ETV Bharat / briefs

ನಾಯಿ - ಬೆಕ್ಕಿಗೆ ಕೊರೊನಾ ವ್ಯಾಕ್ಸಿನ್​ ಹೆಸರಿಟ್ಟ ಖ್ಯಾತ ವೈದ್ಯನಿಂದ ಜಾಗೃತಿ... - ಉಪೇಂದ್ರ ಅಭಿನಯದ ಐ ಲವ್​ ಯೂ ಸಿನಿಮಾ

ಪ್ರೀತಿಯ ನಾಯಿ ಹಾಗೂ ಬೆಕ್ಕಿನ ಮರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಅಂತ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಕಿರಣ್ ತೋಟಂಬೈಲ್ ಹೆಸರಿಟ್ಟಿದ್ದಾರೆ.

ವ್ಯಾಕ್ಸಿನ್​ ಹೆಸರಿಟ್ಟ ವೈದ್ಯ
ವ್ಯಾಕ್ಸಿನ್​ ಹೆಸರಿಟ್ಟ ವೈದ್ಯ
author img

By

Published : May 31, 2021, 3:25 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ಖ್ಯಾತ ವೈದ್ಯರೊಬ್ಬರು ತಮ್ಮ ಮುದ್ದಿನ ಸೈಬೀರಿಯನ್ ಹಸ್ಕಿ ನಾಯಿ ಹಾಗೂ ಪರ್ಷಿಯನ್ ಕ್ಯಾಟ್ ಬೆಕ್ಕಿಗೆ ಕೊರೊನಾ ವ್ಯಾಕ್ಸಿನ್ ಹೆಸರಿಟ್ಟಿದ್ದಾರೆ. ಸೈಬೀರಿಯನ್ ಹಸ್ಕಿ ನಾಯಿಗೆ ಕೋವಿಶೀಲ್ಡ್ ಹಾಗೂ ಪರ್ಷಿಯನ್ ಕ್ಯಾಟ್​ಗೆ ಕೋವ್ಯಾಕ್ಸಿನ್ ಎಂದು ನಾಮಕರಣ ಮಾಡಿದ್ದಾರೆ.

ಪ್ರೀತಿಯ ನಾಯಿ ಹಾಗೂ ಬೆಕ್ಕಿನ ಮರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಅಂತ ಹೆಸರಿಟ್ಟಿರುವುದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಕಿರಣ್ ತೋಟಂಬೈಲ್. ವೃತ್ತಿಯಲ್ಲಿ ವೈದ್ಯರಾಗಿ, ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ. ಉಪೇಂದ್ರ ಅಭಿನಯದ ಐ ಲವ್​ ಯೂ ಸಿನಿಮಾಗೆ ಸಂಗೀತ ನಿರ್ದೇಶನ ಕೂಡ ಡಾಕ್ಟರ್ ಕಿರಣ್ ಮಾಡಿದ್ದಾರೆ.

ಚಿ.ತು ಯುವಕರ ಸಂಘ, ಒಲವೇ ಮಂದಾರ-2 ಸಿನಿಮಾಗಳಿಗೆ ನಿರ್ದೇಶಕರು ಆಗಿರುವ ಕಿರಣ್ ಸದ್ಯ ನಗರದ ಪ್ರತಿಷ್ಠಿತ ಬಿಜಿಎಸ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ವೈದ್ಯ ವೃತ್ತಿಯಲ್ಲಿ ನಿರತರಾಗಿದ್ದಾರೆ. ಈಗ ತಮ್ಮ ಮುದ್ದಿನ ಬೆಕ್ಕು ಮತ್ತು ನಾಯಿಗೆ ವ್ಯಾಕ್ಸಿನ್​ಗಳ ಹೆಸರಿಟ್ಟು ವಿಶೇಷ ಜಾಗೃತಿ ಮೂಡಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.