ETV Bharat / briefs

ನಿಲ್ಲದ 17ರ ಪೋರನ ಚಿನ್ನದ ಬೇಟೆ...  ವಿಶ್ವದಾಖಲೆಯೊಂದಿಗೆ ಬಂಗಾರ ಗೆದ್ದ ಸೌರಭ್‌ ಚೌಧರಿ - ಮನು ಬಾಕರ್

17 ವರ್ಷದ ಸೌರಭ್​ ಚೌಧರಿ ಮ್ಯೂನಿಚ್​​​ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ.

ಸೌರಭ್‌ ಚೌದರಿ
author img

By

Published : May 28, 2019, 8:53 PM IST

Updated : May 28, 2019, 9:00 PM IST

ಮ್ಯೂನಿಕ್​​: ಜರ್ಮನಿಯ ಮ್ಯೂನಿಕ್​​​ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀ. ಏರ್‌ ಪಿಸ್ತೂಲ್‌ನಲ್ಲಿ 17 ವರ್ಷದ ಸೌರಭ್​ ಚೌಧರಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಸೋಮುವಾರ ನಡೆದ 10 ಮೀ. ಏರ್‌ ಪಿಸ್ತೂಲ್‌ ಫೈನಲ್‌ನಲ್ಲಿ 246.3 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆಲ್ಲುವುದರ ಜೊತೆಗೆ, ತಮ್ಮ ಹೆಸರಿನಲ್ಲೇ ಇದ್ದ 245 ಅಂಕಗಳ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದರು. ಕಿರಿಯರ ​ ಹಾಗೂ ಹಿರಿಯರ 10 ಮೀಟರ್​ ವಿಭಾಗದಲ್ಲಿ ಎರಡು ವಿಶ್ವ ದಾಖಲೆಗಳು ಸೌರಭ್‌ ಹೆಸರಲ್ಲೇ ಇದೆ.

ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ರಾಹಿ ಸರ್ನೊಬತ್‌ ಚಿನ್ನ ಗೆದ್ದರು. ಈ ಸಾಧನೆಯ ಜೊತೆಗೆ 2020ರ ಟೋಕಿಯೋ ಒಲಿಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಂಡರು. ಇನ್ನು ಮಿಕ್ಸೆಡ್​ ಡಬಲ್ಸ್​ನಲ್ಲಿ​ ಚೌಧರಿ ಹಾಗೂ ​ ಮನು ಬಾಕರ್‌​ ಜೊತೆಗೂಡಿ ಚೀನಾದ ಜಿಯಾಂಗ್ ರಾನ್​ಕ್ಷಿಂಗ್ ಹಾಗೂ ಪಂಗ್​ ವೈ ಜೋಡಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.​​

Intro:Body:Conclusion:
Last Updated : May 28, 2019, 9:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.