ETV Bharat / briefs

ಬೈರುತ್ ಸ್ಫೋಟ : 16 ಬಂದರು ಸಿಬ್ಬಂದಿ ವಶಕ್ಕೆ - ಮಿಲಿಟರಿ ನ್ಯಾಯಾಲಯ ನ್ಯಾಯಾಧೀಶ

ಬೈರುತ್ ಬಂದರಿನಲ್ಲಿ ಸಂಭವಿಸಿದ ಸ್ಪೋಟದ ಕುರಿತಂತೆ 16 ಅಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಲೆಬನಾನಿನ ಸ್ಫೋಟ
ಲೆಬನಾನಿನ ಸ್ಫೋಟ
author img

By

Published : Aug 7, 2020, 9:54 AM IST

ಬೈರುತ್: ಇಲ್ಲಿನ ಬಂದರಿನಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 16 ಉದ್ಯೋಗಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೆಬನಾನ್ ಸರ್ಕಾರಿ ಸುದ್ದಿ ಸಂಸ್ಥೆ ಹೇಳಿದೆ.

ಎರಡು ದಿನಗಳ ಹಿಂದೆ ಬೈರುತ್ ಬಂದರಿನಲ್ಲಿ ಸಂಭವಿಸಿದ ಸ್ಪೋಟದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ಅಲ್ಲಿನ 16 ಜನ ಬಂದರು ಮತ್ತು ಕಸ್ಟಮ್ಸ್ ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ ಈವರೆಗೆ 18 ಜನರನ್ನು ವಿಚಾರಣೆ ನಡೆಸಿದ್ದು, ಇವರೆಲ್ಲರೂ ಬಂದರು ಮತ್ತು ಕಸ್ಟಮ್ಸ್ ಅಧಿಕಾರಿಗಳಾಗಿದ್ದಾರೆ. ಹಾಗೆಯೇ ಸುಮಾರು 2,750 ಟನ್ ಸ್ಫೋಟಕ ವಸ್ತುಗಳನ್ನು ವರ್ಷಗಳ ಕಾಲ ಸಂಗ್ರಹಿಸಿರುವ ಹ್ಯಾಂಗರ್‌ನಲ್ಲಿ ನಿರ್ವಹಣೆಯ ಉಸ್ತುವಾರಿ ಹೊಂದಿರುವ ವ್ಯಕ್ತಿಗಳಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ ಎಂದು ಮಿಲಿಟರಿ ನ್ಯಾಯಾಲಯದ ಸರ್ಕಾರಿ ಆಯುಕ್ತ ನ್ಯಾಯಾಧೀಶ ಫಾಡಿ ಅಕಿಕಿ ಅವರು ಉಲ್ಲೇಖಿಸಿದ್ದಾರೆ.

ಮಂಗಳವಾರ ಸಂಜೆ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲೇ ತನಿಖೆ ಆರಂಭವಾಗಿದ್ದು, ಸ್ಫೋಟಕ್ಕೆ ಕಾರಣರಾದವರೆಲ್ಲರನ್ನೂ ವಿಚಾರಣೆ ಮಾಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.