ಶಿರಸಿ : ಕಳೆದೆರಡು ದಿನಗಳಿಂದ ಕೊರೊನಾ ಪ್ರಕರಣ ಜಿಲ್ಲೆಯಲ್ಲಿ ಕಂಡು ಬಂದಿರಲಿಲ್ಲ. ಆದರೆ, ಇಂದು ಮಹಾರಾಷ್ಟ್ರದಿಂದ ಹಿಂತಿರುಗಿದ್ದ 63 ವರ್ಷದ ವೃದ್ಧೆಯಲ್ಲಿ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದ ಮಲ್ಲಾಡ್‌ನಿಂದ ಜೂನ್ 8ರಂದು ತಾಲೂಕಿನ ಹುಲೇಕಲ್‌ಗೆ ಆಗಮಿಸಿದ್ದ ವೃದ್ಧೆಯನ್ನು ಹುಲೇಕಲ್ ಗ್ರಾಮ ಪಂಚಾಯತ್ ಬಳಿಯ ಕಲ್ಲಿಯ ಸರ್ಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ವೃದ್ಧೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಚಿಕಿತ್ಸೆಗೆ ಕಾರವಾರದ ಕಿಮ್ಸ್‌ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರ ಪಾಸಿಂಗ್ ವಾಹನದ ಮೂಲಕ ಒಟ್ಟು 6 ಜನರು ಹುಲೇಕಲ್‌ಗೆ ಆಗಮಿಸಿದ್ದರು. ಅವರನ್ನು ನೋಡಿದ ಸ್ಥಳೀಯರು ವಾಹನದಿಂದ ಇಳಿಯಲೂ ಬಿಡದೆ ಅಧಿಕಾರಿಗಳಿಗೆ ವಿಷಯ ತಿಳಿಸಿ, ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದರು. ಅವರಲ್ಲಿ 5 ಜನರಿಗೆ ಕೊರೊನಾ ನೆಗೆಟಿವ್ ಬಂದಿದೆ. ವೃದ್ಧೆಗೆ ಮಾತ್ರ ಸೋಂಕು ಕಾಣಿಸಿದೆ.