ಬ್ರಿಸ್ಟೋಲ್: ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯ ಕ್ರಿಕೆಟ್ ಪ್ರೇಮಿಗಳನ್ನು ಮಹಾಸಮರಕ್ಕೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಸದ್ಯ ಬ್ರಿಸ್ಟೋಲ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಕೆರಿಬಿಯನ್ನರು ರನ್ಹೊಳೆಯನ್ನೇ ಹರಿಸಿದ್ದಾರೆ. ಪರಿಣಾಮ್ ಕಿವೀಸ್ನ ಪ್ರಮುಖ ಬೌಲರ್ ಮ್ಯಾಟ್ ಹೆನ್ರಿ ಬೌಲಿಂಗ್ನಲ್ಲಿ ನೂರು ರನ್ ನೀಡಿ ಕಳಪೆ ಪ್ರದರ್ಶನ ತೋರಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೋಲ್ಡರ್ ಪಡೆಗೆ ಆರಂಭಿಕರಾದ ಕ್ರಿಸ್ ಗೇಲ್ ಹಾಗೂ ಎವಿನ್ ಲೆವಿಸ್ ಉತ್ತಮ ಆರಂಭ ನೀಡಿದರು. ಗೇಲ್ 36 ರನ್ ಹಾಗೂ ಲೆವಿಸ್ 50 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಮಧ್ಯಮ ಕ್ರಮಾಂಕದಲ್ಲಿ ಶೈ ಹೋಪ್ ಆಕರ್ಷಕ ಶತಕ ಸಿಡಿಸುವ ಮೂಲಕ ರನ್ ಹೆಚ್ಚಳಕ್ಕೆ ಕೊಡುಗೆ ನೀಡಿದರು. ನಾಯಕ ಜೇಸನ್ ಹೋಲ್ಡರ್ 47 ಹಾಗೂ ಐಪಿಎಲ್ ಹೀರೋ ಆಂಡ್ರೆ ರಸೆಲ್ 54 ರನ್ ಸಿಡಿಸಿದರು. ಕೆರಿಬಿಯನ್ನರ ಸಾಂಘಿಕ ಪ್ರದರ್ಶನದ ಫಲವಾಗಿ 49.2 ಓವರ್ನಲ್ಲಿ 421 ರನ್ಗಳಿಗೆ ಸರ್ವಪತನವಾಯಿತು.
-
What a show from West Indies – they're all out for 421!
— Cricket World Cup (@cricketworldcup) May 28, 2019 " class="align-text-top noRightClick twitterSection" data="
Shai Hope got to three figures, Evin Lewis and Andre Russell hit half-centuries, and there were blistering cameos from elsewhere!#WIvNZ | #CWC19
FOLLOW ➡️ https://t.co/rHK0W7ltlP pic.twitter.com/wOK2gvnBfA
">What a show from West Indies – they're all out for 421!
— Cricket World Cup (@cricketworldcup) May 28, 2019
Shai Hope got to three figures, Evin Lewis and Andre Russell hit half-centuries, and there were blistering cameos from elsewhere!#WIvNZ | #CWC19
FOLLOW ➡️ https://t.co/rHK0W7ltlP pic.twitter.com/wOK2gvnBfAWhat a show from West Indies – they're all out for 421!
— Cricket World Cup (@cricketworldcup) May 28, 2019
Shai Hope got to three figures, Evin Lewis and Andre Russell hit half-centuries, and there were blistering cameos from elsewhere!#WIvNZ | #CWC19
FOLLOW ➡️ https://t.co/rHK0W7ltlP pic.twitter.com/wOK2gvnBfA
ಮ್ಯಾಟ್ ಹೆನ್ರಿ ಸೆಂಚುರಿ:
ವೆಸ್ಟ್ ಇಂಡೀಸ್ ದಾಂಡಿಗರ ಅಬ್ಬರಕ್ಕೆ ಕಿವೀಸ್ ಬೌಲರ್ಗಳು ತತ್ತರಿಸಿ ಹೋದರು. 9 ಓವರ್ ಎಸೆದ ಮ್ಯಾಟ್ ಹೆನ್ರಿ ಬರೋಬ್ಬರಿ 107 ರನ್ ನೀಡಿದರು. ಮತ್ತೊಬ್ಬ ಬೌಲರ್ ಲಾಕಿ ಫರ್ಗ್ಯೂಸನ್ ಹತ್ತು ಓವರ್ ಕೋಟಾದಲ್ಲಿ 86 ರನ್ ನೀಡಿ ದುಬಾರಿ ಎನಿಸಿದರು.