ಕೋಲ್ಕತ್ತಾ: ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ ಬಲಿಷ್ಠ ಕೆಕೆಆರ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.
ಟಾಸ್ ಗೆದ್ದ ಡೆಲ್ಲಿ ಕೆಕೆಆರ್ಗೆ ಬ್ಯಾಟಿಂಗ್ ಅಹ್ವಾನಿಸಿತು. ಮೊದಲ ಓವರ್ನ ಮೊದಲ ಎಸೆತದಲ್ಲೇ ಇಶಾಂತ್ ಶರ್ಮಾ ಜೋ ಡೆನ್ಲಿ ವಿಕೆಟ್ ಪಡೆದು ಕೆಕೆಆರ್ಗೆ ಆಘಾತ ನೀಡಿದರು. ನಂತರ ಗಿಲ್ ಜೊತೆ 2 ನೇ ವಿಕೆಟ್ಗೆ 63 ರನ್ಗಳ ಜೊತೆಯಾಟ ನಡೆಸಿದ ಉತ್ತಪ್ಪ ತಾಳ್ಮೆ ಆಟಕ್ಕೆ ಮೊರೆ ಹೋದರಾದರೂ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿ ಕೇವಲ 28 ರನ್ಗಳಿಗೆ ರಬಡಾಗೆ ವಿಕೆಟ್ ಒಪ್ಪಿಸಿದರು.
-
That's that from the Eden Gardens as @SDhawan25 (97*) anchors the @DelhiCapitals to a 7-wkt victory 👌👏#KKRvDC pic.twitter.com/y622siEqWB
— IndianPremierLeague (@IPL) April 12, 2019 " class="align-text-top noRightClick twitterSection" data="
">That's that from the Eden Gardens as @SDhawan25 (97*) anchors the @DelhiCapitals to a 7-wkt victory 👌👏#KKRvDC pic.twitter.com/y622siEqWB
— IndianPremierLeague (@IPL) April 12, 2019That's that from the Eden Gardens as @SDhawan25 (97*) anchors the @DelhiCapitals to a 7-wkt victory 👌👏#KKRvDC pic.twitter.com/y622siEqWB
— IndianPremierLeague (@IPL) April 12, 2019
ನಂತರ ಬಂದ ನಿತೀಸ್ ರಾಣಾ 11 ಔಟಾದರು, ಶುಬ್ಮನ್ ಗಿಲ್ 65 ರನ್ಗಳಿಸಿ ಕೀಮೋ ಪಾಲ್ಗೆ ವಿಕೆಟ್ ಒಪ್ಪಿಸಿದರೆ, ನಾಯಕ ಕಾರ್ತಿಕ್ 2 ರನ್ಗೆ ರಬಡಾ ಬೌಲಿಂಗ್ನಲ್ಲಿ ಧವನ್ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ರಸೆಲ್ ಕೇವಲ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 45 ರನ್ಗಳಿಸಿ ತಂಡದ ಮೊತ್ತೆ ಹೆಚ್ಚಿದರು. ಇನ್ನು ಬ್ರಾತ್ವೈಟ್ 6,ಚಾವ್ಲಾ 14, ಕುಲ್ದೀಪ್ 2 ರನ್ಗಳಿಸಿದರು. ಒಟ್ಟಾರೆ 20 ಓವರ್ಗಳಲ್ಲಿ ಕೆಕೆಆರ್ 178 ರನ್ಗಳಿಸಿತು.
ರಬಡಾ 2,ಇಶಾಂತ್ ಶರ್ಮಾ 1, ಕ್ರಿಸ್ ಮೋರಿಸ್ 2, ಕೀಮೋ ಪಾಲ್ 2 ವಿಕೆಟ್ ಪಡೆದರು.
179 ರನ್ಗಳ ಗುರಿ ಬೆನ್ನೆತ್ತಿದ ಡೆಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕರಾದ ಪೃಥ್ವಿ ಶಾ 14 ಕ್ಕೆ ಹಾಗೂ ನಾಯಕ ಅಯ್ಯರ್ 6 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಧವನ್ 63 ಎಸೆತಗಳಲ್ಲಿ 11 ಬೌಂಡರಿ 2 ಸಿಕ್ಸರ್ ಸಹಿತ ಔಟಾಗದೆ 97, ಪಂತ್31 ಎಸೆತಗಳಲ್ಲಿ 46 ಹಾಗೂ ಇಂಗ್ರಾಮ್ ಔಟಾಗದೆ 14 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೆಕೆಆರ್ ಪರ ಪ್ರಸಿದ್ಧ್ ಕೃಷ್ಣ ,ರಸೆಲ್ ಹಾಗೂ ನಿತೀಸ್ ರಾಣ ತಲಾ ಒಂದೊಂದು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ 8 ಅಂಕ ಸಂಪಾದಿಸಿದ ಡೆಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.