ETV Bharat / briefs

ಪ್ರತಿಭೆ ಇದ್ದರೂ ಸ್ಥಾನವಿಲ್ಲ! ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅವಕಾಶ ಕಳೆದುಕೊಂಡವರಾರು? ಅಭಿಮಾನಿಗಳಿಗೆ ಶಾಕ್‌! - ವಿಶ್ವಕಪ್​

2019ರ ವಿಶ್ವಕಪ್​ಗೆ 10 ದೇಶಗಳು ತಮ್ಮ 15 ಸದಸ್ಯರ ತಂಡವನ್ನು ವಿಶ್ವಕಪ್​ಗೆ ಫೈನಲ್‌ ಮಾಡಿವೆ. ಆದರೆ, ಈ ತಂಡಗಳಲ್ಲಿ ಅದ್ಭುತ ಪ್ರತಿಭೆಗಳಿದ್ದರೂ ಕಡೆಗಣನೆಗೆ ಕಾರಣವಾಗಿದ್ದು ಅಚ್ಚರಿ ಮೂಡಿಸಿದೆ.

world cup
author img

By

Published : Apr 30, 2019, 9:03 PM IST

ಮುಂಬೈ: ವಿಶ್ವಕಪ್ ಕ್ರಿಕೆಟ್‌ ಹಬ್ಬ ಇನ್ನೇನು ಬಂದೇ ಬಿಟ್ಟಿತು. 10 ದೇಶಗಳು ಈಗಾಗಲೇ 15 ಸದಸ್ಯರ ತಂಡವನ್ನು ಘೋಷಣೆ ಮಾಡಿಯೂ ಆಗಿದೆ. ವಿಶೇಷ ಏನು ಗೊತ್ತೇ..? ಈ ದೇಶಗಳಲ್ಲಿ ಅದ್ಬುತ ಆಟಗಾರರಿದ್ದಾರೆ. ಆದ್ರೆ ಅವರೆಲ್ಲಾ ಆಟ ಆಡಲು ಅಂಗಳಕ್ಕಿಳಿಯಲ್ಲ! ಅವರ ಪಟ್ಟಿ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಭಾರತದಲ್ಲಿ ರಿಷಭ್‌ ಪಂತ್​, ಅಂಬಟಿ ರಾಯುಡು, ಶ್ರೀಲಂಕಾದಲ್ಲಿ ಡಿಕ್ವೆಲ್ಲಾ, ಚಾಂಡಿಮಾಲ್​ ಸೇರಿಂದಂತೆ ವಿಶ್ವಕಪ್​ ಮಿಸ್​ ಮಾಡಿಕೊಂಡ ವಿವಿಧ ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಂತಿದೆ.

ಭಾರತ- ವಿಕೆಟ್​ ಕೀಪರ್​ ಪಂತ್​ ಹಾಗೂ ರಾಯಡು 2019 ರ ವಿಶ್ವಕಪ್​ ತಂಡದಿಂದ ಅವಕಾಶ ವಂಚಿತರಾಗಿದ್ದಾರೆ. ಇವರ ಬದಲು ದಿನೇಶ್​ ಕಾರ್ತಿಕ್​​ ಹಾಗೂ ಆಲ್ರೌಂ ಡರ್​ ದಿನೇಶ್​ ಕಾರ್ತಿಕ್‌ಗೆ​ ಅವಕಾಶ ಕಲ್ಪಿಸಲಾಗಿದೆ.

ಶ್ರೀಲಂಕಾ- ನಿರೋಶನ್​ ಡಿಕ್ವೆಲ್ಲಾ, ದಿನೇಶ್​ ಚಂಡಿಮಾಲ್, ಉಪುಲ್​ ತರಂಗ ಹಾಗೂ ಸ್ಪಿನ್ನರ್​ ಅಕಿಲಾ ಧನಂಜಯಾರನ್ನು ಲಂಕಾ ಆ ದೇಶದ ತಂಡ ಕೈಬಿಟ್ಟಿದೆ.

ಪಾಕಿಸ್ತಾನ- 2017 ರ ಐಸಿಸಿ ಚಾಂಪಿಯನ್​ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ವೇಗಿ ಮೊಹಮ್ಮದ್​ ಅಮೀರ್ ಹಾಗೂ ಸ್ಫೋಟಕ ಬ್ಯಾಟ್ಸ್​ಮನ್​​ ಆಸಿಫ್​ ಅಲಿಯನ್ನ ತಂಡದಿಂದ ಹೊರಗಿಟ್ಟಿರುವುದು ಆಶ್ಚರ್ಯಕರ ಸಂಗತಿ.

