ಅಂಬೇಡ್ಕರ್ನಗರ(ಯು.ಪಿ): ಉತ್ತರಪ್ರದೇಶ ಗೆದ್ದರೆ ಇಡೀ ದೇಶವನ್ನೇ ಗೆದ್ದಂತೆ. ಹೀಗಾಗಿ ಬಿಜೆಪಿ ಈ ಸಲವೂ ಉತ್ತರದಲ್ಲಿ ಕಮಾಲ್ ಮಾಡಲು ಇನ್ನಿಲ್ಲದಂತೆ ಶ್ರಮಿಸುತ್ತಿದೆ. ಪಿಎಂ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ತಿರುಗಾಟ ನಡೆಸಿದ್ದಾರೆ.
ಇಂದು ಪ್ರಧಾನಿ ಮೋದಿ, ಅಂಬೇಡ್ಕರ್ ನಗರ, ಅಯೋಧ್ಯೆ ಸೇರಿದಂತೆ ಹಲವು ಕಡೆ ಬಹಿರಂಗ ರ್ಯಾಲಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಕಾನೂನಿನ ಪ್ರಕಾರವೇ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದಿದ್ದ ಬಿಜೆಪಿ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಪ್ರಚಾರ ನಡೆಸಿತ್ತು.
-
#WATCH Prime Minister Narendra Modi chants "Jai Shri Ram" and "Bharat Mata ki jai" after ending his speech at a rally in Ambedkar Nagar #LokSabhaElections2019 pic.twitter.com/gWozmTv9HW
— ANI UP (@ANINewsUP) May 1, 2019 " class="align-text-top noRightClick twitterSection" data="
">#WATCH Prime Minister Narendra Modi chants "Jai Shri Ram" and "Bharat Mata ki jai" after ending his speech at a rally in Ambedkar Nagar #LokSabhaElections2019 pic.twitter.com/gWozmTv9HW
— ANI UP (@ANINewsUP) May 1, 2019#WATCH Prime Minister Narendra Modi chants "Jai Shri Ram" and "Bharat Mata ki jai" after ending his speech at a rally in Ambedkar Nagar #LokSabhaElections2019 pic.twitter.com/gWozmTv9HW
— ANI UP (@ANINewsUP) May 1, 2019
ಇನ್ನು ಈ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳ ಮತದಾನಕ್ಕೂ ಮುನ್ನ ನಡೆದ ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ ಅಯೋಧ್ಯೆ ಹಾಗೂ ರಾಮನ ವಿಚಾರಗಳ ಬಗ್ಗೆ ಅಷ್ಟಾಗಿ ಪ್ರಸ್ತಾಪ ಮಾಡಿರಲಿಲ್ಲ. ಆದರೆ, ಅಂಬೇಡ್ಕರ್ ನಗರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತ್ ಮಾತಾಕಿ ಜೈ ಘೋಷಣೆಗಿಂತ ಮೊದಲು ಜೈ ಶ್ರೀರಾಮ್ ಘೋಷಣೆಯನ್ನು ಹಾಕಿದರು. ಈ ಮೂಲಕ ರಾಮನ ಜಪ ಮಾಡಿ ಮತದಾರರ ಸೆಳೆಯುವ ಪ್ರಯತ್ನ ಮಾಡಿದರು.
ಬಹುತೇಕ ಅಯೋಧ್ಯಾ ವಿಷಯ ಮರೆತೇ ಹೋಯಿತಾ ಎಂಬ ಅನುಮಾನಗಳ ನಡುವೆ ಪ್ರಧಾನಿ ಮೋದಿ ರಾಮನ ಜಪ ಮಾಡಿದ್ದಾರೆ.