ಲಂಡನ್: ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಚಾಂಪಿಯನ್ ಆಗುವ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯುವ ಕನಸು ಕಾಣುತ್ತಿದೆ. 4 ವರ್ಷಗಳಿಂದ ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ತಂಡದಲ್ಲಿ ಹಲವು ವಿಶೇಷತೆಯಿದೆ.
ಕ್ರಿಕೆಟ್ ತವರೂರಾದ ಇಂಗ್ಲೆಂಡ್ ತಂಡ 15 ಸದಸ್ಯರ ಬಲಿಷ್ಠ ತಂಡವನ್ನು ಕಟ್ಟಿದೆ. ಆದರೆ, ಇಂಗ್ಲೆಂಡ್ಗೆ ವಿಶ್ವಕಪ್ ತಂದುಕೊಡಬಲ್ಲ 5 ಆಟಗಾರು ವಿದೇಶಗಳಲ್ಲಿ ಹುಟ್ಟಿದವರಾಗಿದ್ದಾರೆ ಎಂಬುದು ಅಷ್ಟೇ ಸತ್ಯ. ನ್ಯೂಜಿಲ್ಯಾಂಡ್, ದ.ಆಫ್ರಿಕಾ, ಐರ್ಲೆಂಡ್, ವೆಸ್ಟ್ ಇಂಡೀಸ್ನಲ್ಲಿ ಹುಟ್ಟಿದವರು ಇಂಗ್ಲೆಂಡ್ ತಂಡದ ಆಧಾರ ಸ್ಥಂಭಗಳಾಗಿದ್ದಾರೆ. ಇವರೆಲ್ಲರೂ ಕ್ರಿಕೆಟ್ಗಾಗಿ ತಮ್ಮ ಸ್ವಂತ ನೆಲವನ್ನು ಬಿಟ್ಟು ಇಂಗ್ಲೆಂಡ್ಗೆ ವಲಸೆ ಬಂದವರಾಗಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿರುವ ವಿದೇಶದಲ್ಲಿ ಹುಟ್ಟಿದ ಆಟಗಾರರು
ಇಯಾನ್ ಮಾರ್ಗನ್ (ಐರ್ಲೆಂಡ್)
ಬೆನ್ಸ್ಟೋಕ್ಸ್(ನ್ಯೂಜಿಲ್ಯಾಂಡ್)
ಜಾಸನ್ ರಾಯ್(ದ.ಆಫ್ರಿಕಾ)
ಟಾಮ್ ಕರ್ರನ್ (ದ.ಆಫ್ರಿಕಾ)
ಜೋಫ್ರಾ ಆರ್ಚರ್ (ವೆಸ್ಟ್ ಇಂಡೀಸ್)
ಅಂಡರ್ 19 ವಿಶ್ವಕಪ್ ತಂಡದಲ್ಲಿ ಒಟ್ಟಿಗೆ ಆಡಿದ 4 ಆಟಗಾರರು
2010 ರ ಅಂಡರ್ 19 ವಿಶ್ವಕಪ್ ತಂಡದಲ್ಲಿ ಆಡಿದ್ದ ಜೇಮ್ಸ್ ವಿನ್ಸ್, ಜೋ ರೂಟ್, ಜೋಸ್ ಬಟ್ಲರ್ ಹಾಗೂ ಬೆನ್ಸ್ಟೋಕ್ಸ್ 9 ವರ್ಷಗಳ ನಂತರ ಸೀನಿಯರ್ ವಿಶ್ವಕಪ್ ತಂಡದಲ್ಲೂ ಸ್ಥಾನಪಡೆದುಕೊಂಡಿದ್ದಾರೆ. ಅಂದು ತಂಡದ ಉಪನಾಯಕನಾಗಿದ್ದ ಜೇಮ್ಸ್ ವಿನ್ಸ್ ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದು ವಿಶ್ವಕಪ್ ತಂಡದಿಂದ ಹೊರಬಿದ್ದ ಅಲೆಕ್ಸ್ ಹೇಲ್ಸ್ ಬದಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.