ETV Bharat / briefs

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿ ದಾಂಧಲೆ: ಕಂಪ್ಯೂಟರ್, ವೆಂಟಿಲೇಟರ್​ಗೆ ಹಾನಿ - Mentally disturbed Covid patient create nuisance

ಮಾನಸಿಕ ಸ್ಥಿಮಿತ ಕಳೆದುಕೊಂಡ ಸೋಂಕಿತ ವ್ಯಕ್ತಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಂಧಲೆ ನಡೆಸಿ ಕಂಪ್ಯೂಟರ್​, ವೆಂಟಿಲೇಟರ್​ಗಳನ್ನು ಜಖಂಗೊಳಿಸಿರುವುದಾಗಿ ತಿಳಿದುಬಂದಿದೆ.

ಚಾಮರಾಜನಗರ
ಚಾಮರಾಜನಗರ
author img

By

Published : Jun 9, 2021, 3:15 PM IST

ಚಾಮರಾಜನಗರ: ಇತ್ತೀಚೆಗೆ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ ಬಳಿಕ ಜಿಲ್ಲಾಸ್ಪತ್ರೆ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಸೋಂಕಿತ ವ್ಯಕ್ತಿವೋರ್ವ ದಾಂಧಲೆ ನಡೆಸಿ, ಆತಂಕ ಮೂಡಿಸಿದ ಘಟನೆ ಇಂದು ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ 30 ವರ್ಷದ ವ್ಯಕ್ತಿಗೆ ಕೊರೊನಾ ದೃಢವಾಗಿ ಜಿಲ್ಲಾಸ್ಪತ್ರೆಗೆ ಕಳೆದ 30 ರಂದು ದಾಖಲಾಗಿದ್ದ. ಇಂದು ಮಾನಸಿಕ ಸ್ಥಿಮಿತ ಕಳೆದುಕೊಂಡು ಕಂಪ್ಯೂಟರ್​ಗಳು, ವೆಂಟಿಲೇಟರ್​ಗಳನ್ನು ಹಾನಿ ಮಾಡಿರುವುದಾಗಿ ತಿಳಿದುಬಂದಿದೆ. ಜೊತೆಗೆ, ತನಗೆ ಕೊರೊನಾ ಇಲ್ಲದಿದ್ದರೂ ಏಕೆ ಇಟ್ಟುಕೊಂಡಿದ್ದೀರಿ ಎಂದು ವೈದ್ಯ ಶಿವಣ್ಣ, ದಾದಿಯರನ್ನು ಸೋಂಕಿತ ಎಳೆದಾಡಿದ್ದಾನೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಸದ್ಯ, ಮಾನಸಿಕ ಅಸ್ವಸ್ಥ ಸೋಂಕಿತನನ್ನು ಆ್ಯಂಬುಲೆನ್ಸ್​ನಲ್ಲಿ ನಿಮ್ಹಾನ್ಸ್​ಗೆ ರವಾನಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗಿದ್ದ ಆತಂಕದ ವಾತಾವರಣ ತಿಳಿಯಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.