ETV Bharat / briefs

ಲೋಕಸಭೆ ಫೈಟ್​​ನಲ್ಲಿ ಮೋದಿ ವಿಕ್ರಮ,ಗೆಲುವಿನ ಬಗ್ಗೆ ಬಿಜೆಪಿ ಭೀಷ್ಮನ ಮಾತು - ಬಿಜೆಪಿ ಭೀಷ್ಮ

ಪಕ್ಷ ನಿಜಕ್ಕೂ ಅಭೂತಪೂರ್ವ ಸಾಧನೆ ಮಾಡಿದ್ದು, ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಅಡ್ವಾಣಿ ತಿಳಿಸಿದ್ದಾರೆ.

ಎಲ್​ ಕೆ ಅಡ್ವಾಣಿ
author img

By

Published : May 25, 2019, 9:26 PM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದ್ದು, ಏಕಾಂಗಿಯಾಗಿ ಬರೋಬ್ಬರಿ 303 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಬಿಜೆಪಿ ಸಾಧನೆಯಿಂದ ಹಿರಿಯ ನಾಯಕ ಎಲ್.​ಕೆ ಅಡ್ವಾಣಿ ಸಂತಸಗೊಂಡಿದ್ದಾರೆ.

ಪಕ್ಷದ ಗೆಲುವಿನ ಬಗ್ಗೆ ಅಡ್ವಾಣಿ ಸಂತಸ

ಸಂಸತ್​ ಭವನದ ಸೆಂಟ್ರಲ್​​ ಹಾಲ್​​ನಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಎಲ್.​ಕೆ ಅಡ್ವಾಣಿ ಭಾಗಿಯಾಗಿದ್ದರು. ಸಭೆ ಮುಗಿದ ಬಳಿಕ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಹಿರಿಯ ನಾಯಕ, ಪಕ್ಷ 353 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿರುವುದಕ್ಕೆ ನನಗೆ ಖುಷಿ ಇದೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು.

ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ ನರೇಂದ್ರ ಮೋದಿ ತಮ್ಮ ರಾಜಕೀಯ ಗುರು ಅಡ್ವಾಣಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಜತೆಗೆ ಅಡ್ವಾಣಿ, ಮುರಳಿ ಮನೋಹರ್​ ಜೋಶಿ ಹಾಗೂ ವಾಜಪೇಯಿ ಪಕ್ಷವನ್ನು ನಡೆಸಿಕೊಂಡು ಬಂದ ರೀತಿಯಲ್ಲೇ ನಾವು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.

Intro:Body:

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದ್ದು, ಏಕಾಂಗಿಯಾಗಿ ಬರೋಬ್ಬರಿ 303 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ. ಬಿಜೆಪಿ ಈ ಸಾಧನೆಯಿಂದ ಬಿಜೆಪಿ ಭೀಷ್ಮ ಎಲ್​ಕೆ ಅಡ್ವಾಣಿ ಸಂತಸಗೊಂಡಿದ್ದಾರೆ. 

ಸಂಸತ್​ ಭವನದ ಸೆಂಟ್ರಲ್​​ ಹಾಲ್​​ನಲ್ಲಿ ನಡೆದ ಸಂಸದೀಯ ಸಭೆಯಲ್ಲಿ ಎಲ್​ಕೆ ಅಡ್ವಾಣಿ ಭಾಗಿಯಾಗಿದ್ದರು. ಸಭೆ ಮುಗಿದ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಹಿರಿಯ ನಾಯಕ, ಪಕ್ಷ 353 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿರುವುದಕ್ಕೆ ನನಗೆ ಖುಷಿ ಇದೆ. ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ.ಅಭೂತಪೂರ್ವ ಒಂದು ಪರಿಣಾಮ ನಮ್ಮ ಪಕ್ಷಕ್ಕೆ ಸಿಕ್ಕಿದ್ದು, ನಿಜವಾಗಲೂ ಹೆಮ್ಮೆಯ ಸಂಗತಿ ಎಂದಿದ್ದಾರೆ.  

ಇನ್ನು ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ ನರೇಂದ್ರ ಮೋದಿ ತಮ್ಮ ಗುರು ಅಡ್ವಾಣಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಕೂಡ ಪಡೆದುಕೊಂಡರು. ಜತೆಗೆ ಅಡ್ವಾಣಿ, ಮುರುಳಿ ಮನೋಹರ್​ ಜೋಶಿ ಹಾಗೂ ವಾಜಪೇಯಿ ಪಕ್ಷವನ್ನ ನಡೆಸುಕೊಂಡು ಬಂದ ರೀತಿಯಲ್ಲೇ ನಾವು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.