ಮುಂಬೈ: ವಿಶ್ವಕಪ್ ಸಮರಕ್ಕೆ ದಿನಗಣನೆ ಶುರುವಾಗಿದ್ದು, ವಿಶ್ವಸಮರ ಮೇ 30ರಂದು ಅತಿಥೇಯ ಇಂಗ್ಲೆಂಡ್ ಹಾಗೂ ಚೋಕರ್ಸ್ ಎಂದೇ ಕುಖ್ಯಾತಿಯಾಗಿರುವ ದ. ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.
ಈ ವಿಶ್ವಕಪ್ನಂತಹ ಪಂದ್ಯಗಳಲ್ಲಿ ಪ್ರತಿಯೊಂದು ದಾಖಲೆಯೂ ಮಹತ್ವ ಪಡೆದುಕೊಂಡಿರುತ್ತದೆ. ಈ ಹಿಂದಿನ 11 ವಿಶ್ವಕಪ್ಗಳಲ್ಲಿ ವೇಗದ ಶತಕ ಮತ್ತು ವೇಗದ ಅರ್ಧ ಶತಕ ಸಿಡಿಸಿರುವವರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಐರ್ಲೆಂಡ್ನ ಆಲ್ರೌಂಡರ್ ಕೆವಿನ್ ಒಬ್ರಿಯಾನ್ 2011ರಲ್ಲಿ ಭಾರತದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ ದಾಖಲಿಸಿ ವಿಶ್ವಕಪ್ನಲ್ಲೇ ವೇಗದ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಪಂದ್ಯದಲ್ಲಿ ಐರ್ಲೆಂಡ್ ಇಂಗ್ಲೆಂಡ್ ವಿರುದ್ಧ 324 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ವಿಶ್ವದಾಖಲೆ ನಿರ್ಮಿಸಿತ್ತು.
ಆಟಗಾರ | ದೇಶ | ವಿರುದ್ಧ | ಎಸೆತ |
ಕೆವಿನ್ ಒಬ್ರಿಯಾನ್ | ಐರ್ಲೆಂಡ್ | ಇಂಗ್ಲೆಂಡ್ | 50 |
ಗ್ಲೆನ್ ಮ್ಯಾಕ್ಸ್ವೆಲ್ | ಆಸ್ಟ್ರೇಲಿಯಾ | ಶ್ರೀಲಂಕಾ | 51 |
ಎಬಿ ಡಿ ವಿಲಿಯರ್ಸ್ | ದ. ಆಫ್ರಿಕಾ | ವೆಸ್ಟ್ ಇಂಡೀಸ್ | 52 |
ಮ್ಯಾಥ್ಯೂ ಹೇಡನ್ | ಆಸ್ಟ್ರೇಲಿಯಾ | ದ.ಆಫ್ರಿಕಾ | 66 |
ಜಾನ್ ಡೆವಿಸನ್ | ಕೆನಡಾ | ವೆಸ್ಟ್ ಇಂಡೀಸ್ | 67 |
ಕುಮಾರ್ ಸಂಗಾಕ್ಕರ | ಶ್ರೀಲಂಕಾ | ಇಂಗ್ಲೆಂಡ್ | 70 |
ಇನ್ನು ಅರ್ಧಶತಕದಲ್ಲಿ ವೇಗದ ಅರ್ಧಶತಕ ಸಿಡಿಸಿರುವ ದಾಖಲೆ ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕ್ಕಲಮ್ ಹೆಸರಿನಲ್ಲಿದೆ. ಇವರು 2015ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧವೇ 18 ಎಸೆತಗಳಲ್ಲಿ ಅರ್ಧಶತಕಸಿಡಿಸಿದ್ದರು.
ಬ್ರೆಂಡನ್ ಮೆಕ್ಕಲಮ್ | ನ್ಯೂಜಿಲ್ಯಾಂಡ್ | ಇಂಗ್ಲೆಂಡ್ | 18 |
ಬ್ರೆಂಡನ್ ಮೆಕ್ಕಲಮ್ | ನ್ಯೂಜಿಲ್ಯಾಂಡ್ | ಕೆನಡಾ | 20 |
ಮಾರ್ಕ್ ಬೌಷರ್ | ದ.ಆಫ್ರಿಕಾ | ನೆದರ್ಲ್ಯಾಂಡ್ಸ್ | 21 |
ಮಾರ್ಕ್ ಬೌಷರ್ | ದ.ಆಫ್ರಿಕಾ | ವೆಸ್ಟ್ ಇಂಡೀಸ್ | 22 |
ಬ್ರಿಯಾನ್ ಲಾರಾ | ವೆಸ್ಟ್ ಇಂಡೀಸ್ | ಕೆನಡಾ | 23 |
ಜಾನ್ ಡೇವಿಸನ್ | ಕೆನಡಾ | ನ್ಯೂಜಿಲ್ಯಾಂಡ್ | 23 |
ಕೀರನ್ ಪೊಲಾರ್ಡ್ | ವೆಸ್ಟ್ ಇಂಡೀಸ್ | ನೆದರ್ಲ್ಯಾಂಡ್ಸ್ | 23 |