ಪುಣೆ(ಮಹಾರಾಷ್ಟ್ರ): ನಮಗೆ ಲಸಿಕೆಯ ಅಗತ್ಯವಿದೆ, ಹಾಗಾಗಿ 25 ಲಕ್ಷ ರೂ.ಗಳ ಲಸಿಕೆಯನ್ನು ಪೂರೈಸಿ ಎಂದು ಪುಣೆ ಮೇಯರ್ ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒಗೆ ಪತ್ರ ಮುಖೇನ ಕೋರಿದ್ದಾರೆ.
'ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುತ್ತೇವೆ, ಆದರೆ ನೀವು ಈಗಿನಿಂದಲೇ ನಮಗೆ 25 ಲಕ್ಷ ಲಸಿಕೆಗಳನ್ನು ನೀಡಿ ಎಂದು ಮೇಯರ್ ಮುರಳೀಧರ್ ಮೊಹೋಲ್ ಹೇಳಿದ್ದಾರೆ.
ಪುಣೆಯಲ್ಲಿ ಲಸಿಕೆಗಳ ಕೊರತೆಯಿಂದಾಗಿ, ಮಹಾನಗರ ಪಾಲಿಕೆಗೆ ಸೂಕ್ತ ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಲಸಿಕೆಯನ್ನು ಸ್ವತಃ ಖರೀದಿಸಲು ನಿಗಮ ನಿರ್ಧರಿಸಿದೆ. ಈ ಕುರಿತು ಸೀರಮ್ ಸಂಸ್ಥೆಯೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.