ETV Bharat / briefs

ನೈಜ ಘಟನೆ ಆಧರಿಸಿರೋ 'ಮಹಿಷಾಸುರ'ನ ಕಥೆ ಏನು ಗೊತ್ತಾ? - ನಿರ್ದೇಶಕ ಉದಯ್ ಪ್ರಸನ್ನ

ಮೇಲುಕೋಟೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನ ಆಧರಿಸಿದ ಹಾಗೂ ನಿರ್ದೇಶಕ ಉದಯ್ ಪ್ರಸನ್ನ ನಿರ್ದೇಶನದ 'ಮಹಿಷಾಸುರ' ಚಿತ್ರದ ಟೈಟಲ್​ ಅನ್ನು ಚಿತ್ರತಂಡ ಲಾಂಚ್ ಮಾಡಿದೆ.

ಮಹಿಷಾಸುರ
author img

By

Published : Aug 16, 2019, 10:27 AM IST

ದಿನೇ ದಿನೇ ಹೊಸ ಕಥೆಗಳನ್ನ ಇಟ್ಟುಕೊಂಡು ಗಾಂಧಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ‌. ಇದೀಗ 'ಮಹಿಷಾಸುರ' ಎನ್ನುವ ಟ್ರೆಂಡಿ ಟೈಟಲ್​​ನೊಂದಿಗೆ ಹೊಸಬರ ಚಿತ್ರತಂಡವೊಂದು ಸ್ಯಾಂಡಲ್​ವುಡ್​ಗೆ ಎಂಟ್ರಿ‌ ಕೊಟ್ಟಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿನ್ನೆ ಸಿನಿಮಾದ ಟೈಟಲ್​ ಅನ್ನು ಚಿತ್ರತಂಡ ಲಾಂಚ್ ಮಾಡಿದೆ.

'ಮಹಿಷಾಸುರ' ಸಿನಿಮಾದ ಟೈಟಲ್​ ಲಾಂಚ್​

ಐವರು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಉದಯ್​​ ಪ್ರಸನ್ನ, ಮೇಲುಕೋಟೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನ ಆಧರಿಸಿ ಸಿನಿಮಾ ಮಾಡಿದ್ದಾರೆ. ಇದೊಂದು ಟ್ರಯಾಂಗಲ್ ಲವ್ ಸ್ಟೋರಿ ಆಗಿದ್ದು, ಚಿತ್ರದಲ್ಲಿ ಮಂಜು ಹಾಗೂ ಸುದರ್ಶನ್ ಇಬ್ಬರು ನವ ನಟರು ಅಭಿನಯಿಸಿದ್ದಾರೆ. ಇವರಿಬ್ಬರಿಗೆ ನಟಿ ಬಿಂದುಶ್ರೀ ಜೋಡಿಯಾಗಿದ್ದಾರೆ. ದೊಡ್ಡ ಬಳ್ಳಾಪುರ ಹಾಗು ಮೇಲುಕೋಟೆಯಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ‌‌.

ನಿರ್ದೇಶಕರು ಹೇಳುವ ಪ್ರಕಾರ, ಇಬ್ಬರು ನಟರು ಚಿಕ್ಕನಿಂದಲೂ ಸ್ನೇಹಿತರು. ಅವರು ದೊಡ್ಡವರಾದ ಮೇಲೆ ಪ್ರೀತಿ ಸಿಗದಿದ್ದಾಗ ಇಬ್ಬರಲ್ಲಿ ಯಾರು ಮಹಿಷಾಸುರನ ಅವತಾರ ತಾಳುತ್ತಾರೆ ಅನ್ನೋದು ಚಿತ್ರದ ತಿರಳು. ಹಳ್ಳಿ ಬ್ಯಾಕ್ ಟ್ರಾಪ್​ನಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕೃಷ್ಣ ಎಂಬುವರು ಕ್ಯಾಮರಾ ವರ್ಕ್ ಮಾಡಿದ್ದಾರೆ. ನಿರ್ದೇಶಕ ಉದಯ್ ಪ್ರಸನ್ನ ಸಂಬಂಧಿಯಾಗಿರೋ ನಿರ್ಮಾಪಕಿ ಲೀಲಾವತಿ 80 ಲಕ್ಷ ರೂ. ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Intro:ಸ್ಲಗ್: ರಾಷ್ಟ್ರ ಧ್ವಜಾರೋಹಣ ಅಪಮಾನ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೫-೦೮-೨೦೧೯
ಸ್ಥಳ: ರಾಯಚೂರು

ಆಂಕರ್: ೭೩ನೇ ಸ್ವಾತಂತ್ರ್ಯ ದಿನಾಚಾರಣೆ ಆಚರಿಸುವ ವೇಳೆ  ರಾಷ್ಟ್ರ ಧ್ವಜಾರೋಹಣ ನೇರವೇರಿಸುವ ವೇಳೆ‌ ರಾಷ್ಟ್ರ ಧ್ಜಜಾ ಆಚರಿಸುವ ವೇಳೆ  ತ್ರಿವಣ ಧ್ವಜಾ ಕೆಳಗಿಸುವ ಮೂಲಕ ಅಪಮಾನ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಜಿಲ್ಲೆಯ  ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡ ಸರಕಾರಿ ಕಿರಿಯ ಪ್ರಾಥಾಮಿಕ ಶಾಲೆಯಲ್ಲಿ ಈ ಘಟನೆ ಜರುಗಿದೆ.  ಬೆಳಗ್ಗೆ ರಾಷ್ಟ್ರ ಧ್ವಜಾರೋಹಣವನ್ನ ಮುಖ್ಯ ಗುರುಗಳು ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಶೇಖರ ಧ್ವಜಾರೋಹಣ ನೆರವೇರಿಸುವ ವೇಳೆ ಪುಷ್ಪದಿಂದ ಕಟ್ಟಿರುವ ಬಾವೂಟ ಜಾರಿ ಕೆಳಗಡೆ ಬಿದ್ದಿದೆ ಇದರಿಂದ ರಾಷ್ಟ್ರ ಧ್ವಜಾಕ್ಕೆ  ಅಗೌರವ ತೋರಿಸುವ ಮೂಲಕ ಅಪಮಾನಗೊಳಿಸಲಾಗಿದೆ. ಈ ಘಟನೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:ಈ ಘಟನೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.