ETV Bharat / briefs

ದಿನವಿಡೀ ಗಾಡಿ ತಳ್ಳುವುದೇ ಕಾಯಕ: ಕೊಳ್ಳುವವರಿಲ್ಲದೇ ಬಸವಳಿದ ಹೂವಿನ ವ್ಯಾಪಾರಿಗಳು

ತಳ್ಳುಗಾಡಿ ಗಳ ಮೂಲಕವೇ ಹೂವು ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡಿದ್ದವರ ಬವಣೆ ಹೇಳತೀರದಾಗಿದೆ. ಅಲಂಕಾರಕ್ಕೆ ಪೂಜೆಗೆ ಮತ್ತು ವಿಶೇಷ ಸಮಾರಂಭಗಳಿಗೆ ಬಳಕೆಯಾಗುತ್ತಿದ್ದ ಹೂವುಗಳನ್ನು ಕೇಳುವವರೇ ಈಗ ಇಲ್ಲದಂತಾಗಿದೆ.

 corona lockdown effect to flower sellers

author img

By

Published : May 13, 2021, 10:37 PM IST

ಬೆಂಗಳೂರು: ಮಹಾನಗರದಲ್ಲಿ ತಳ್ಳುಗಾಡಿ ಮೂಲಕ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ದಿನದಿಂದ ದಿನಕ್ಕೆ ವೃತ್ತಿ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸುತ್ತಿದೆ.

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಘೋಷಣೆಯಾದ ಲಾಕ್ ಡೌನ್ ನಿಂದ ಹಲವು ಕ್ಷೇತ್ರದ ಜನರ ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದೆ.

ತಳ್ಳುಗಾಡಿ ಗಳ ಮೂಲಕವೇ ಹೂವು ಹಣ್ಣು ತರಕಾರಿ ವ್ಯಾಪಾರ ಮಾಡಿಕೊಂಡಿದ್ದವರ ಬವಣೆಯಂತೂ ಹೇಳತೀರದಾಗಿದೆ. ಅಗತ್ಯ ವಸ್ತುಗಳಲ್ಲಿ ಹಣ್ಣು ಮತ್ತು ತರಕಾರಿ ಬರುವ ಹಿನ್ನೆಲೆ ಇದರ ವ್ಯಾಪಾರಿಗಳಿಗೆ ಅಷ್ಟೇನೂ ಸಮಸ್ಯೆ ಎದುರಾಗಿಲ್ಲ. ಆದರೆ, ಅಲಂಕಾರಕ್ಕೆ ಪೂಜೆಗೆ ಮತ್ತು ವಿಶೇಷ ಸಮಾರಂಭಗಳಿಗೆ ಬಳಕೆಯಾಗುತ್ತಿದ್ದ ಹೂವುಗಳನ್ನು ಕೇಳುವವರು ಇಲ್ಲದಂತಾಗಿದೆ.

ಲಾಕ್ಡೌನ್ ಘೋಷಣೆಯಾದ ಹಿನ್ನೆಲೆ ಜೀವನ ನಿರ್ವಹಣೆಯೇ ಕಷ್ಟಕರವಾಗಿರುವ ಸಂದರ್ಭದಲ್ಲಿ ಸಾಕಷ್ಟು ಜನ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ವಿಶೇಷ ಸಮಾರಂಭಗಳು ನಡೆಯುತ್ತಿಲ್ಲ. ದೈನಂದಿನ ಬಳಕೆಗೆ ಹೂವು ಕೊಳ್ಳುವವರು ಆಸಕ್ತಿ ಕಡಿಮೆ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆ ತಳ್ಳುಗಾಡಿ ಮೂಲಕ ಹೂವನ್ನು ಮಾರುತ್ತಿರುವ ವ್ಯಾಪಾರಿಗಳು ಬೆಳಗಿನಿಂದ ಸಂಜೆಯವರೆಗೆ ನಗರದ ವಿವಿಧ ಗಲ್ಲಿಗಳನ್ನು ಸುತ್ತಿದರೂ ತಳ್ಳುಗಾಡಿಯಲ್ಲಿ ಇರುವ ಪ್ರಮಾಣ ಅರ್ಧದಷ್ಟೂ ಖಾಲಿ ಆಗುತ್ತಿಲ್ಲ. ತಮ್ಮ ಬವಣೆ ಹೇಳತೀರದಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಲಾಕ್ಡೌನ್ ಘೋಷಿಸಿದ ನಂತರವೂ ತಳ್ಳುಗಾಡಿ ವ್ಯಾಪಾರಿಗಳು ಕಾರ್ಯನಿರ್ವಹಣೆಗೆ ಅವಕಾಶ ನೀಡಿರುವ ಸರ್ಕಾರ ಮಾರುಕಟ್ಟೆಗಳನ್ನು ಬಂದ್ ಮಾಡಿದೆ. ಇದು ಹೂವಿನ ವ್ಯಾಪಾರಿಗಳಿಗೆ ಸಾಕಷ್ಟು ಇಕ್ಕಟ್ಟು ಉಂಟುಮಾಡಿದೆ. ದೈನಂದಿನ ಅಗತ್ಯಕ್ಕೆ ಕೊಳ್ಳುವ ಹೂವು ಯಾವ ಕಡೆ ಸಿಗುತ್ತದೆ ಎನ್ನುವುದನ್ನು ಹುಡುಕುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯ ಅಕ್ಕಪಕ್ಕದ ಪ್ರದೇಶಗಳು, ಸುಮನಹಳ್ಳಿ ಸೇರಿದಂತೆ ನಗರದ ಹೊರವಲಯದ ವಿವಿಧ ಮಾರುಕಟ್ಟೆಗಳು, ನಗರದ ಬಂಬು ಬಜಾರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸುತ್ತಿ ಎಲ್ಲಿ ಸಿಗುತ್ತದೆಯೋ ಅಲ್ಲಿ ದುಬಾರಿ ಬೆಲೆಗೆ ಖರೀದಿಸಿ ಮಾರುವ ಅನಿವಾರ್ಯ ಎದುರಾಗಿದೆ.

