ಬೀಜಿಂಗ್ : ಚೀನಾದಲ್ಲಿ ದಂಪತಿಗಳು ಇನ್ಮುಂದೆ ಮೂರು ಮಕ್ಕಳನ್ನು ಹೊಂದಬಹುದು ಎಂದು ಸರ್ಕಾರ ಕುಟುಂಬ ಯೋಜನೆ ನೀತಿಯನ್ನು ಅಧಿಕೃತವಾಗಿ ಸಡಿಲಿಸಿದೆ.
ದೇಶದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆಯು ಹೆಚ್ಚಾಗುತ್ತಿದ್ದು, ಇದು ರಾಷ್ಟ್ರದ ಮೇಲೆ ತನ್ನದೇ ಆದ ಪರಿಣಾಮ ಬೀರಲಿರುವ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ.
ಮಾತೃತ್ವ ರಜೆ ಮತ್ತು ಮಾತೃತ್ವ ವಿಮಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಪೋಷಕ ನೀತಿಗಳನ್ನು ಬಲಪಡಿಸಲು ಚೀನಾದ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಚೀನಾ ಸುಮಾರು 40 ವರ್ಷಗಳ ಕಾಲ 'ಒಂದೇ ಮಗು' ನೀತಿಯನ್ನು ಕಡ್ಡಾಯವಾಗಿ ಅನುಸರಿಕೊಂಡು ಬಂದಿತ್ತು. ಆದರೆ, ಜನರಿಗೆ ವಯಸ್ಸಾಗುತ್ತಿರುವುದರಿಂದ ಅದು, ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತವಾಗಿತ್ತು.