚುವರಿ ಪೊಲೀಸ್ ಆಯುಕ್ತರು

Body:KN_BNG_04_4_BNG_MURDER_7204498 BHAVYAConclusion:KN_BNG_04_4_BNG_MURDER_7204498 BHAVYA

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.