ದಿನಕ್ಕೊಂದು ಕಡೆ ಹೂವನ್ನ ಖರೀದಿಸಲು ತಳ್ಳುಗಾಡಿ ವ್ಯಾಪಾರಿಗಳು ಬೆಳಗಿನ ಜಾವ 3 ಗಂಟೆಗೆ ಎದ್ದು ಪರಿಚಯದವರ ಕಾರನ್ನೇರಿ ಸುತ್ತುವ ಅನಿವಾರ್ಯತೆ ಇದೆ. ನಗರದ ವಿವಿಧೆಡೆ ಸುತ್ತಿ ಹೂವನ್ನು ಖರೀದಿಸಿ ತಾವಿರುವ ಪ್ರದೇಶಕ್ಕೆ ವಾಪಸಾಗುವ ಹೊತ್ತಿಗೆ 200ರಿಂದ 300 ರೂ. ಖರ್ಚಾಗಿರುತ್ತದೆ. ಇನ್ನು ಹೂವಿನ ಬೆಲೆ ಕೂಡ ದುಬಾರಿಯಾಗಿರುತ್ತದೆ. ಎಲ್ಲರೂ ಕೊಳ್ಳುಗರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಹೆಚ್ಚಿನ ಹೂವು ಕೊಳ್ಳಲು ಭಯ. ಕೊಂಡು ತಂದರು ಅರ್ಧದಷ್ಟು ಸಂಜೆಯ ಹೊತ್ತಿಗೆ ಖಾಲಿಯಾಗದೆ ಚರಂಡಿಗೆ ಸುರಿಯಬೇಕಾಗುತ್ತದೆ.

ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆ ನಮ್ಮ ಜೀವನ ಸಾಕಷ್ಟು ಸಮಸ್ಯೆಗೆ ಸಿಲುಕಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಳೆದ ದೀಪಾವಳಿ ಹಾಗೂ ಇತರ ಹಬ್ಬಗಳ ಸಂದರ್ಭದಲ್ಲಿ ಪ್ರತಿ ಕೆಜಿ ಹೂವಿನ ಬೆಲೆ 400 ರೂ. ವರೆಗೂ ಹೋಗಿ ತಲುಪಿತ್ತು. ಆದರೆ, ಇಂದು ಮಾರುಕಟ್ಟೆಯಲ್ಲಿ ತಂದ ದುಬಾರಿಯಾಗಿದ್ದವು ಪ್ರತಿ ಕೆಜಿಗೆ 30ರಿಂದ 40 ರೂ.ಗೆ ಮಾಡುವ ಅನಿವಾರ್ಯತೆ ಎದುರಾಗಿದೆ. ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ಹೂವು ಲಭ್ಯವಿತ್ತು. ಆದರೆ, ಕೊಳ್ಳುಗರು ಇಲ್ಲದ ಹಿನ್ನೆಲೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೆವು. ಆದರೆ, ಇದೀಗ ನಾವು ಕೊಂಡು ತರುವುದೇ ದೊಡ್ಡ ಸಾಹಸವಾಗಿದೆ. ಹಿನ್ನೆಲೆ ಪ್ರತಿ ಕೆಜಿಗೆ 100 ರೂ. ಗೆ ಮಾರುತ್ತಿದ್ದೇವೆ. 80ರಿಂದ 90 ರೂ. ಬಂದರು ಕೊಟ್ಟು ಬಿಡುತ್ತೇವೆ. ಪರಿಸ್ಥಿತಿ ಬಹಳ ಕಷ್ಟಕರವಾಗಿದೆ. ಜನ ಹೂವನ್ನ ಕೊಳ್ಳಲು ಹಿಂದೇಟು ಹಾಕುತ್ತಿರುವುದು ನಮ್ಮ ಸಮಸ್ಯೆಗೆ ಕಾರಣ ಎಂದಿದ್ದಾರೆ.

ಇಂದು ಬೆಂಗಳೂರಿನ ಬಂಬು ಬಜಾರ್ ನಿಂದ ಹೂವನ್ನ ತಂದಿದ್ದೇನೆ. ನಾಳೆ ಪೊಲೀಸರು ಅಲ್ಲಿಂದ ಎಲ್ಲಿಗೆ ಓಡಿಸುತ್ತಾರೋ ಗೊತ್ತಿಲ್ಲ. ಮತ್ತೆ ನಾಳೆ ಹುಡುಕಾಟ ನಡೆಸಬೇಕು. ಲಾಕ್ಡೌನ್ ನಮ್ಮ ಬದುಕನ್ನು ಸಾಕಷ್ಟು ದಯನೀಯವಾಗಿಸಿದೆ ಎನ್ನುತ್ತಾರೆ ಹೊಸಕೆರೆಹಳ್ಳಿಯ ತಳ್ಳುಗಾಡಿ ಹೂವಿನ ವ್ಯಾಪಾರಿ ಚಂದ್ರಪ್ಪ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.