ವೆಸ್ಟ್​ ಇಂಡೀಸ್​- ವಿಶ್ವಶ್ರೇಷ್ಠ ಸ್ಪಿನ್ನರ್​ ಸುನಿಲ್​ ನರೈನ್​, ಆಲ್​ರೌಂಡರ್​ ಕೀರನ್​ ಪೊಲಾರ್ಡ್, ವಿಕೆಟ್​ ಕೀಪರ್​ ದಿನೇಶ್​ ರಾಮ್​ದಿನ್ ಹಾಗೂ ದೇವೇಂದ್ರ ಬಿಶೂರನ್ನು ವಿಂಡೀಸ್​ ತಂಡ ಆಯ್ಕೆಗೆ ಪರಿಗಣಿಸಿಲ್ಲ.​

ಆಸ್ಟ್ರೇಲಿಯಾ- ಕಳೆದೆರಡು ವರ್ಷಗಳಿಂದ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಯುವ ಕೀಪರ್ ಮತ್ತು ​ಬ್ಯಾಟ್ಸ್​ಮನ್​ ಪೀಟರ್​ ಹ್ಯಾಂಡ್ಸ್​ಕಂಬ್ ಹಾಗೂ ವೇಗಿ ಜೋಶ್​ ಹೆಜಲ್​ವುಡ್​ ವಿಶ್ವಕಪ್​ನಿಂದ ವಂಚಿತರಾಗಿದ್ದಾರೆ.

ದ.ಆಫ್ರಿಕಾ- ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರೀಜಾ ಹೆಂಡ್ರಿಕ್ಸ್​ ಹಾಗೂ ಹಿರಿಯ ಆಲ್​ರೌಂಡರ್​ ಕ್ರಿಸ್​ ಮೋರಿಸ್​ ದ. ಆಫ್ರಿಕಾ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದಾರೆ.

ಇಂಗ್ಲೆಂಡ್​- 2016ರಿಂದ ವಿಶ್ವದ ಹಲವು ಟಿ20 ಲೀಗ್​ಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವ ಆಲ್​ರೌಂಡರ್​ ಜೋಫ್ರಾ ಆರ್ಚರ್​ರನ್ನು ಇಂಗ್ಲೆಂಡ್​ ಆಯ್ಕೆ ಸಮಿತಿ ವಿಶ್ವಕಪ್​ ತಂಡದಿಂದ ಕೈಬಿಟ್ಟಿರುವುದು ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದೆ.

ನ್ಯೂಜಿಲೆಂಡ್- ​ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಅಂತಾರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಡಾಗ್​ ಬ್ರಾಸ್​ವೆಲ್ ಹಾಗೂ ಸ್ಪಿನ್ನರ್​ ಟಾಡ್​ ಆಸ್ಟೆಲ್​ ಕೂಡ ದೊಡ್ಡ ಟೂರ್ನಿಯಿಂದ ವಂಚಿತರಾಗಿದ್ದಾರೆ.

ಬಾಂಗ್ಲಾದೇಶ- ವೇಗದ ಬೌಲರ್​ ತಸ್ಕಿನ್​ ಅಹ್ಮದ್​ ಹಾಗೂ ಹಿರಿಯ ಆಟಗಾರ ಇಮ್ರುಲ್​ ಕಾಯಿಸ್​ ಕೂಡ ಈ ಬಾರಿ ಅವಕಾಶವಂಚಿತರ ಪಟ್ಟಿಯಲ್ಲಿದ್ದಾರೆ.

Intro:Body:

ವಿಶ್ವಕಪ್​ ತಂಡದಲ್ಲಿ ಸ್ಥಾನ ಕಳೆದುಕೊಂಡ ಪ್ರಮುಖ ಆಟಗಾರರ ಪಟ್ಟಿ ನೋಡಿದ್ರೆ ಶಾಕ್​ ಆಗ್ತೀರಾ?

ಮುಂಬೈ : ವಿಶ್ವಕಪ್​ನ ಎಲ್ಲಾ ದೇಶಗಳು ತಮ್ಮ 15 ಸದ್ಯಸರ ತಂಡವನ್ನು ಘೋಷಣೆ ಮಾಡಿದ್ದು, ಕೆಲವು ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದು ಕ್ರೀಡಾಭಿಮಾನಿಗಳನ್ನು ಆಶ್ಚರ್ಯಕ್ಕೀಡು ಮಾಡಿದೆ.

ಹೌದು ಭಾರತದಲ್ಲಿ ಪಂತ್​,ರಾಯುಡು,ಶ್ರೀಲಂಕಾದಲ್ಲಿ ಡಿಕ್ವೆಲ್ಲಾ,ಚಾಂಡಿಮಾಲ್​ ಸೇರಿಂದಂತೆ ವಿಶ್ವಕಪ್​ ಮಿಸ್​ ಮಾಡಿಕೊಂಡ ವಿವಿಧ ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಂತಿದೆ.

ಭಾರತ- ವಿಕೆಟ್​ ಕೀಪರ್​ ರಿಷಭ್​ ಪಂತ್​ ಹಾಗೂ ಅಂಬಾಟಿ ರಾಯಡು 2019 ರ ವಿಶ್ವಕಪ್​ ತಂಡದಿಂದ ಅವಕಾಶ ವಂಚಿತರಾಗಿದ್ದಾರೆ. ಇವರ ಬದಲು ದಿನೇಶ್​ ಕಾರ್ತಕ್​ ಹಾಗೂ ಆಲರೌಂಡರ್​ ದಿನೇಶ್​ ಕಾರ್ತಿಕ್​ ಅವಕಾಶ ಪಡೆದಿದ್ದಾರೆ. 

