ರಾಮನಗರ : ತಿಥಿ ಕಾರ್ಡ್ ಹಂಚುವ ವೇಳೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುವ ಮೂಲಕ ಪ್ರಚಾರ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಈ ಕುರಿತಾದ ವಿಡಿಯೋ ಈಗ ವೈರಲ್ ಆಗಿದೆ.
ಜಿಲ್ಲೆಯ ಗೌಡಯ್ಯನದೊಡ್ಡಿ ಗ್ರಾಮದ ಚೂಡದಾರ್ ವೆಂಕಟಸಿದ್ದಯ್ಯ ಇತ್ತೀಚೆಗೆ ನಿಧನರಾಗಿದ್ದರು. ಇಂದು ತಿಥಿ ಕಾರ್ಯ ಇದ್ದು, ಅವರ ಸಂಬಂಧಿ ಪುಟ್ಟಮಾದಯ್ಯ ಎಂಬುವರು ತಿಥಿ ಕಾರ್ಡ್ ಹಂಚುವ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕಲ್ಪನೆಯ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಪ್ರಜಾಕೀಯ ಪಕ್ಷದಲ್ಲಿ ಯಾವುದೇ ರೀತಿಯ ವೈಭವದ ರೋಡ್ ಶೋ ಮಾಡೋ ಹಾಗಿಲ್ಲ, ದುಡ್ಡು ಕೊಡಂಗಿಲ್ಲ, ಜಾತಿ ನಿಂದನೆ ಮಾಡೋ ಹಾಗಿಲ್ಲ. ಇದು ಪ್ರಜಾಕೀಯ ಪಕ್ಷದ ಸಿದ್ಧಾಂತ ಎಂದು ಪುಟ್ಟಮಾದಯ್ಯ ತಿಳಿಸಿದರು. ಅತ್ಯಂತ ಸರಳವಾದ ಮಾರ್ಗಗಳಲ್ಲೇ ಪ್ರಚಾರ ಆರಂಭಿಸಿದ್ದೇವೆ ಎಂದಿರುವ ಪುಟ್ಟಮಾದಯ್ಯ ಅವರ ವಿಡಿಯೋ ವೈರಲ್ ಆಗಿದೆ.