ಕಾರವಾರ: ಮೀನು ಸಾಗಾಟ ಮಾಡುವ ಕಂಟೇನರ್ನಲ್ಲಿ ಗೋವಾ ಮದ್ಯ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಸಿಬ್ಬಂದಿ 2,552 ಲೀಟರ್ ಮದ್ಯ ಸಹಿತ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಗೋವಾದಿಂದ ಆಗಮಿಸಿದ್ದ ಮೀನಿನ ಕಂಟೇನರ್ನಲ್ಲಿ ಗೋವಾ ಮದ್ಯ ಸಾಗಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಅಬಕಾರಿ ಸಿಬ್ಬಂದಿ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದರು. ಈ ವೇಳೆ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 2552.400 ಲೀಟರ್ ಮದ್ಯ ಪತ್ತೆಯಾಗಿದೆ.
ಈ ವೇಳೆ ಆಂದ್ರಪ್ರದೇಶ ಮೂಲದ ವಾಹನ ಚಾಲಕ ಮನೋಜ್ ಪುನಿವರ್ತಿ ಬಂಧಿಸಲಾಗಿದೆ. ವಾಹನ ಹಾಗೂ ಮದ್ಯದ ಮೌಲ್ಯ ಒಟ್ಟು 20,22,980 ರೂ ಎಂದು ಅಂದಾಜಿಸಲಾಗಿದೆ.