ಚಾಮರಾಜನಗರ: ಲೋಕಸಮರದ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ ಹಾಗೂ ಇಲ್ಲಿವರೆಗೂ ಗೆದ್ದವರು ಜಿಲ್ಲೆಯಲ್ಲಿ ಮನೆ ಮಾಡಿಲ್ಲ.
ಹೌದು, ಕ್ಷೇತ್ರದಿಂದ 5 ಬಾರಿ ಸಂಸದರಾಗಿದ್ದ ವಿ.ಶ್ರೀ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಬಿಎಸ್ಪಿ ಅಭ್ಯರ್ಥಿ ಡಾ. ಶಿವಕುಮಾರ್ ಅವರಿಗೆ ತಮ್ಮ ಮತ ತಮಗೆ ಹಾಕುವ ಭಾಗ್ಯ ಇಲ್ಲದಾಗಿದೆ. ಸಂಸದ ಆರ್.ಧ್ರುವನಾರಾಯಣ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.
5 ಬಾರಿ ಸಂಸದರಾಗಿದ್ದ ವಿ.ಶ್ರೀ ಹಾಗೂ ಹ್ಯಾಟ್ರಿಕ್ ಬಾರಿಸಲು ತವಕಿಸುತ್ತಿರುವ ಧ್ರುವನಾರಾಯಣ ಇಬ್ಬರೂ ಮೈಸೂರಿನಲ್ಲೇ ವಾಸವಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಡಾ. ಶಿವಕುಮಾರ್ ಮಂಡ್ಯ ಜಿಲ್ಲೆಯವರಾಗಿದ್ದು ಚಾಮರಾಜನಗರದಲ್ಲಿ ಮನೆ ಹೊಂದಿಲ್ಲ.
ಒಟ್ಟಿನಲ್ಲಿ ಚುನಾವಣೆ ಬಳಿಕ ಗೆದ್ದ ಸಂಸದರು ಜಿಲ್ಲಾ ಕೇಂದ್ರ ನಿವಾಸಿಯಾಗಿ ಸಾರ್ವಜನಿಕರಿಗೆ ಹತ್ತಿರವಾಗಲಿ ಎಂಬುದು ಮತದಾರರ ಒತ್ತಾಸೆ.