ಮೈಸೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮುಂಜಾಗ್ರತವಾಗಿ ಹೆಚ್ಚು ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗುತ್ತಿದೆ. ಸದ್ಯಕ್ಕೆ ಬೆಡ್ಗಳ ಕೊರತೆ ಇಲ್ಲ ಎಂದು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಈಟಿವಿ ಭಾರತ್ಗೆ ತಿಳಿಸಿದರು.
ಇಂದು ನಗರದ ಸರ್ಕಾರಿ ತುಳಸಿದಾಸ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ 100 ಹಾಸಿಗೆಗಳ ಆಕ್ಸಿಜನ್ ಬೆಡ್ಗಳನ್ನು ಸಿದ್ದಪಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಈಟಿವಿ ಭಾರತ್ ಜೊತೆ ಮಾತನಾಡಿದ ಆಯುಕ್ತೆ, ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಸ್ಪಲ್ಪ ಮಟ್ಟಿಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಆಸ್ಪತ್ರೆಯನ್ನು ಸಿದ್ದಪಡಿಸಿಕೊಳ್ಳಲಾಗುತ್ತಿದೆ. ಕೋವಿಡ್ ತಡೆಗಟ್ಟಲು ನಮ್ಮಲಿಯೇ ಅಸ್ತ್ರಗಳಿವೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು , ಅನಾವಶ್ಯಕವಾಗಿ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಬೇಕು ಎಂದರು.
ಮೊದಲನೇದಾಗಿ ಜನರು ಕೋವಿಡ್ ಬರದಂತೆ ತಡೆಯಬೇಕು ಇದ್ದಕ್ಕಾಗಿ ಕೋವಿಡ್ ನಿಯಮಗಳನ್ನು ಕಡ್ದಾಯವಾಗಿ ಅನುಸರಿಸಬೇಕು. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಆಸ್ಪತ್ರೆಗೆ ಬನ್ನಿ ಇಲ್ಲದಿದ್ದರೆ ಹೋಂ ಐಸೋಲೇಷನ್ಗೆ ಒಳಗಾಗಿ ಮತ್ತು ಯಾರಿಗೆ ತೀವ್ರಕರವಾದ ಕೋವಿಡ್ ಸಮಸ್ಯೆ ಇರುತ್ತದೆಯೋ ಅಂತಹವರನ್ನು ಕೋವಿಡ್ ಕೇರ್ ಸೆಂಟರ್ಗೆ ಸೇರಿಸಬೇಕೆಂದು ತಿಳಿಸಿದರು .
ನಿತ್ಯ ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯಕ್ಕೆ ಬೆಡ್ ಕೊರತೆ ಇಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ಸಿದ್ದತೆ ಮಾಡಿ ಕೊಳ್ಳುತ್ತಿರುವುದಾಗಿ ಆಯುಕ್ತೆ ಶಿಲ್ಪ ನಾಗ್ ತಿಳಿಸಿದ್ದು, ಆಕ್ಸಿಜನ್ ಬೆಡ್ ಕೊರತೆ ಹಾಗೂ ಕೊರೊನದಿಂದ ಮೃತಪಟ್ಟವರಿಗೆ ಅಂತ್ಯಕ್ರಿಯೆಗೆ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.