ಶ್ರೀಲಂಕಾ- ನಿರೋಶನ್​ ಡಿಕ್ವೆಲ್ಲಾ, ದಿನೇಶ್​ ಚಂಡಿಮಾಲ್, ಉಪುಲ್​ ತಂರಂಗ ಹಾಗೂ ಸ್ಪಿನ್ನರ್​ ಅಕಿಲಾ ದನಂಜಯಾರನ್ನ ಲಂಕಾ ತಂಡ ಕೈಬಿಟ್ಟಿದೆ. 

ಪಾಕಿಸ್ತಾನ- 2017 ರ ಐಸಿಸಿ ಚಾಂಪಿಯನ್​ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ವೇಗಿ ಮೊಹಮ್ಮದ್​ ಅಮೀರ್ ಹಾಗೂ ಸ್ಫೋಟಕ ಬ್ಯಾಟ್ಸ್​ಮನ್​​ ಆಸಿಫ್​ ಅಲಿಯನ್ನ ತಂಡದಿಂದ ಹೊರ ಹಾಕಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ವೆಸ್ಟ್​ ಇಂಡೀಸ್​-  ವಿಶ್ವಶ್ರೇಷ್ಠ ಸ್ಪಿನ್ನರ್​ ಸುನಿಲ್​ ನರೈನ್​, ಆಲ್​ರೌಂಡರ್​ ಕೀರನ್​ ಪೊಲಾರ್ಡ್ ಹಾಗೂ ವಿಕೆಟ್​ ಕೀಪರ್​ ದಿನೇಶ್​ ರಾಮ್​ದಿನ್ ಹಾಗೂ ದೇವೇಂದ್ರ ಬಿಶೂರನ್ನು ವಿಂಡೀಸ್​ ತಂಡ  ಆಯ್ಕೆಗೆ ಪರಿಗಣಿಸಿಲ್ಲ.​

ಆಸ್ಟ್ರೇಲಿಯಾ- ಕಳೇದರೆರಡು ವರ್ಷಗಳಿಂದ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಯುವ ಕೀಪರ್ ಮತ್ತು ​ಬ್ಯಾಟ್ಸ್​ಮನ್​ ಪೀಟರ್​ ಹ್ಯಾಂಡ್ಸ್​ಕಂಬ್ ಹಾಗೂ ವೇಗಿ ಜೋಶ್​ ಹೆಜಲ್​ವುಡ್​ ವಿಶ್ವಕಪ್​ನಿಂದ ವಂಚಿತರಾಗಿದ್ದಾರೆ.

ದ.ಆಫ್ರಿಕಾ- ಕಳೇದ ವರ್ಷವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ ಕಾಲಿಟ್ಟು ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರೀಜಾ ಹೆಂಡ್ರಿಕ್ಸ್​, ಹಾಗೂ ಹಿರಿಯ ಆಲ್​ರೌಂಡರ್​ ಕ್ರಿಸ್​ ಮೋರಿಸ್​ ದ. ಆಫ್ರಿಕಾ ತಂಡಕ್ಕೆ ಆಯ್ಕೆಯಾಗಲು ವಿಫಲರಾಗಿದ್ದಾರೆ.

ಇಂಗ್ಲೆಂಡ್​- ಕಳೆದು ವರ್ಷಗಳಿಂದ ವಿಶ್ವದ ಹಲವು ಟಿ20 ಲೀಗ್​ಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆಲ್​ರೌಂಡರ್​ ಜೋಫ್ರಾ ಆರ್ಚರ್​ರನ್ನು ಇಂಗ್ಲೆಂಡ್​ ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿರುವುದು ಕ್ರಿಕೆಟ್​ ಲೋಕಕ್ಕೆ ಅಚ್ಚರಿ ಮೂಡಿಸಿದೆ.

ನ್ಯೂಜಿಲ್ಯಾಂಡ್- ​ದೇಶಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಅಂತಾರಾಷ್ಟ್ರೀಯ ತಂಡಕ್ಕೆ ಎಂಟ್ರಿಕೊಟ್ಟಿದ್ದ ಡಾಗ್​ ಬ್ರಾಸ್​ವೆಲ್ ಹಾಗೂ ಸ್ಪಿನ್ನರ್​ ಟಾಡ್​ ಆಸ್ಟೆಲ್​ ಕೂಡ ದೊಡ್ಡ ಟೂರ್ನಿಯಿಂದ ವಂಚಿತರಾಗಿದ್ದಾರೆ.

ಬಾಂಗ್ಲದೇಶ- ವೇಗದ ಬೌಲರ್​ ತಸ್ಕಿನ್​ ಅಹ್ಮದ್​ ಹಾಗೂ ಹಿರಿಯ ಆಟಗಾರ ಇಮ್ರುಲ್​ ಕಾಯಿಸ್​ ಕೂಡ ಈ ಬಾರಿ ಅವಕಾಶವಂಚಿತರಾಗಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.