ETV Bharat / briefs

ತುಮಕೂರಿನಲ್ಲೂ ಮನಿ ಫ್ರಾಡ್​... ಬಡ್ಡಿ ಆಸೆ ತೋರಿಸಿ ಹಣ ದೋಚಿದ ವಂಚಕ

author img

By

Published : Jun 15, 2019, 5:32 AM IST

Updated : Jun 15, 2019, 9:52 AM IST

ತುಮಕೂರಿನ ಸದಾಶಿವ ನಗರದ ನಿವಾಸಿ ಆಗಿರುವ ಅಸ್ಲಾಂ 2017ರಲ್ಲಿ ಈಜಿಮೈಂಡ್ ಮಾರ್ಕೆಟಿಂಗ್ ಸಂಸ್ಥೆ ಪ್ರಾರಂಭಿಸಿದ್ದ. ಶಾದಿಮಹಲ್ ಸಮೀಪದ ಹೆಚ್.ಎಂ ಕಾಂಪ್ಲೆಕ್ಸ್​ನಲ್ಲಿ ಕಚೇರಿ ತೆರೆದಿದ್ದು, ಅಲ್ಪಸಂಖ್ಯಾತ ಮುಖಂಡರ ಮೂಲಕ ಮುಸ್ಲಿಂ ಸಮುದಾಯದವರಿಂದ ತನ್ನ ಸಂಸ್ಥೆಗೆ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಿಸಿಕೊಂಡಿದ್ದ. ಜನರಲ್ ಪ್ಲಾನ್, ಎಜುಕೇಷನ್ ಪ್ಲಾನ್ ಮತ್ತು ಮದುವೆ ಪ್ಲಾನ್ ಎಂಬ ಮೂರು ಯೋಜನೆಗಳಡಿ ಜನರು ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದ.

ವಂಚನೆಗೆ ಒಳಗಾದವರು

ತುಮಕೂರು: ನಗರದಲ್ಲಿ ಮೊಹಮದ್ ಅಸ್ಲಾಂ ಎಂಬಾತ ಈಜಿಮೈಂಡ್ ಇಂಡಿಯಾ ಪ್ರೈ. ಲಿ ಸಂಸ್ಥೆಯ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.

2017 ರಿಂದ 2018ರ ಡಿಸೆಂಬರ್​ವರೆಗೆ ಸಾರ್ವಜನಿಕರಿಗೆ ಹೂಡಿಕೆಗೆ ತಕ್ಕಂತೆ ಬಡ್ಡಿ ಹಣ ನೀಡಿ ಗ್ರಾಹಕರ ವಿಶ್ವಾಸ ಗಳಿಸಿದ್ದನು. ಅಲ್ಲದೆ ಏಕಾಏಕಿ 1 ಲಕ್ಷ ರೂ ಹೂಡಿಕೆ ಮಾಡಿದರೆ 4 ತಿಂಗಳು ಹತ್ತು ದಿನದ ಅವಧಿಗೆ 10 ಲಕ್ಷ ರೂ. ನೀಡುವುದಾಗಿ ಹೇಳಿ ಗ್ರಾಹಕರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದ. ಸಂಸ್ಥೆ ಪ್ರಾರಂಭವಾದಾಗಿನಿಂದ 2018ರ ಡಿಸೆಂಬರ್ ತಿಂಗಳವರೆಗೆ ತನ್ನ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡಿ ನಂಬಿಕೆ ಉಳಿಸಿಕೊಂಡಿದೆ. ಅದೇ ರೀತಿ ಅಪಾರ ಪ್ರಮಾಣದ ಡೆಪಾಸಿಟ್ ಹಣವನ್ನು ಕೂಡ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಹೂಡಿಕೆದಾರರಿಂದ ತಿಳಿದು ಬಂದಿದೆ.

ಈ ಸಂಸ್ಥೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದವರಿಂದಲೇ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೊದಲ ಯೋಜನೆ ಜನರಲ್ ಪ್ಲಾನ್ ತಿಂಗಳ ಯೋಜನೆಯಲ್ಲಿ ಗ್ರಾಹಕ ಒಮ್ಮೆ 50 ಸಾವಿರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಮೂರು ಸಾವಿರ ಮತ್ತು 1 ಲಕ್ಷ ಹೂಡಿಕೆ ಮಾಡಿದರೆ 6000, 2 ಲಕ್ಷಕ್ಕೆ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ, 5 ಲಕ್ಷಕ್ಕೆ 25ರಿಂದ 30 ಸಾವಿರ ರೂಪಾಯಿ ಬಡ್ಡಿ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದ.

