ನವದೆಹಲಿ: ಸ್ಫೋಟಕ ಆಟವಾಡುವ ಅನನುಭವಿ ಆಟಗಾರರ ದಂಡನ್ನು ಹೊದಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸ್ಪೋಟಕ ಅನುಭವಿ ಆಟಗಾರರನ್ನು ಹೊಂದಿರುವ ಸನ್ರೈಸರ್ಸ್ ತಂಡಗಳು ಇಂದು ಪಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೆಣಸಾಡುತ್ತಿವೆ.
ಮೊನ್ನೆ ನಡೆದ ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 8 ರನ್ಗೆ 7 ವಿಕೆಟ್ ಕಳೆದುಕೊಂಡು 18 ಬಾಲಿಗೆ 24 ರನ್ಗಳಿಸಲಾಗದೇ ಹೀನಾಯ ಸೋಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತುತ್ತಾಗಿತ್ತು. ಈ ಪಂದ್ಯದ ಆಘಾತದಿಂದ ಹೊರಬಂದಿರುವ ಶ್ರೇಯಸ್ ಪಡೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಇಂದಿನ ಪಂದ್ಯದಲ್ಲಿ ಬಲಿಷ್ಠ ಸನ್ರೈಸರ್ಸ್ ವಿರುದ್ದ ಗೆಲುವು ಪಡೆದು ಪ್ಲೇ ಆಫ್ ಖಚಿತಗೊಳಿಸುವ ಆಲೋಚನೆಯಲ್ಲಿದೆ.
ಇನ್ನು ತವರಿನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 118 ರನ್ಗಳಿಂದ ಗೆದ್ದಿರುವ ಸನ್ರೈಸರ್ಸ್ ಇಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಗೆಲ್ಲುವ ವಿಶ್ವಾಸದಲ್ಲಿದೆ. ಆರಂಭಿಕರಾದ ಬೈರ್ಸ್ಟೋವ್ ಹಾಗೂ ವಾರ್ನರ್ ಎಲ್ಲಾ ಪಂದ್ಯಗಳಲ್ಲೂ ಶತಕದ ಜೊತೆಯಾಟ ನಡೆಸುವ ಮೂಲಕ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.
ಇಂದಿನ ಪಂದ್ಯದಲ್ಲೂ ಡೆಲ್ಲಿ ಕ್ಯಾಪಿಟಲ್ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಆಲೋಚನೆಯಲ್ಲಿದೆ ಸನ್ರೈಸರ್ಸ್.
ಮುಖಾಮುಖಿ
ಡೆಲ್ಲಿ ಹಾಗೂ ಸನ್ರೈಸರ್ಸ್ ಐಪಿಎಲ್ನಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 4 ರಲ್ಲಿ ಡೆಲ್ಲಿ, 8ರಲ್ಲಿ ಸನ್ರೈಸರ್ಸ್ ಗೆಲುವು ಪಡೆದಿದೆ.
ಡೆಲ್ಲಿಯಲ್ಲಿ ಮುಖಾಮುಖಿ
ಪಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದಿರುವ 4 ಪಂದ್ಯಗಳಲ್ಲಿ ಎಸ್ಆರ್ಎಚ್ 3 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಡೆಲ್ಲಿ ಕೇವಲ ಒಂದೇ ಪಂದ್ಯದಲ್ಲಿ ಗೆಲುವು ಕಂಡಿದೆ.
ಎರಡು ತಂಡಗಳ ಮುಖಾಮುಖಿಯಲ್ಲಿ ಗರಿಷ್ಟ ಸ್ಕೋರರ್
ಶಿಖರ್ ಧವನ್ 357 (ಡೆಲ್ಲಿ ಕ್ಯಾಪಿಟಲ್ಸ್)
ಡೇವಿಡ್ ವಾರ್ನರ್ 276 (ಸನ್ರೈಸರ್ಸ್ ಹೈದರಾಬಾದ್)
ಗರಿಷ್ಠ ವಿಕೆಟ್ ಪಡೆದ ಬೌಲರ್
ಕ್ರಿಸ್ ಮೋರಿಸ್(5 ವಿಕೆಟ್)
ಭುವನೇಶ್ವರ್ ಕುಮಾರ್(5 ವಿಕೆಟ್)
ಕಳೆದ ಆವೃತ್ತಿಯಲ್ಲಿ ನಡೆದಿದ್ದ 2 ಪಂದ್ಯಗಳಲ್ಲೂ ಸನ್ರೈಸರ್ಸ್ ಜಯ ಸಾಧಿಸಿದೆ. 2 ಪಂದ್ಯಗಳಲ್ಲೂ ಚೇಸಿಂಗ್ ಮೂಲಕ (164 ಮತ್ತು 188) ಜಯ ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ಕಾಲಿನ್ ಇಂಗ್ರಾಮ್, ರಿಷಭ್ ಪಂತ್, ಅಕ್ಷರ್ ಪಟೇಲ್/ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾಗಿಸೋ ರಬಾಡ, ಸಂದೀಪ್ ಲೆಮಿಚಾನೆ, ಹರ್ಷಲ್ ಪಟೇಲ್, ಅಮಿತ್ ಮಿಶ್ರಾ
ಸನ್ರೈಸರ್ಸ್ ಹೈದರಾಬಾದ್
ಜಾನಿ ಬ್ಯಾರ್ಸ್ಟೋವ್, ಡೇವಿಡ್ ವಾರ್ನರ್,ಕೇನ್ ವಿಲಿಯಮ್ಸನ್/ ಮಾರ್ಟಿನ್ ಗಫ್ಲಿಲ್, ವಿಜಯ್ ಶಂಕರ್, ಮನೀಷ್ ಪಾಂಡೆ, ಯೂಸಫ್ ಪಠಾಣ್, ಶಕಿಭ್ ಹಲ್ ಹಸನ್/ಮಹಮ್ಮದ್ ನಭಿ, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