ETV Bharat / briefs

ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳ: ಮಂಗಳೂರಿಗಿಲ್ಲ ಆತಂಕ - ತುಂಬೆ ಡ್ಯಾಂನಲ್ಲಿ ನೀರಿನ ಶೇಖರಣೆ

ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಶೇಖರಣೆ 6 ಮೀಟರ್ ಗರಿಷ್ಠ ಮಟ್ಟಕ್ಕೆ ತಲುಪಿದೆ.

tumbey
tumbey
author img

By

Published : May 6, 2021, 8:12 PM IST

ಬಂಟ್ವಾಳ(ದ.ಕ): ಕಳೆದ ಕೆಲವು ಸಮಯಗಳಿಂದ ಮಲೆನಾಡಿನ ತಪ್ಪಲು ಹಾಗೂ ಕರಾವಳಿ ಭಾಗದಲ್ಲಿ ನಿರಂತರ ವರ್ಷಧಾರೆಯಾಗುತ್ತಿರುವ ಕಾರಣ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ನೀರಿನ ಶೇಖರಣೆ 6 ಮೀ. ಗರಿಷ್ಠ ಮಟ್ಟಕ್ಕೆ ತಲುಪಿದೆ.

ನೂತನ ಡ್ಯಾಂ ನಿರ್ಮಾಣವಾದ ಬಳಿಕ ಆರಂಭದಲ್ಲಿ 5 ಮೀ. ನೀರು ಸಂಗ್ರಹದ ವ್ಯವಸ್ಥೆ ಇತ್ತು. ಆ ಬಳಿಕ ಹೆಚ್ಚುವರಿ ಭೂ ಸ್ವಾಧೀನ ಮಾಡಿ 6 ಮೀ.ವರೆಗೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿತ್ತು. ಮೇ ತಿಂಗಳಲ್ಲಿ 6 ಮೀಟರ್ ಗರಿಷ್ಠ ಮಟ್ಟ ತಲುಪಿದ್ದು ಇದೇ ಮೊದಲು.

ತುಂಬೆ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳ: ಮಂಗಳೂರಿಗಿಲ್ಲ ಆತಂಕ

ಏಪ್ರಿಲ್ ಮೊದಲ ವಾರದಿಂದಲೇ ಮಳೆ ಸುರಿಯುತ್ತಿರುವ ಕಾರಣ ಏಪ್ರಿಲ್ ಮಧ್ಯಭಾಗದಲ್ಲಿ 5.70 ಮೀಟರ್​ನಷ್ಟು ನೀರು ಸಂಗ್ರಹ ದಾಖಲಾಗಿತ್ತು. ಆ ಬಳಿಕ ಏಪ್ರಿಲ್ ಅಂತ್ಯದಲ್ಲಿ ಮತ್ತೆ ಭಾರೀ ಮಳೆ ಸುರಿದ ಕಾರಣ ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಳವಾಗಿ ನೀರಿನ ಪ್ರಮಾಣ ಗರಿಷ್ಠ ಮಟ್ಟಕ್ಕೆ ತಲುಪಿದೆ.

ನೀರು ಆರು ಮೀಟರ್​ವರೆಗೆ ಶೇಖರಣೆಯಾದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಒಂದು ಗೇಟ್​ ತೆರೆದು ನೀರನ್ನು ಹೊರಗಡೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಗೆ ಮತ್ತೆ ಗೇಟ್ ಬಂದ್ ಮಾಡಲಾಯಿತು. ಪ್ರತಿ ವರ್ಷ ಏಪ್ರಿಲ್- ಮೇ ತಿಂಗಳಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಆತಂಕ ಎದುರಾಗುತ್ತದೆ. ಮಳೆಯೂ ಬಾರದಿದ್ದರೆ ನೀರು ಪೂರೈಕೆಯಲ್ಲಿ ರೇಷನಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಸ್ವಲ್ಪವೂ ಆತಂಕ ಇಲ್ಲದೇ ನೀರು ಪೂರೈಕೆ ಸರಾಗವಾಗಿ ಮಾಡಬಹುದಾಗಿದೆ. ಇನ್ನು ಮೇ ಅಂತ್ಯದ ವರೆಗೆ ಮಳೆ ಬಾರದೇ ಇದ್ದರೂ ನೀರಿನ ಕೊರತೆ ಉಂಟಾಗದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.