ತುಮಕೂರಿನಲ್ಲೂ ಮನಿ ಫ್ರಾಡ್

ಈ ನಾಲ್ಕು ತಿಂಗಳ ಅಂತರದಲ್ಲಿ ಒಂದು ಲಕ್ಷದಿಂದ ಐವತ್ತು ಲಕ್ಷದವರೆಗೂ ಹಣವನ್ನು ನೂರಾರು ಗ್ರಾಹಕರು ಹೂಡಿಕೆ ಮಾಡಿದ್ದರು. ನಂತರ ಅಸ್ಲಾಂ ತಾನು ನೀಡಿದ ಭರವಸೆಯಂತೆ 2019 ರ ಮಾರ್ಚ್​ನಲ್ಲಿ ಗ್ರಾಹಕರಿಗೆ ಹಣವನ್ನು ಹಿಂತಿರುಗಿಸದೆ ಕೋಟ್ಯಂತರ ರೂಪಾಯಿ ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸುತ್ತಿದ್ದಾರೆ.

2019 ರ ಜನವರಿ ತಿಂಗಳಿನಿಂದ ಅಸ್ಲಂ ಕಚೇರಿಯ ಬಾಗಿಲನ್ನು ಹಾಕಿಕೊಂಡು ಕಣ್ಮರೆಯಾಗಿದ್ದಾನೆ. ಈತನಿಂದ ಮೋಸ ಹೋಗಿರುವುದಾಗಿ ಅರಿತ ಗ್ರಾಹಕರು ನಿತ್ಯ ಕಚೇರಿ ಬಳಿ ಬಂದು ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ. ಅಲ್ಲದೆ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೂಡಿಕೆದಾರರಿಂದ ಮಾಹಿತಿ ಪಡೆದರು.

ವಾಟ್ಸಪ್ ನಲ್ಲಿ ಸ್ಪಷ್ಟನೆ ನೀಡಿರುವ ಅಸ್ಲಂ

ಇನ್ನೊಂದೆಡೆ ಗೌಪ್ಯ ಸ್ಥಳದಲ್ಲಿ ಕುಳಿತು ವಾಟ್ಸಪ್​ನಲ್ಲಿ ವಿಡಿಯೋ ಕಳಿಸಿರುವ ಅಸ್ಲಾಂ, ತುಮಕೂರಿನಿಂದ ಓಡಿಹೋಗಲು ಬೆಂಗಳೂರಿನ ಏರ್ಪೋರ್ಟ್ ಹೊರಗೆ ಅಸದ್ ಎಂಬಾತ ಸಹಾಯ ಮಾಡಿದ್ದಾನೆ ಎಂದು ಸ್ಪಷ್ಟೀಕರಣ ನೀಡಿರುವ ವಿಡಿಯೋ ವಾಟ್ಸಪ್​ನಲ್ಲಿ ಹರಿದಾಡುತ್ತಿದೆ.

Intro:ಈಜಿ ಮೈಂಡ್ ಇಂಡಿಯಾ ಹೆಸರಿನಲ್ಲಿ ಸಾರ್ವಜನಿಕರಿಗೆ ಭಾರಿ ಮೋಸ......
ತುಮಕೂರಿನಲ್ಲಿ ಬೆಳಕಿಗೆ ಬಂದ ಪ್ರಕರಣ.....

