ETV Bharat / briefs

ತವರಿಗೆ ಮರಳಿದ ಶ್ರೀಲಂಕಾ ತಂಡದ ಸ್ಟಾರ್​​​ ವೇಗಿ ಮಲಿಂಗಾ!

ಶ್ರೀಲಂಕಾದ ಸ್ಟಾರ್​ ಬೌಲರ್ ​ಲಸಿತ್​ ಮಲಿಂಗಾ ಅವರ ಅತ್ತೆ ನಿಧನರಾದ ಹಿನ್ನೆಲೆ ವಿಶ್ವಕಪ್​ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ದೌಡಾಯಿಸಿದ್ದಾರೆ.

malinga
author img

By

Published : Jun 11, 2019, 5:06 PM IST

ಲಂಡನ್​: ತಮ್ಮ ಅತ್ತೆ ನಿಧನರಾದ ಹಿನ್ನೆಲೆ ವಿಶ್ವಕಪ್​ ಟೂರ್ನಿಯನ್ನು ಮೊಟಕುಗೊಳಿಸಿ ಲಂಕಾದ ಸ್ಟಾರ್​ ಬೌಲರ್ ​ಲಸಿತ್​ ಮಲಿಂಗಾ ತವರಿಗೆ ದೌಡಾಯಿಸಿದ್ದಾರೆ.

ಇಂದು ಲಂಕಾ ತಂಡ ಬ್ರಿಸ್ಟೋಲ್​​​ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಬೇಕಿತ್ತು. ಆದರೆ ಮಲಿಂಗಾ ಅವರ ಅತ್ತೆ ನಿಧನದ ಸುದ್ದಿ ತಿಳಿದ ತಕ್ಷಣ ಯಾರ್ಕರ್​ ಕಿಂಗ್​ ಅನಿವಾರ್ಯವಾಗಿ ತವರಿಗೆ ಮರಳಿದ್ದಾರೆ.

ಮೊದಲೆರಡು ಪಂದ್ಯಗಳಿಂದ 35 ವರ್ಷದ ಮಲಿಂಗಾ 3 ವಿಕೆಟ್​ ಪಡೆದಿದ್ದಾರೆ. ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಪ್ರಮುಖ 3 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಅನುಭವಿ ವೇಗಿಯ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಾದ ಸ್ಥಿತಿಯಲ್ಲಿ ಶ್ರೀಲಂಕಾ ಇದ್ದು, ಇವರ ಜಾಗಕ್ಕೆ ಯಾರನ್ನು ಕಣಕ್ಕಿಳಿಸಲಿದೆ ಕಾದು ನೋಡಬೇಕಿದೆ.

ಮಲಿಂಗಾ ಜೂನ್​ 15 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರದೀಪ್​ಗೂ ಗಾಯ:

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನುವಾನ್ ಪ್ರದೀಪ್​ ಕೂಡ ತರಬೇತಿ ವೇಳೆ ಗಾಯಗೊಂಡಿದ್ದು, ಇಡೀ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ. ಇವರ ಬದಲಿಗೆ 26 ವರ್ಷದ ಕಾಸುನ್​ ರಜಿತಾ ತಂಡ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.