ETV Bharat / briefs

IPL​ ನಲ್ಲಿ ಅಮೋಘ ಪ್ರದರ್ಶನ: ವಿಶ್ವಕಪ್​ ಸ್ಟಾಂಡ್‌​ ಬೈ ಲಿಸ್ಟ್​ನಲ್ಲಿ ಇಶಾಂತ್ ಶರ್ಮಾ

2015 ರ ವಿಶ್ವಕಪ್​ನಲ್ಲಿ ಆಯ್ಕೆಯಾಗುವ ಅರ್ಹತೆಯಿದ್ದರೂ ಗಾಯದ ಸಮಸ್ಯೆಯಿಂದ ಹೊರಬಿದ್ದ ಇಶಾಂತ್​ ಶರ್ಮಾರನ್ನು ಈ ಬಾರಿ ವಿಶ್ವಕಪ್ ತಂಡದ ಸ್ಟ್ಯಾಂಡ್​ ಬೈ ಬೌಲರ್​ ಆಗಿ ಪರಿಗಣಿಸಲಾಗಿದೆ.

ಇಶಾಂತ್​
author img

By

Published : May 7, 2019, 11:21 AM IST

ನವದೆಹಲಿ: ಇಂಗ್ಲೆಂಡ್​ನಲ್ಲಿ ನಡೆಯಲಿರುವ 12ನೇ ವಿಶ್ವಕಪ್​ಗೆ ಭಾರತ ತಂಡದ 15 ಆಟಗಾರರ ಪಟ್ಟಿಯನ್ನು ಬಿಸಿಸಿಐ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. ತಂಡದಲ್ಲಿರುವ ಆಟಗಾರರಿಗೆ ಸ್ಟಾಂಡ್‌ ಬೈ ಆಟಗಾರರಾಗಿ ಪಂತ್​, ಸೈನಿ, ರಾಯುಡು, ಅಕ್ಷರ್​ ಪಟೇಲ್​ ಬಳಿಕ ಇದೀಗ ಇಶಾಂತ್​ ಶರ್ಮಾರನ್ನೂ ಆಯ್ಕೆ ಮಾಡಲಾಗಿದೆ.

ಟೆಸ್ಟ್​ ತಂಡದ ಕಾಯಂ ಬೌಲರ್​ ಆಗಿರುವ ಇಶಾಂತ್​ ಶರ್ಮಾಗೆ ಇದುವರೆಗೂ ವಿಶ್ವಕಪ್​ನಲ್ಲಿ ಆಡುವ ಅದೃಷ್ಟ ದೊರೆತಿಲ್ಲ. 2015ರ ವಿಶ್ವಕಪ್​ನಲ್ಲಿ ತಂಡ ಸೇರುವ ಅರ್ಹತೆಯಿದ್ದರೂ ಗಾಯದ ಸಮಸ್ಯೆಯಿಂದ ಹೊರಬಿದ್ದರು. ಇದೀಗ ಭಾರತದ ವೇಗದ ಬೌಲರ್​ಗಳಲ್ಲಿ ಜಸ್ಪ್ರಿತ್​ ಬೂಮ್ರಾ ಹಾಗೂ ಭುವನೇಶ್ವರ್​ ಕುಮಾರ್​ ಕಾಯಂ ಹಾಗೂ ವಿಶ್ವದ ಅತ್ಯುತ್ತಮ ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಿಂದ 2019ರ ವಿಶ್ವಕಪ್​ಗೆ ವೇಗದ ಬೌಲರ್​ಗಳಾಗಿ ಆಯ್ಕೆಯಾಗಿದ್ದಾರೆ.

ಇವರಿಬ್ಬರಿಗೆ ಸಾಥ್‌ ನೀಡಲು ಟೆಸ್ಟ್​ ತಂಡದ ಮತ್ತೊಬ್ಬ ಬೌಲರ್​ ಮೊಹಮ್ಮದ್​ ಶಮಿ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಇಶಾಂತ್​ ಶರ್ಮಾರನ್ನು ಸ್ಟ್ಯಾಂಡ್​ ಬೈ ಆಟಗಾರನಾಗಿ ಪರಿಗಣಿಸಲಾಗಿದೆ. ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾದಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿರುವ ಆಧಾರದ ಮೇಲೆ ಇಶಾಂತ್​ಗೆ ಈ ಅವಕಾಶ ಒಲಿದುಬಂದಿದೆ. ಆದರೆ, ಬಿಸಿಸಿಐ ಮೂಲಗಳ ಪ್ರಕಾರ, ಸ್ಟ್ಯಾಂಡ್​ ಬೈ ಬೌಲರ್​ಗಳಲ್ಲೂ ಇಶಾಂತ್​ 2 ನೇ ಆಯ್ಕೆಯಾಗಲಿದ್ದಾರಂತೆ. ಮೊದಲನೇ ಆಯ್ಕೆಯಲ್ಲಿ ಯುವ ವೇಗಿ ನವದೀಪ್​ ಸೈನಿ ಇದ್ದಾರೆ.

ಇಶಾಂತ್ ಸಾಧನೆ ಏನು?

ಈ ಬಾರಿಯ ಐಪಿಎಲ್​ನಲ್ಲಿ ಇಶಾಂತ್,​ ಡೆಲ್ಲಿ ಕ್ಯಾಪಿಟಲ್​ ಪರ 10 ಪಂದ್ಯಗಳಲ್ಲಿ 7.5 ರ ಎಕಾನಮಿ ರೇಟ್‌ನಲ್ಲಿ ರನ್ ​ಬಿಟ್ಟುಕೊಟ್ಟು 10 ವಿಕೆಟ್​ ಪಡೆದಿದ್ದಾರೆ. ಭಾರತದ ಪರ 80 ಏಕದಿನ ಪಂದ್ಯಗಳಲ್ಲಿ ಇಶಾಂತ್​ ಶರ್ಮಾ 115 ವಿಕೆಟ್​ ಪಡೆದಿದ್ದಾರೆ.

ಅವಶ್ಯಕತೆ ಬಿದ್ರೆ ಮಾತ್ರ ಪ್ರಯಾಣ:

ಇಶಾಂತ್​ ಸೇರಿದಂತೆ ಸ್ಟಾಂಡ್ ​ಬೈ ಆಗಿರುವ 5 ಆಟಗಾರರು ವಿಶ್ವಕಪ್​ ತಂಡದ ಜೊತೆಗೆ ಇಂಗ್ಲೆಂಡ್​ಗೆ ಹೋಗುವುದಿಲ್ಲ. ತಂಡಕ್ಕೆ ಅವಶ್ಯಕತೆ ಇದ್ದಾಗ ಅವರನ್ನು ಕರೆಸಿಕೊಳ್ಳಲಾಗುವುದು. ಆದ್ದರಿಂದ 5 ಆಟಗಾರರು ಸಿದ್ದರಿರಾಬೇಕಾಗಿ ಬಿಸಿಸಿಐ ಸೂಚಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.