ತುಮಕೂರು
ಮೊಹಮದ್ ಅಸ್ಲಾಂ ಎಂಬಾತ ತುಮಕೂರಿನಲ್ಲಿ ಈಜಿಮೈಂಡ್ ಇಂಡಿಯಾ ಪ್ರೈ. ಲಿ ಸಂಸ್ಥೆಯ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂ ಸಂಗ್ರಹಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.
ಈಜಿಮೈಂಡ್ ಮಾರ್ಕೆಟಿಂಗ್ ಹೆಸರಿನಲ್ಲಿ ಜನರಲ್ ಪ್ಲಾನ್, ಎಜುಕೇಷನ್ ಪ್ಲಾನ್ ಮತ್ತು ಮದುವೆ ಪ್ಲಾನ್ ಎಂಬ ಮೂರು ಯೋಜನೆಗಳಡಿ ಜನರು ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದನು. ತುಮಕೂರಿನ ಸದಾಶಿವ ನಗರ ನಿವಾಸಿ ಆಗಿರುವ ಅಸ್ಲಾಂ ಶಾದಿಮಹಲ್ ಸಮೀಪ ಎಚ್ ಎಂ ಕಾಂಪ್ಲೆಕ್ಸ್ ನಲ್ಲಿ ಕಚೇರಿ ತೆರೆದಿದ್ದನು. 2017ರಲ್ಲಿ ಸಂಸ್ಥೆಯನ್ನು ಪ್ರಾರಂಭಿಸಿದ್ದ ಈತ ಅಲ್ಪಸಂಖ್ಯಾತ ಮುಖಂಡರ ಮೂಲಕ ಮುಸ್ಲಿಂ ಸಮುದಾಯದವರಿಂದ ತನ್ನ ಸಂಸ್ಥೆಗೆ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡಿಸಿಕೊಂಡಿದ್ದನು. ಸಂಸ್ಥೆ ಪ್ರಾರಂಭವಾದಾಗಿನಿಂದ 2018ರ ಡಿಸೆಂಬರ್ ತಿಂಗಳ ವರೆಗೆ ತನ್ನ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡಿ ನಂಬಿಕೆ ಉಳಿಸಿಕೊಂಡಿದ್ದಾರೆ ಅದೇ ರೀತಿ ಅಪಾರ ಪ್ರಮಾಣದ ಡೆಪಾಸಿಟ್ ಹಣವನ್ನು ಕೂಡ ಸಂಗ್ರಹಿಸಿದನು.
ಈ ಸಂಸ್ಥೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತರ ಸಮುದಾಯದ ಅವರಿಂದಲೇ ಕೋಟ್ಯಂತರ ರೂಪಾಯಿ ಹಣವನ್ನು ಒಬ್ಬರು ಮತ್ತು ಹೊಲ ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ಅಲ್ಲದೆ ಅದರಿಂದ ಬರುವ ಬಡ್ಡಿ ಹಣವನ್ನು ಕೊಡುವುದಾಗಿ ಐದು ವರ್ಷದ ಕಾಲಾವಧಿಗೆ ಹೂಡಿಕೆ ಮಾಡಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮೊದಲ ಯೋಜನೆ ಜನರಲ್ ಪ್ಲಾನ್ ತಿಂಗಳ ಯೋಜನೆಯಲ್ಲಿ ಗ್ರಾಹಕ ಒಮ್ಮೆ 50 ಸಾವಿರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಮೂರು ಸಾವಿರ ಮತ್ತು 1 ಲಕ್ಷ ಹೂಡಿಕೆ ಮಾಡಿದರೆ 6000, 2 ಲಕ್ಷಕ್ಕೆ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ, 5 ಲಕ್ಷಕ್ಕೆ 25ರಿಂದ 30 ಸಾವಿರ ರೂಪಾಯಿ ಬಡ್ಡಿ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದನು.
2017 ರಿಂದ 20 18ರ ಡಿಸೆಂಬರ್ ವರೆಗೆ ಸಾರ್ವಜನಿಕರಿಗೆ ಹೂಡಿಕೆಗೆ ತಕ್ಕಂತೆ ಬಡ್ಡಿ ಹಣ ನೀಡಿ ಗ್ರಾಹಕರ ವಿಶ್ವಾಸ ಗಳಿಸಿದ್ದನು. ಅಲ್ಲದೆ ಏಕಾಏಕಿ 1 ಲಕ್ಷ ರೂ ಹೂಡಿಕೆ ಮಾಡಿದರೆ 4 ತಿಂಗಳು ಹತ್ತು ದಿನದ ಅವಧಿಗೆ 10 ಲಕ್ಷ ರೂ ನೀಡುವುದಾಗಿ ಹೇಳಿ ಗ್ರಾಹಕರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದನು.
ಈ ನಾಲ್ಕು ತಿಂಗಳ ಅಂತರದಲ್ಲಿ ಒಂದು ಲಕ್ಷದಿಂದ ಐವತ್ತು ಲಕ್ಷದವರೆಗೂ ಹಣವನ್ನು ನೂರಾರು ಗ್ರಾಹಕರು ಹೂಡಿಕೆ ಮಾಡಿದ್ದರು. ನಂತರ ಅಸ್ಲಾಂ ತಾನು ನೀಡಿದ ಭರವಸೆಯಂತೆ 2019 ರ ಮಾರ್ಚ್ ನಲ್ಲಿ ಗ್ರಾಹಕರಿಗೆ ಹಣವನ್ನು ಹಿಂತಿರುಗಿಸದೆ ಕೋಟ್ಯಂತರ ರೂಪಾಯಿ ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸುತ್ತಿದ್ದಾರೆ.

