ಮುಂಬೈ: 1989 ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈ ಮಹಾನಗರಿಯಲ್ಲಿ ಶೇ 55.1 ರಷ್ಟು ಮತದಾನವಾಗಿದೆ. 89 ರಲ್ಲಿ ಮುಂಬೈನಲ್ಲಿ ಶೇ 57.7 ರಷ್ಟು ವೋಟಿಂಗ್ ಆಗಿತ್ತು. 1991 ರಲ್ಲಿ ವಾಣಿಜ್ಯ ನಗರಿಯಲ್ಲಿ ಶೇ 41.6 ರಷ್ಟು ಮತದಾನವಾಗಿ ಅತ್ಯಂತ ಕಡಿಮೆ ಮತದಾನವಾದ ವರ್ಷ ಎಂದು ದಾಖಲಾಗಿತ್ತು.
ಇನ್ನು 1998ರಲ್ಲಿ ಶೇ 50.4ಕ್ಕೆ ತಲುಪಿತ್ತು. ಆದರೆ 2009ರಲ್ಲಿ 41.4ರಷ್ಟು ಆಗಿದ್ದ ವೋಟಿಂಗ್, 2014ರ ಲೋಕಸಭಾ ಚುನಾವಣೆಯಲ್ಲಿ ಶೇ 51.6ಕ್ಕೆ ಏರಿಕೆಯಾಗಿತ್ತು. ಈ ಪ್ರಮಾಣ ಈಗ ಶೇ 3.5ರಷ್ಟು ಏರಿಕೆ ಆಗಿದೆ. ಈ ಏರಿಕೆ ಪ್ರಧಾನಿ ಮೋದಿ ಅವರ ಹವಾನೋ ಇಲ್ಲವೇ ಮೋದಿ ವಿರೋಧಿ ಅಲೆಯೋ ಅನ್ನುವುದು ಚರ್ಚೆಗೆ ಈಡಾಗಿದೆ.
ದೇಶದ ವಾಣಿಜ್ಯ ಮಹಾನಗರಿ ಮುಂಬೈನಲ್ಲಿ ವೀಕೆಂಡ್ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ. ಇದು ಮತದಾನ ಪ್ರಮಾಣ ಹೆಚ್ಚಳವಾಗಲು ಕಾರಣ ಎಂದೂ ಹೇಳಲಾಗುತ್ತಿದೆ.
ಇನ್ನೊಂದೆಡೆ ಮುಂಬೈನ ಆರು ಲೋಕಸಭಾ ಕ್ಷೇತ್ರಗಳು ಬಿಜೆಪಿ ಶಿವಸೇನಾ ಹಿಡಿತದಲ್ಲಿವೆ. ಈ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ಎನ್ಸಿಪಿ ಹವಣಿಸುತ್ತಿವೆ. ಮತದಾನ ಪ್ರಮಾಣ ಹೆಚ್ಚಾಗಿರುವುದು ಕೇಸರಿ ಬ್ರಿಗೇಡ್ಗೆ ಅನುಕೂಲವೇ ಅಥವಾ ಕಾಂಗ್ರೆಸ್ ಎನ್ಸಿಪಿಗೆ ಅನುಕೂಲವೇ ಅನ್ನೋದು ಫಲಿತಾಂಶ ಬಂದ ಬಳಿಕವೇ ಗೊತ್ತಾಗಬೇಕಿದೆ.
ಗಡ್ಚಿರೋಲಿಯಲ್ಲಿ ಅತಿ ಹೆಚ್ಚು ಮತದಾನ - ಶೇ.72
ಕಲ್ಯಾಣದಲ್ಲಿ ಶೇ.44ರಷ್ಟು ವೋಟಿಂಗ್
ಯಾವ ಮಹಾನಗರದಲ್ಲಿ ಅತಿ ಹೆಚ್ಚು ಮತದಾನ
ನಗರ 2014 2019 ಬದಲಾವಣೆ
ಮುಂಬೈ 51.6 55.1 3.5
ಪುಣೆ 54.1 49.8 -4.3
ಬೆಂಗಳೂರು 58.6 54.7 - 3.9
ಹೈದರಾಬಾದ್ 53.1 45.1 -8.0
ಚೆನ್ನೈ 61.8 59.4 - 2.4
ಅಹಮದಾಬಾದ್ 63.0 62.6 -0.4