ETV Bharat / briefs

ಭಾರತದೆದುರು ಪಾಕ್​ 10 ಪಂದ್ಯಗಳಲ್ಲಿ ಮೂರರಲ್ಲೂ ಗೆಲ್ಲುವುದು ಕಷ್ಟ: ಕಪಿಲ್ ​ದೇವ್​ - ಮ್ಯಾಂಚೆಸ್ಟರ್

ಪ್ರಸ್ತುತ ಈಗಿರುವ ಪಾಕಿಸ್ತಾನ ತಂಡಕ್ಕಿಂತ ಭಾರತ ತಂಡ ತುಂಬಾ ಬಲಿಷ್ಠವಾಗಿದೆ. ಎರಡು ತಂಡಗಳು 10 ಬಾರಿ ಮುಖಾಮುಖಿಯಾದರೆ ಕೊಹ್ಲಿಪಡೆ 7 ಪಂದ್ಯಗಳಲ್ಲಿ ಗೆಲುವು ಸಾಧಿಸಲಿದೆ ಎಂದು 1983 ರ ವಿಶ್ವಕಪ್​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ತಿಳಿಸಿದ್ದಾರೆ.

kpail
author img

By

Published : Jun 15, 2019, 10:58 AM IST

ಮ್ಯಾಂಚೆಸ್ಟರ್​: ನಾನು ಕ್ರಿಕೆಟ್​ ಆಡುತ್ತಿದ್ದ ಕಾಲದಲ್ಲಿ ಪಾಕಿಸ್ತಾನ ತಂಡ ಬಲಿಷ್ಠ ತಂಡವಾಗಿತ್ತು. ಆದರೆ, ಈಗಿರುವ ತಂಡ ಭಾರತವನ್ನು ಮಣಿಸಲು ಅಸಾಧ್ಯವಾದ ಮಾತೇ ಸರಿ ಎಂದು ಕಪಿಲ್​ ದೇವ್​ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಇರುವ ಪಾಕಿಸ್ತಾನ ತಂಡಕ್ಕಿಂತ ಭಾರತ ತಂಡ ತುಂಬಾ ಬಲಿಷ್ಠವಾಗಿದೆ. ಎರಡೂ ತಂಡಗಳು 10 ಬಾರಿ ಮುಖಾಮುಖಿಯಾದರೆ ಕೊಹ್ಲಿಪಡೆ 7 ಪಂದ್ಯಗಳಲ್ಲಿ ಗೆಲುವು ಸಾಧಿಸಲಿದೆ ಎಂದು 1983 ರ ವಿಶ್ವಕಪ್​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ತಿಳಿಸಿದ್ದಾರೆ.

ನಾನೊಬ್ಬ ಭಾರತೀಯನಾಗಿ ಪಾಕಿಸ್ತಾನ ತಂಡಕ್ಕಿಂತ ಭಾರತ ತಂಡವೇ ಪ್ರಬಲ ಎಂದು ಹೇಳುತ್ತಿಲ್ಲ. ಕಳೆದ 15 ವರ್ಷಗಳ ಭಾರತೀಯ ಕ್ರಿಕೆಟ್​ನಲ್ಲಿ ಈಗಿರುವ ತಂಡಕ್ಕೆ ಬೌಲರ್​ಗಳು ಮ್ಯಾಚ್​ ವಿನ್ನರ್​ ಆಗುತ್ತಿದ್ದಾರೆ. ಬುಮ್ರಾರಂಥ ವೇಗಿಗಳು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಹೀಗಾಗಿ ಭಾರತವೇ ಫೇವ್​ರಿಟ್​ ಎಂದರು.

ಬುಮ್ರಾರ ಬಗ್ಗೆ ತಪ್ಪಾಗಿ ಯೋಚಿಸಿದ್ದೆ!

ಮೊದಲ ಬಾರಿ ಬುಮ್ರಾರನ್ನು ನೋಡಿದ ನನಗೆ ಆತನೊಬ್ಬ ಸಾಮಾನ್ಯ ಬೌಲರ್​ ರೀತಿ ಕಾಣಿಸಿದ್ದ, ಅವನಲ್ಲಿ ಯಾವುದೇ ರೀತಿಯ ವಿಶೇಷ ಕೌಶಲ್ಯಗಳು ಕಂಡಿರಲಿಲ್ಲ. ಆದರೆ, ಇದೀಗ ನನ್ನ ಅನಿಸಿಕೆ ಅಥವಾ ಊಹೆ ಸುಳ್ಳಾಗಿದೆ. ಬುಮ್ರಾ ಒಂದು ಅದ್ಭುತ, ತುಂಬಾ ಕಡಿಮೆ ಸಮಯದಲ್ಲಿ ತನ್ನ ಬೌಲಿಂಗ್​ ತಾಕತ್ತನ್ನು ವಿಶ್ವಕ್ಕೆ ತೋರಿಸಿದ್ದಾರೆ. ವಿಶ್ವ ಶ್ರೇಷ್ಠ ಹಾಗೂ ನಂ 1 ಬೌಲರ್​ ಆಗಿರುವ ಬುಮ್ರಾ ಮುಂದಿನ ಕೆಲವು ವರ್ಷಗಳ ಕಾಲ ಫಿಟ್​ ಆಗಿರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.