ETV Bharat / briefs

ಕೊಪ್ಪಳ ರೈತರಿಗೆ ಕೊರೊನಾ ಪೆಟ್ಟು: ಪರಿಹಾರಕ್ಕಾಗಿ ಕಾಯುತ್ತಿರುವ ಬೆಳೆಗಾರರು

ಕೊರೊನಾ ರೈತರ ಜೀವನಕ್ಕೆ ಪೆಟ್ಟು ನೀಡಿದೆ. ತೋಟಗಾರಿಕಾ ಬೆಳೆ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ. ಇನ್ನು ಸರ್ಕಾರ ಘೋಷಿಸಿದ ಪರಿಹಾರ ಧನ ಕೆಲ ರೈತರಿಗೆ ಇನ್ನೂ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Koppal Farmer
Koppal Farmer
author img

By

Published : Jun 8, 2021, 7:35 PM IST

Updated : Jun 8, 2021, 9:46 PM IST

ಕೊಪ್ಪಳ: ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್​ಡೌನ್ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಆಗಿದೆ. ಈ ಸಂದರ್ಭದಲ್ಲಿ ಮಾರುಕಟ್ಟೆ ಇಲ್ಲದೇ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ. ಕಳೆದ ವರ್ಷ ಹಾಗೂ ಈ ವರ್ಷವೂ ಸಹ ತೋಟಗಾರಿಕೆ ಬೆಲೆಗಳಿಗೆ ಪರಿಹಾರ ಘೋಷಿಸಿದೆ. ಆದರೆ, ಸರ್ಕಾರದ ಪುಡಿಗಾಸಿನ ಪರಿಹಾರ ಇನ್ನೂ ಅನೇಕ ರೈತರಿತೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕೊರೊನಾದಿಂದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿಸಿದೆ. ಸಾಲ ಮಾಡಿ ಬಿತ್ತನೆ ಮಾಡಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ. ತೋಟಗಾರಿಕೆ ಬೆಳೆ ಬೆಳೆದ ರೈತರಂತೂ ಕೊರೊನಾ ಸಂದರ್ಭದ ಲಾಕ್​ಡೌನ್​ನಲ್ಲಿ ಹಣ್ಣು, ತರಕಾರಿಗಳಿಗೆ ಮಾರುಕಟ್ಟೆ ಇಲ್ಲದೇ ನಷ್ಟ ಅನುಭವಿಸಿದ್ದಾರೆ. ಇದರಿಂದಾಗಿ ಸರ್ಕಾರ ಕಳೆದ ವರ್ಷ ಹಾಗೂ ಈ ವರ್ಷ ಪರಿಹಾರ ಘೋಷಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ರೈತರಿಗೆ ಹೆಕ್ಟೇರ್​ಗೆ 10 ಸಾವಿರ ರೂಪಾಯಿ ಪರಿಹಾರ ಸಿಗುವ ಸಾಧ್ಯತೆ ಇದೆ. ಬೆಳೆ ಸಮೀಕ್ಷೆ ಆ್ಯಪ್​ನಲ್ಲಿ ನೋಂದಣಿಯಾಗಿರುವ ರೈತರಿಗೆ ಪರಿಹಾರ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

ಕೊಪ್ಪಳ ರೈತರಿಗೆ ಕೊರೊನಾ ಪೆಟ್ಟು: ಪರಿಹಾರಕ್ಕಾಗಿ ಕಾಯುತ್ತಿರುವ ಬೆಳೆಗಾರರು

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ ಹೂ, ಹಣ್ಣು, ತರಕಾರಿ ಬೆಳೆದು ನಷ್ಟ ಅನುಭವಿಸಿದ್ದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಿತ್ತು. ಕಳೆದ ವರ್ಷ ಜಿಲ್ಲೆಯ ಹೂ ಬೆಳೆದ 255 ರೈತರು, ಹಣ್ಣು ಬೆಳೆದ 457 ರೈತರು, ತರಕಾರಿ ಬೆಳೆದ 1,385 ರೈತರು ಸೇರಿ ತೋಟಗಾರಿಕೆ ಬೆಳೆಗಳನ್ನು ಬೆಳೆದ ಒಟ್ಟು 2097 ರೈತರಿಗೆ 1.76 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಅದರಂತೆ ಈ ವರ್ಷ ರೈತರ ಸಂಖ್ಯೆ ಹೆಚ್ಚಾಗಿದೆ. ಬೆಳೆ ಸಮೀಕ್ಷೆ ಆ್ಯಪ್​ನಲ್ಲಿ ನೊಂದಣಿ ಮಾಡಿಕೊಂಡ ರೈತರಿಗೆ ಹೆಕ್ಟೇರ್​​​ಗೆ ಗರಿಷ್ಠ 10 ಸಾವಿರ ರೂಪಾಯಿ ಪರಿಹಾರ ಧನವನ್ನು ಸರ್ಕಾರ ಘೋಷಿಸಿದೆ.

ಅದರಂತೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದ 7,415 ರೈತರು ಬೆಳೆ ಸಮೀಕ್ಷೆ ಆ್ಯಪ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 3,632 ಹಣ್ಣು ಬೆಳೆಗಾರರು, 3081 ತರಕಾರಿ ಬೆಳೆದವರು, 703 ಜನ ರೈತರು ಹೂ ಬೆಳೆದಿದ್ದಾರೆ. ಅದರಂತೆ ಪರಿಹಾರಕ್ಕೆ 5.35 ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ಒಂದು ಕೋಟಿ ರುಪಾಯಿ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗುತ್ತದೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದ್ದಾರೆ. ಕಳೆದ ವರ್ಷದ ಪರಿಹಾರದ ಹಣ ಇನ್ನೂ ಕೆಲ ರೈತರಿಗೆ ತಲುಪಿಲ್ಲ. ಬೆಳೆ ಸಮೀಕ್ಷೆಯ ತಾಂತ್ರಿಕ ತೊಂದರೆ ಹಾಗೂ ಇನ್ನಿತರ ತಾಂತ್ರಿಕ ತೊಂದರೆಗಳಿಂದ ರೈತರಿಗೆ ಪರಿಹಾರ ದೊರಕುತ್ತಿಲ್ಲ. ಅಲ್ಲದೆ ಸರ್ಕಾರ ನೀಡುವ ಪುಡಿಗಾಸಿನ ಪರಿಹಾರ ಯಾವುದಕ್ಕೆ ಆಗುತ್ತದೆ ಎನ್ನುತ್ತಾರೆ ರೈತರು‌.

Last Updated : Jun 8, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.