2019 ರ ಜನವರಿ ತಿಂಗಳಿನಿಂದ ಅಸ್ಲಂ ಕಚೇರಿಯ ಬಾಗಿಲನ್ನು ಹಾಕಿಕೊಂಡು ಕಣ್ಮರೆಯಾಗಿದ್ದಾನೆ. ಬಾರಿ ಮೋಸ ಹೋಗಿರುವುದಾಗಿ ಆರಿತ ಗ್ರಾಹಕರು ನಿತ್ಯ ಕಚೇರಿ ಬಳಿ ಬಂದು ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ. ಅಲ್ಲದೆ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹೂಡಿಕೆದಾರರಿಂದ ಮಾಹಿತಿ ಪಡೆದರು.

ವಾಟ್ಸಪ್ ನಲ್ಲಿ ಸ್ಪಷ್ಟನೆ ನೀಡಿರುವ ಅಸ್ಲಂ.....

ಇನ್ನೊಂದೆಡೆ ಗೊಪ್ಯ ಸ್ಥಳದಲ್ಲಿ ಕುಳಿತು ವಾಟ್ಸಪ್ ನಲ್ಲಿ ವಿಡಿಯೋ ಗಳಿಸಿರುವ ಅಸ್ಲಾಂ,
ಹೂಡಿಕೆದಾರರ ಹಣವು ಅಸದ್ ಎಂಬಾತನ ಬಳಿ 3 ಕಾರು ಮತ್ತು 50 ಬಿಟ್-ಕಾಯಿನ್ ಇದೆ.
ಶಿಮಾಸ್ ಎಂಬುವನ ಬಳಿ 30 ಬಿಟ್-ಕಾಯಿನ್ ಮತ್ತು ಒಂದು ಕಾರು ಇದೆ ಎಂದು ಹೇಳಿದ್ದಾನೆ.
ಅಲ್ಲದೆ ತುಮಕೂರಿನಿಂದ ಓಡಿಹೋಗಲು ಬೆಂಗಳೂರಿನ ಏರ್ಪೋರ್ಟ್ ಹೊರಗೆ ಅಸದ್ ಎಂಬಾತನ ಸಹಾಯ ಮಾಡಿದ್ದಾನೆ ಎಂದು ಸ್ಪಷ್ಟೀಕರಣ ನೀಡಿರುವ ವಾಟ್ಸಪ್ ವಿಡಿಯೋ ಹರಿದಾಡುತ್ತಿದೆ

ಬೈಟ್ : ಅಸ್ಲಂ, ಮೋಸ ಮಾಡಿದ ವ್ಯಕ್ತಿ(ಟೋಪಿ ಹಾಕಿದ್ದಾನೆ...ವಾಟ್ಸ್ಪ್ ವೀಡಿಯೊ)
ಬೈಟ್ : ರಫಿಯ ಭಾನು, ಮೋಸಕ್ಕೊಳಗಾದವರು
ಬೈಟ್: ಸೈಯದ್ ಅನ್ವರಿ ಕೌಸರ್, ಮೋಸಕ್ಕೊಳಗಾದವರು
ಬೈಟ್ : ಶಮಿ, ಸ್ಥಳೀಯರು(ಬಿಳಿ ಬಟ್ಟೆ ಧರಿಸಿರುವರು)

Body:ತುಮಕೂರು

Conclusion:
Last Updated : Jun 15, 2019, 9:52 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.