ಓವಲ್: ವಿಶ್ವಕಪ್ ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಇಂದು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ಟೂರ್ನಿಯ ಎರಡನೇ ಪಂದ್ಯವಾಡುತ್ತಿರುವ ಭಾರತಕ್ಕೆ ಎರಡು ಪಂದ್ಯ ಗೆದ್ದಿರುವ ಫಿಂಚ್ ಪಡೆ ನಡುವೆ ರೋಚಕ ಹಣಾಹಣಿ ನಡೆಯುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಇದನ್ನೂ ಓದಿ... ಭಾರತ ವಿರುದ್ಧ ಪಾಕ್ 'ವಿಶೇಷ ಸಂಭ್ರಮ'ಕ್ಕಿಲ್ಲ ಪ್ರಧಾನಿ ಅನುಮತಿ.. ಸರ್ಫರಾಜ್ ತಂಡಕ್ಕೆ ಪಂದ್ಯಕ್ಕೂ ಮುನ್ನವೇ ಮುಖಭಂಗ!
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಆರು ವಿಕೆಟ್ಗಳಿಂದ ಭಾರತ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಅತ್ತ ಆಸೀಸ್ ಪ್ರಥಮ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ನಂತರದಲ್ಲಿ ವೆಸ್ಟ್ ಇಂಡೀಸ್ ಟೀಂ ಸೋಲಿಸಿ ಹುಮ್ಮಸ್ಸಿನಲ್ಲಿದೆ. ಓವಲ್ ಪಿಚ್ ಬ್ಯಾಟ್ಸ್ಮನ್ಗಳಿಗೆ ಪೂರಕವಾಗಿದ್ದು ಸಾಕಷ್ಟು ರನ್ ಬರುವ ನಿರೀಕ್ಷೆ ಇದೆ. ಎರಡೂ ಅಗ್ರ ತಂಡಗಳಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ದೊಡ್ಡ ಮೊತ್ತದ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ... ಸೆಂಚುರಿ ಸಂಭ್ರಮದಲ್ಲಿ ಅಂಪೈರ್ಗೆ ಗುದ್ದಿ ಬೀಳಿಸಿದ ಇಂಗ್ಲೆಂಡ್ ಬ್ಯಾಟ್ಸ್ಮನ್!
ಭಾರತ ಏಕೈಕ ಪಂದ್ಯವನ್ನಾಡಿದ್ದು ಎಲ್ಲ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅದೇ ತಂಡದೊಂದಿಗೆ ಮೈದಾನಕ್ಕಿಳಿಯುವ ಸಾಧ್ಯತೆಯೇ ಹೆಚ್ಚು. ಟೂರ್ನಿಯಲ್ಲಿ ಎರಡು ಪಂದ್ಯವನ್ನಾಡಿರುವ ಆಸ್ಟ್ರೇಲಿಯಾ ತಂಡದಲ್ಲಿ ಉಸ್ಮಾನ್ ಖವಾಜರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಖವಾಜಾರನ್ನು ಹೊರಗಿಟ್ಟರೆ ಈ ಸ್ಥಾನದಲ್ಲಿ ಶಾನ್ ಮಾರ್ಶ್ ಕಾಣಿಸಿಕೊಳ್ಳಲಿದ್ದಾರೆ.
ಸಂಭಾವ್ಯ ಭಾರತ ತಂಡ :
ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಕೆ ಎಲ್ ರಾಹುಲ್, ಎಂ ಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ.
ಸಂಭಾವ್ಯ ಆಸ್ಟ್ರೇಲಿಯಾ ತಂಡ:
ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್, ಉಸ್ಮಾನ್ ಖವಾಜಾ/ಶಾನ್ ಮಾರ್ಶ್, ಸ್ಟೀವ್ ಸ್ಮೀತ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯ್ನಿಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಥನ್ ಕೌಲ್ಟರ್ ನಿಲೆ, ಆ್ಯಡಮ್ ಜಂಪಾ, ಮಿಚೆಲ್ ಸ್ಟಾರ್ಕ್