ETV Bharat / briefs

ಕೆಟ್ಟದನ್ನು ಕೇಳಲಾರೆ,ನೋಡಲಾರೆ,ಆಡಲಾರೆ-ಚುನಾವಣಾ ಫಲಿತಾಂಶದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ! - ಲೋಕಸಭೆ

ಲೋಕಸಭೆ ಫಲಿತಾಂಶಕ್ಕೂ ಮುನ್ನ ವಿದೇಶ ಪ್ರವಾಸಕ್ಕೆ ತೆರಳಿದ್ದ ಸಚಿವ ಡಿ.ಕೆ ಶಿವಕುಮಾರ್ ರಾಜ್ಯಕ್ಕೆ ಮರಳಿದ್ದಾರೆ. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ ಚುನಾವಣೆಯಲ್ಲಿ ಯಾರು ಗೆದ್ದರು ಯಾರು ಸೋತರು ಎಂಬ ಮಾಹಿತಿ ಇದೆಯಷ್ಟೇ. ಇದರ ಹೊರತಾಗಿ ನನಗೇನೂ ತಿಳಿದಿಲ್ಲ ಎಂದು ಜಾರಿಕೊಂಡರು.

ಡಿಕೆ ಶಿವಕುಮಾರ್​
author img

By

Published : May 28, 2019, 10:02 AM IST

ಬೆಂಗಳೂರು: ನನಗೆ ಚುನಾವಣೆಯಲ್ಲಿ ಯಾರು ಗೆದ್ದರು ಮತ್ತು ಯಾರು ಸೋತರು ಎಂಬ ಮಾಹಿತಿಯ ಹೊರತಾಗಿ ಬೇರೆ ಏನೂ ಗೊತ್ತಿಲ್ಲ. ಫಲಿತಾಂಶಕ್ಕಾಗಿ ನಾನು ವಾಟ್ಸಪ್‌, ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿಲ್ಲ ಎಂದು ಫಾರಿನ್ ಟ್ರಿಪ್‌ನಿಂದ ಮರಳಿ ಬಂದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.

ಡಿಕೆ ಶಿವಕುಮಾರ್​ ಪ್ರತಿಕ್ರಿಯೆ

ಲೋಕಸಭೆ ಚುನಾವಣೆಯ ಮತದಾನ ಫಲಿತಾಂಶ ಹೊರಬರುವ ಮುನ್ನವೇ ವಿದೇಶಕ್ಕೆ ಹಾರಿದ ಡಿ.ಕೆ.ಶಿ ಇವತ್ತು ಬೆಳಗ್ಗೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಾಮಾನ್ಯವಾಗಿ ಮೊಬೈಲ್ ಸಂದೇಶಗಳು ಬರುತ್ತಾ ಇರುತ್ತವೆ. ಇದರ ಹೊರತಾಗಿ ಹೆಚ್ಚೇನೂ ತಿಳಿದಿಲ್ಲ. ನಾನು ಗಾಂಧೀಜಿಯವರ ಮೂರು ಮಂಗಗಳ ತತ್ವವನ್ನು ಅನುಸರಿಸುತ್ತಿದ್ದು, ಕೆಟ್ಟದನ್ನು ಕೇಳುವುದಿಲ್ಲ,ಕೆಟ್ಟದನ್ನು ಆಡುವುದಿಲ್ಲ ಮತ್ತು ಕೆಟ್ಟದನ್ನು ನೋಡುವುದಿಲ್ಲ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಈ ಬಾರಿ ಲೋಕಸಮರದ ಫಲಿತಾಂಶದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕ್ಕಚ್ಚಿದ್ದು, ಕೇವಲ 1 ಸ್ಥಾನವನ್ನಷ್ಟೇ ಗಳಿಸಿತ್ತು. ಡಿ.ಕೆ ಶಿವಕುಮಾರ್ ಸಹೋದರ ಡಿ. ಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪುನರಾಯ್ಕೆಯಾಗಿ ಪಕ್ಷದ ಮಾನ ಉಳಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.